-
ತಂಡದಿಂದ ೫ ರಾಜ್ಯಗಳಲ್ಲಿ ೧೦೩ ಮಸೀದಿಗಳ ನಿರ್ಮಾಣ !
-
ಮತಾಂತರ ಮತ್ತು ಮಸೀದಿಗಳ ನಿರ್ಮಾಣಕ್ಕಾಗಿ ವಿದೇಶದಿಂದ ಹಣಕಾಸಿನ ನೆರವು !
|
ನವದೆಹಲಿ – ಭಾರತದಲ್ಲಿ ಹಿಂದೂಗಳನ್ನು ಮತಾಂತರಿಸಲು ತಂಡವೊಂದು ಕಾರ್ಯನಿರತವಾಗಿದೆ. ಅದರಲ್ಲಿ ಸಲಾಹುದ್ದೀನ್ ಶೇಖ್ ಮತ್ತು ಉಮರ್ ಗೌತಮ್ ಎಂಬ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳಿಗೆ ಮತಾಂತರಕ್ಕಾಗಿ ಹವಾಲಾದ(ಅಕ್ರಮ ರೀತಿಯಲ್ಲಿ ಮಾಡಲಾಗುವ ಹಣದ ವಹಿವಾಟು. ಇದರಲ್ಲಿ ಮುಖ್ಯವಾಗಿ ವಿದೇಶದಲ್ಲಿನ ಹಣವನ್ನು ಸಂಬಂಧಿತ ದೇಶದ ವ್ಯಕ್ತಿಗೆ ಕಳುಹಿಸಲಾಗುತ್ತದೆ.) ಮಾಧ್ಯಮದಿಂದ ೬೦ ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಅದೇ ರೀತಿ ಅವರು ೫ ರಾಜ್ಯಗಳಲ್ಲಿ ೧೦೩ ಮಸೀದಿಗಳನ್ನು ನಿರ್ಮಿಸಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
೧. ಈ ತಂಡ ಗುಜರಾತನಲ್ಲಿಯೂ ಕಾರ್ಯ ನಿರ್ವಹಿಸುತ್ತಿತ್ತು. ಈ ಕುರಿತು, ರಾಜ್ಯದ ಬರೋಡಾದ ಪೊಲೀಸು ಆಯುಕ್ತ ಸಂಶೇರ ಸಿಂಗ್ ಇವರು, ಕಳೆದ ೫ ವರ್ಷಗಳಲ್ಲಿ ಈ ಆರೋಪಿಗಳಿಗೆ ವಿದೇಶದಿಂದ ದೇಣಿಗೆ ರೂಪದಲ್ಲಿ ೧೯ ಕೋಟಿ ರೂಪಾಯಿ ಹಣ ಸಿಕ್ಕಿದೆ. ಈ ತಂಡಕ್ಕೆ ದುಬೈಯಿಂದ ಹವಾಲಾದ ಮೂಲಕ ಈ ಹಣವನ್ನು ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಈ ಆರೋಪಿಗಳಿಗೆ ಒಂದು ಟ್ರಸ್ಟ್‌ನ ಮಾಧ್ಯಮದಿಂದ ಇಂಗ್ಲೆಂಡ್, ಅಮೇರಿಕಾ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಈ ದೇಶಗಳಿಂದ ದೇಣಿಗೆಯೂ ಸಿಕ್ಕಿದೆ. ಸರಕಾರ ವಿರೋಧಿ ಕೃತ್ಯಗಳಿಗಾಗಿ ಹವಾಲಾದ ಹಣವನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.
೨. ಜನರನ್ನು ವಂಚಿಸಿ ಇಸ್ಲಾಂಗೆ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳವು ಉಮರ ಗೌತಮನನ್ನು ಬಂಧಿಸಿತ್ತು. ನಂತರ ಆತನಿಗೆ ಮತಾಂತರಕ್ಕಾಗಿ ಹಣ ಪೂರೈಸಿದ ಪ್ರಕರಣದಲ್ಲಿ ಸಲಾಹುದ್ದೀನ್ ಶೇಖ್‌ನನ್ನು ಬರೋಡಾದಿಂದ ಬಂಧಿಸಲಾಗಿತ್ತು. ಇಬ್ಬರೂ ಆರೋಪಿಗಳು ಪ್ರಸ್ತುತ ಲಕ್ಷ್ಮಣಪುರಿ (ಲಕ್ನೋ) ಜೈಲಿನಲ್ಲಿದ್ದಾರೆ.
೩. ಸಮಾಜ ಸೇವೆಯ ಮಾಧ್ಯಮದಿಂದ ಸಲಾಹುದ್ದೀನ್‌ನ ‘ಅಮೇರಿಕಾ ಫೆಡರೇಶನ್ ಆಫ್ ಮುಸ್ಲಿಂ ಆಫ್ ಇಂಡಿಯನ್ ಆರಿಜಿನ್’(ಎ.ಎಫ್.ಎಮ್.ಐ.) ಎಂಬ ಸಂಸ್ಥೆಯು ವಿದೇಶದಿಂದ ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡುತ್ತದೆ, ಎಂಬ ಮಾಹಿತಿಯು ಉತ್ತರಪ್ರದೇಶ ಮತ್ತು ಗುಜರಾತನ ಭಯೋತ್ಪಾದನಾ ನಿಗ್ರಹ ದಳಕ್ಕೆ ಇತ್ತಿಚೆಗೆ ಸಿಕ್ಕಿತ್ತು. ನಂತರ ಈ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಯಿತು.