ಎರಡು ತಿಂಗಳಲ್ಲಿ 30 ಲಕ್ಷ 27 ಸಾವಿರ (ಅಕೌಂಟ್) ಖಾತೆಗಳನ್ನು ಬಂದ್ ಮಾಡಿದ ವಾಟ್ಸ್ ಆಪ್ !

ನವದೆಹಲಿ – ‘ಫೇಸ್ ಬುಕ್’ ಕಂಪನಿಯ ಮಾಲಿಕತ್ವದ ‘ವಾಟ್ಸಾಪ್’ ತನ್ನ 30 ಲಕ್ಷ 27 ಸಾವಿರ ಖಾತೆಗಳನ್ನು (ಅಕೌಂಟ್) ಬಂದ್ ಮಾಡಿದೆ. ಆನ್‍ಲೈನ್ ಸ್ಪ್ಯಾಮ್ (ಜಾಹೀರಾತು ಅಥವಾ ವೈರಸ್ ಹರಡಲು ಇಂಟರ್ನೆಟ್ ಉಪಯೋಗಿಸುವವರಿಗೆ ಕಳಿಸಲಾಗುವ ಅಸಂಬಂದ್ಧ ಸಂದೇಶ) ಮತ್ತು ಆ್ಯಪ್ ನ ದುರುಪಯೋಗದ ಜೊತೆಗೆ ವಿವಿಧ ದೂರುಗಳು ಸಿಕ್ಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ಹೆಚ್ಚುಕಡಿಮೆ 55 ಕೋಟಿ ಜನರು ವಾಟ್ಸ್ ಆಪ್ ಉಪಯೋಗಿಸುತ್ತಾರೆ. ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನ ಅಡಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮಗಳಿಗೆ ಪ್ರತಿ ತಿಂಗಳು ಉಪಯೋಗಿಸುವವರ ಸುರಕ್ಷೆಯ ದೃಷ್ಟಿಯಿಂದ ವರದಿಯನ್ನು ಸರಕಾರಕ್ಕೆ ಸಲ್ಲಿಸ ಬೇಕಾಗುತ್ತದೆ. ವಾಟ್ಸ್ ಆಪ್ ನಿಂದ ಸಲ್ಲಿಸಿದ ವರದಿಯಲ್ಲಿ ಜೂನ್ ಮತ್ತು ಜುಲೈ 2021 ಈ ಕಾಲಾವಧಿಯಲ್ಲಿ ಈ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿರುವುದು ಬೆಳಕಿಗೆ ಬಂದಿದೆ.