‘ಇನ್ಫೋಸಿಸ್’ನಿಂದ ನಕ್ಸಲವಾದಿ ಹಾಗೂ ಸಾಮ್ಯವಾದಿಗಳಿಗೆ ಸಹಾಯ ! – ‘ಪಾಂಚಜನ್ಯ’ ನಿಯತಕಾಲಿಕೆಯ ಆರೋಪ

ಇನ್ಫೋಸಿಸ್’ನಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಸಿದ್ಧ ಸಂಸ್ಥೆಯ ಮೇಲಿನ ಈ ರೀತಿಯ ಆರೋಪವು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಕೇಂದ್ರ ಸರಕಾರವು ಆ ಆರೋಪಗಳ ಸತ್ಯತೆಯನ್ನು ಪರಿಶೀಲಿಸುವ ಅವಶ್ಯಕತೆಯಿದೆ ! – ಸಂಪಾದಕರು 

ನವ ದೆಹಲಿ – ‘ಇನ್ಫೋಸಿಸ್’ ಸಂಸ್ಥೆಯು ದೇಶವಿರೋಧಿ ಶಕ್ತಿಗಳಿಗೆ ಸಂಬಂಧಿಸಿದ್ದು ನಕ್ಸಲವಾದಿ, ಸಾಮ್ಯವಾದಿಗಳು ಹಾಗೂ ರಾಷ್ಟ್ರದ್ರೋಹಿ ಗುಂಪಿಗೆ ಸಹಾಯ ಮಾಡುತ್ತದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ‘ಪಾಂಚಜನ್ಯ’ ಎಂಬ ನಿಯತಕಾಲಿಕೆಯು ತನ್ನ ತಾಜಾ ಸಂಚಿಕೆಯಲ್ಲಿ ಆರೋಪಿಸಿದೆ. ‘ಇನ್ಫೋಸಿಸ್ ಸಂಸ್ಥೆಯ ಮಾಧ್ಯಮದಿಂದ ರಾಷ್ಟ್ರವಿರೋಧಿ ಶಕ್ತಿಗಳು ಭಾರತದ ಆರ್ಥಿಕ ಹಿತಸಂಬಂಧವನ್ನು ನೋಯಿಸಲು ಪ್ರಯತ್ನಿಸುತ್ತಿವೆಯೇನು?’ ಎಂಬ ಪ್ರಶ್ನೆಯನ್ನು ಆ ಮಾಸಿಕೆಯ ಮೂಲಕ ಉಪಸ್ಥಿತ ಪಡಿಸಲಾಗಿದೆ. ಈ ನಿಯತಕಾಲಿಕೆಯಲ್ಲಿ ಇನ್ಫೋಸಿಸ್ ತಯಾರಿಸಿರುವ ಆದಾಯ ತೆರಿಗೆ ತುಂಬಿಸುವ ಜಾಲತಾಣವು ಜೂನ್ 7 2021 ರಂದು ಆನ್‍ಲಾಯಿನ್ ಆಗಿದೆ, ಆದರೆ ಅಂದಿನಿಂದ ತೆರಿಗೆ ತುಂಬಿಸುವವರಿಗೆ ಅಡಚಣೆಗಳು ಬರುತ್ತಿವೆ. ಅದೇ ರೀತಿ ಇನ್ಫೋಸಿಸ್ ತಯಾರಿಸಿರುವ ಆದಾಯ ತೆರಿಗೆ ತುಂಬುವ ವ್ಯವಸ್ಥೆಯಲ್ಲಿರುವ ಕೊರತೆಗಳಿಂದ ಜನರಿಗೆ ಈ ತೆರಿಗೆ ವ್ಯವಸ್ಥೆಯ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಆ ಸಮಯದಲ್ಲಿ ಇದರಲ್ಲಿ ರಾಷ್ಟ್ರವಿರೋಧಿ ಶಕ್ತಿಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲವಲ್ಲ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಇದು ದೇಶದ ಆರ್ಥಿಕವ್ಯವಸ್ಥೆಗೆ ಹಾನಿಯುಂಟು ಮಾಡಲು ತಯಾರಿಸಿರಬಹುದೇನು? ಎಂಬ ಪ್ರಶ್ನೆಯನ್ನು ವಿಚಾರಿಸಲಾಗುತ್ತಿದೆ. ಈ ರೀತಿ ಆರೋಪಿಸುವಾಗ ಯಾವುದೇ ರೀತಿಯ ಬಲವಾದ ಪುರಾವೆಗಳನ್ನು ನೀಡಿಲ್ಲ.