ಧನಬಾದ (ಜಾರ್ಖಂಡ)ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ
ಧನಬಾದ (ಜಾರ್ಖಂಡ) – ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ವಿಶ್ವಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ) ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜನೆ ಮಾಡುವವರು, ಅದರಲ್ಲಿ ಭಾಗವಹಿಸುವವರು ಮತ್ತು ಅದನ್ನು ಬೆಂಬಲಿಸುವವರ ಮೇಲೆ ಭಾರತ ಸರಕಾರವು ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಲ್ಲಿಯ ಉಪಾಯುಕ್ತರಿಗೆ ಮನವಿಯನ್ನು ನೀಡಲಾಗಿದೆ.
ಸೆಪ್ಟೆಂಬರ್ 10 ರಿಂದ 12 ರವರೆಗೆ ನಡೆಯಲಿರುವ ಈ ಪರಿಷತ್ತಿನಲ್ಲಿ ಹಿಂದೂ ಧರ್ಮ ಮತ್ತು ಹಿಂದುತ್ವದ ವಿರುದ್ಧ ಸಾಕಷ್ಟು ಪ್ರಚಾರಗಳು ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಭಾರತದ ಧಾರ್ಮಿಕ ಸಾಮರಸ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪರಿಷತ್ತಿನಲ್ಲಿ ಭಾಗವಹಿಸುವ ವಕ್ತಾರರು ಮತ್ತು ಆಯೋಜಕರ ವಿರುದ್ಧ ಅಪರಾಧಗಳನ್ನು ದಾಖಲಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈ ಸಮಯದಲ್ಲಿ, ಸಮಿತಿಯ ಶ್ರೀ. ಅಮರಜಿತ ಸಿಂಗ ಪ್ರಸಾದ ಮತ್ತು ‘ತರುಣ ಹಿಂದೂ’ ಸಂಘಟನೆಯ ಬಪ್ಪಾ ಸರಕಾರ ಇವರು ಉಪಸ್ಥಿತರಿದ್ದರು.