ಕಾಶ್ಮೀರದ ಗಡಿಯೊಳಗೆ ೪೦ ರಿಂದ ೫೦ ತಾಲಿಬಾನಿ ಉಗ್ರರು ನೆಲೆ ಊರಿರುವ ಸಾಧ್ಯತೆ !

ಇವತ್ತಲ್ಲ ನಾಳೆ ತಾಲಿಬಾನಿ ಉಗ್ರರು ಭಾರತದಲ್ಲಿ ಸಾವುನೋವುಗಳನ್ನು ಉಂಟು ಮಾಡಲು ನುಸುಳುವರು, ಎಂಬುದು ನಿಶ್ಚಿತವಾಗಿದೆ. ಈ ಮೊದಲು ಭಾರತವೇ ಪಾಕಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ. – ಸಂಪಾದಕರು

ನವದೆಹಲಿ – ಪಾಕಿನ ಗೂಢಾಚಾರ ಸಂಸ್ಥೆ ಐ.ಎಸ.ಐ.ಯು ತಾಲಿಬಾನಿ ಉಗ್ರರನ್ನು ಕಾಶ್ಮೀರದ ಗಡಿಭಾಗದಲ್ಲಿ ಕಳಿಸಿದೆ ಎಂದು ಹೇಳಲಾಗುತ್ತಿದೆ. ಪೂಂಛ ಗಡಿಯಲ್ಲಿ ೪೦ ರಿಂದ ೫೦ ತಾಲಿಬಾನಿ ಉಗ್ರರು ಕಂಡುಬಂದಿದ್ದಾರೆಂಬ ಮಾಹಿತಿಯು ಭಾರತೀಯ ಭದ್ರತಾ ಪಡೆಗೆ ದೊರಕಿದೆ. ಆದ್ದರಿಂದ ಭಾರತೀಯ ಸೇನೆಗೆ (ಸತರ್ಕ ) ಎಚ್ಚರಿಕೆಯಿಂದಿರಲು ಹೇಳಲಾಗಿದೆ, ಎಂಬ ವಾರ್ತೆಯನ್ನು ಜೀನ್ಯೂಸ್ ನೀಡಿದೆ.