ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಇಸ್ಲಾಮಿಕ್ ಸ್ಟೇಟ್ ನಿಂದ ಆಕ್ರಮಣದ ಸಾಧ್ಯತೆ.

ಕಾಬೂಲ್ – ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಅಪಘಾನಿ ಜನರು, ಹಾಗೂ ವಿದೇಶಿ ನಾಗರಿಕರ ಜನಸಂದಣಿ (ಗುಂಪು) ಹೆಚ್ಚಾಗಿದೆ. ಈ ಗುಂಪುಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ನಿಂದ ಆತ್ಮಘಾತಕ ಆಕ್ರಮಣವಾಗುವ ಸಾಧ್ಯತೆಯಿದೆ ಎಂದು ಅಮೇರಿಕಾ, ಬ್ರಿಟನ್  ಮತ್ತು ಆಸ್ಟ್ರೇಲಿಯಾ ಈ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಅವು ತಮ್ಮ ನಾಗರಿಕರಿಗೆ ಈ ವಿಮಾನ ನಿಲ್ದಾಣದಿಂದ ದೂರ ವಿರಲು ಸಲಹೆಯನ್ನು ನೀಡಿವೆ. ಈ ವಿಮಾನ ನಿಲ್ದಾಣ ಪರಿಸರದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದೆ ಎಂದೂ ಈ ದೇಶಗಳು ಹೇಳಿವೆ.