ಗಡಿಯಿಂದ ಪಾಕಿಸ್ತಾನದಲ್ಲಿ ನುಗ್ಗಲು ಸಾವಿರಾರು ಅಫಘಾನಿ ನಾಗರಿಕರ ಪ್ರಯತ್ನ!

ನವದೆಹಲಿ – ಅಫಘಾನಿಸ್ತಾನವು ತಾಲಿಬಾನಿನ ನಿಯಂತ್ರಣಕ್ಕೆ ಬಂದ ನಂತರ ಸಾವಿರಾರು ಅಫಘಾನಿ ನಾಗರಿಕರು ಪಲಾಯನ ಮಾಡುತ್ತಿದ್ದಾರೆ. ವಿಮಾನಗಳ ಮೂಲಕ ಹಾಗೆಯೇ ಗಡಿಯಿಂದ ಹತ್ತಿರದ ದೇಶಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದ ಒಂದು ವಿಡಿಯೋ ಬೆಳಕಿಗೆ ಬಂದಿದೆ. ಇದರ ಅನುಸಾರ ಅಫಘಾನೀ ನಾಗರಿಕರು ಪಾಕಿಸ್ತಾನದ ಗಡಿಯಿಂದ ಪಾಕಿಸ್ತಾನದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಅಫಘಾನೀ ನಾಗರಿಕರು ಗಡಿಯಲ್ಲಿನ ಪ್ರವೇಶದ್ವಾರವನ್ನು ತೆರೆಯಲು ವಿನಂತಿಸುತ್ತಿದ್ದಾರೆ. ಒಂದು ವರದಿಯ ಪ್ರಕಾರ ಸುಮಾರು 14 ಲಕ್ಷಕ್ಕಿಂತಲೂ ಹೆಚ್ಚಿನ ಅಫಘಾನೀ ನಾಗರಿಕರು ಪಾಕಿಸ್ತಾನದಲ್ಲಿ ಶರಣಾರ್ಥಿಗಳೆಂದು ಹೋಗಿದ್ದಾರೆ.

>

ಪಾಕಿಸ್ತಾನದ ಓರ್ವ ಪತ್ರಕರ್ತನು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ನಲ್ಲಿ ಅವನು ‘ಇದು ಕಾಬುಲ ವಿಮಾನ ನಿಲ್ದಾಣವಲ್ಲ, ‘ ಸಪಿನ್ ಬೊಲದಾಕ’ ಗಡಿಯಾಗಿದೆ. ಇಲ್ಲಿ ಸಾವಿರಾರು ಜನರು ಅಫಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿನ ಸ್ಥಿತಿಯು ಕಾಬುಲ ವಿಮಾನ ನಿಲ್ದಾಣಕ್ಕಿಂತಲೂ ಭಯಾನಕವಾಗಿದೆ; ಆದರೆ ಇಲ್ಲಿ ಯಾವುದೇ ವಿದೇಶಿ ಸೈನಿಕರನ್ನು ನಿಯುಕ್ತಿಗೊಳಿಸಿಲ್ಲ, ಆದುದರಿಂದ ಇವರ ಮೇಲೆ ಯಾರೂ ಗಮನವಿಲ್ಲ’ ಎಂದು ಹೇಳಿದ್ದಾನೆ.