‘ಇಸ್ಲಾಮ್ ಪರಕೀಯ ಆಕ್ರಮಣಕಾರರ ಜೊತೆಗೆ ಭಾರತಕ್ಕೆ ಬಂತು, ಎಂಬ ಇತಿಹಾಸವನ್ನು ಹೇಗಿದೆಯೋ ಹಾಗೆ ಹೇಳುವುದು ಅಗತ್ಯ ! ಮೋಹನ ಭಾಗವತ, ಸರಸಂಘಚಾಲಕರು, ರಾ. ಸ್ವ. ಸಂಘ

*ಬ್ರಿಟಿಷರೇ ಹಿಂದೂ-ಮುಸಲ್ಮಾನರ ನಡುವೆ ಕಲಹ ಮಾಡಿಸಿದರು !

ಮುಂಬಯಿ – ಮುಸಲ್ಮಾನ ಸಮಾಜದಲ್ಲಿನ ತಿಳುವಳಿಕೆಯುಳ್ಳ ಹಾಗೂ ವಿಚಾರೀ ಮುಖಂಡರು ಈಗಲಾದರೂ ಅಲ್ಪಬುದ್ಧಿಯ ಹೇಳಿಕೆಗಳನ್ನು ವಿರೋಧಿಸಬೇಕು. ಅವರು ಈ ಕೆಲಸವನ್ನು ದೀರ್ಘಕಾಲದಿಂದ ಹಾಗೂ ಪ್ರಯತ್ನಪೂರ್ವಕವಾಗಿ ಮಾಡಬೇಕಾಯಿತು. ಇದು ನಮ್ಮ ಎಲ್ಲದ್ದಕ್ಕಿಂತ ದೊಡ್ಡ ಪರೀಕ್ಷೆಯಾಗಿದ್ದು ಅದಕ್ಕಾಗಿ ಹೆಚ್ಚು ಸಮಯ ನೀಡಬೇಕಾಗುವುದು.

‘ಇಸ್ಲಾಮ್ ಇದು ಪರಕೀಯ ಆಕ್ರಮಕರ ಜೊತೆಗೆಭಾರತಕ್ಕೆ ಬಂತು, ಎಂಬುದು ಇತಿಹಾಸವಾಗಿದ್ದು ಅದನ್ನು ಇದ್ದ ಹಾಗೆ ಹೇಳುವ ಅವಶ್ಯಕತೆಯಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ. ಮೋಹನ ಭಾಗವತರವರು ಪ್ರತಿಪಾದಿಸಿದರು. ‘ಗ್ಲೋಬಲ ಸ್ಟ್ರಾಟೆಜಿಕ ಪಾಲಿಸಿ ಫೌಂಡೇಶನನ (ಜಾಗತಿಕ ಧೋರಣಾತ್ಮಕ ನೀತಿ ಸಂಸ್ಥೆಯ) ವತಿಯಿಂದ ಮುಂಬೈನಲ್ಲಿ ಆಯೋಜಿಸಲಾದ ‘ರಾಷ್ಟ್ರ-ಪ್ರಥಮ- ರಾಷ್ಟ್ರಸರ್ವತೋಪರಿ ಎಂಬ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು.

ಈ ಪರಿಷತ್ತಿಗೆ ಕೇರಳದ ರಾಜ್ಯಪಾಲರಾದ ಅರಿಫ ಮಹಂಮದ ಖಾನ, ಕಾಶ್ಮೀರ ಕೇಂದ್ರೀಯ ವಿದ್ಯಾಲಯದ ಕುಲಪತಿ ಲೆಫ್ಟನೆಂಟ ಜನರಲ ಸಯ್ಯದ ಅಟಾ ಹುಸೇನ ಸೇರಿದಂತೆ ದೇಶದಾದ್ಯಂತದ ವಿವಿಧ ಮುಸಲ್ಮಾನ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಭಾಗವತರವರು ಅವರೆಲ್ಲರ ಜೊತೆಗೆ ಸಂವಾದ ಸಾಧಿಸಿದರು.

ಆ ಸಮಯದಲ್ಲಿ ಮಾರ್ಗದರ್ಶನ ನೀಡುವಾಗ ಭಾಗವತರವರು ಹೀಗೆಂದರು, “ಭಾರತದಲ್ಲಿರುವ ಹಿಂದೂ ಹಾಗೂ ಮುಸಲ್ಮಾನರ ಪೂರ್ವಜರು ಸಮಾನರಾಗಿದ್ದಾರೆ. ಮುಸಲ್ಮಾನ ಮುಖಂಡರು ಕೇವಲ ಮುಸಲ್ಮಾನರಷ್ಟೇ ಅಲ್ಲ, ಬದಲಾಗಿ ಭಾರತದ ವರ್ಚಸ್ಸಿನ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು. ದೇಶದ ಪ್ರಗತಿ ಹಾಗೂ ವಿಕಾಸಕ್ಕಾಗಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು. ಮಾತೃಭೂಮಿ, ಪೂರ್ವಜ ಹಾಗೂ ಭಾರತೀಯ ಸಂಸ್ಕೃತಿ ಅಂದರೆ ‘ಹಿಂದೂ ಆಗಿದೆ! ‘ಹಿಂದೂ ಇದು ಜಾತಿಯಾಗಿರದೆ ಭಾಷಾವಾಚಕ ಸಂಜ್ಞೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿ ಹಾಗೂ ವಿಕಾಸಕ್ಕಾಗಿ ಮಾರ್ಗದಶನ ಮಾಡುವಂತಹ ಪರಂಪರೆ ಇದಾಗಿದೆ. ಅದನ್ನು ಒಪ್ಪುವ ಪ್ರತಿಯೊಬ್ಬರೂ ಭಾರತೀಯನು ಹಿಂದೂವೇ ಆಗಿದ್ದಾರೆ. ಭಾಗವತರವರು ಮುಂದೆ, ‘ಬ್ರಿಟಿಷರು ಗೊಂದಲ ಹುಟ್ಟಿಸಿ ಹಿಂದೂ ಹಾಗೂ ಮುಸಲ್ಮಾನರು ಹೊಡೆದಾಡಿಕೊಳ್ಳುವಂತೆ ಮಾಡಿದರು. ಬ್ರಿಟಿಷರು ಮುಸಲ್ಮಾನರಿಗೆ, ಅವರೇನಾದರೂ ಹಿಂದೂಗಳೊಂದಿಗೆ ಇರಲು ತೀರ್ಮಾನಿಸಿದರೆ ಅವರಿಗೆ ಏನೂ ಕೂಡ ಸಿಗುವುದಿಲ್ಲ. ಕೇವಲ ಹಿಂದೂಗಳನ್ನೇ ಆರಿಸಲಾಗುತ್ತದೆ. ಬ್ರಿಟಿಷರ ಈ ಧೋರಣೆಯಿಂದಲೇ ಮುಸಲ್ಮಾನರನ್ನು ಸ್ವತಂತ್ರ್ ರಾಷ್ಟ್ರದ ಬೇಡಿಕೆಗಾಗಿ ಪ್ರೇರೇಪಿಸಿದರು. ಎಂದೂ ಹೇಳಿದರು.