‘ತ್ವಚೆಯಿಂದ ತ್ವಚೆಗೆ ಸಂಪರ್ಕ ಆಗದಿದ್ದಲ್ಲಿ, ಅದು ಪಾಕ್ಸೋ ಕಾನೂನಿನ ಅಂತರ್ಗತ ಲೈಂಗಿಕ ಶೋಷಣೆಯ ಅಪರಾಧ ಆಗು??ದಿಲ್ಲ’, ಎಂಬ ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ

ನವದೆಹಲಿ – ಬಟ್ಟೆಯನ್ನು ಬಿಚ್ಚದೇ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಆಂತರಿಕ ಭಾಗಗಳಿಗೆ ಸ್ಪರ್ಶ ಮಾಡುವುದು ಕಾನೂನಿನ ಪ್ರಕಾರ ಲೈಂಗಿಕ ಶೋಷಣೆಯ ಅಪರಾಧವಲ್ಲ. ನಾಳೆ ಸರ್ಜಿಕಲ್ ಕೈಗವಸು (ಶಸ್ತ್ರಕ್ರಿಯೆ ಮಾಡುವ ಸಮಯದಲ್ಲಿ ಉಪಯೋಗಿಸುವ ಕೈಗುವಸು) ಹಾಕಿಕೊಂಡು ಒಬ್ಬ ವ್ಯಕ್ತಿಯು ಅಪ್ರಾಪ್ತ ಹುಡುಗಿಯ ಸಂಪೂರ್ಣ ಶರೀರವನ್ನು ಸ್ಪರ್ಶ ಮಾಡಿದರೆ, ಈ ಆದೇಶಕ್ಕನುಗುಣವಾಗಿ ಈ ಲೈಂಗಿಕ ಶೋಷಣೆಯ ಶಿಕ್ಷೆ ಆಗುವುದಿಲ್ಲ ಎಂಬುದು ಅವಮಾನಕಾರಿಯಾಗಿದೆ, ತ್ವಚೆಯಿಂದ ತ್ವಚೆಗೆ ಸಂಪರ್ಕ ಅಗತ್ಯವಿದೆ, ಎಂಬುದರ ಅರ್ಥ ಕೈಗುವಸು ಹಾಕಿದವನನ್ನು ನಿರಪರಾಧಿಯೆಂದು ಬಿಡುಗಡೆ ಮಾಡಲಾಗುವುದು, ಮುಂಬಯಿ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನ ದೂರಗಾಮಿ ಪರಿಣಾಮದ ಬಗ್ಗೆ ಯೋಚನೆ ಮಾಡಿಲ್ಲ, ಹೀಗೆ ಹೇಳುತ್ತಾ ಅಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಇವರು ಪಾಕ್ಸೋ ಕಾನೂನಿನ ಅಂತರ್ಗತ ದೌರ್ಜನ್ಯದ ಪ್ರಕರಣದಲ್ಲಿ ಮುಂಬಯಿ ಉಚ್ಚನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸಬೇಕೆಂಬ ಮನವಿಯನ್ನು ಕೇಂದ್ರ ಸರಕಾರದ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಡಿದ್ದಾರೆ. ‘ಆರೋಪಿ ಮತ್ತು ಸಂತ್ರಸ್ಥೆ ಇವರ ‘ಸ್ಕಿನ್ ಟು-ಸ್ಕಿನ್’ ಅಂದರೆ ತ್ವಚೆಯಿಂದ ತ್ವಚೆಗೆ ಸಂಪರ್ಕ ಆಗದಿದ್ದರೆ, ಇದು ಪಾಕ್ಸೋ ಕಾನೂನಿನ ಅಂತರ್ಗತ ಲೈಂಗಿಕ ಶೋಷಣೆಯ ಅಪರಾಧವಾಗುವುದಿಲ್ಲ’, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು. ಕಳೆದ ವರ್ಷ ಪಾಕ್ಸೋ ಕಾನೂನು ಅಂತರ್ಗತ ೪೩ ಸಾವಿರ ಪ್ರಕರಣಗಳು ನೋಂದಾಯಿಸಲ್ಪಟ್ಟಿದೆ. (ಒಂದು ವರ್ಷದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಣ್ಣ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವು ಭಾರತಕ್ಕೆ ನಾಚಿಕೆಯ ಸಂಗತಿಯಾಗಿದೆ ! – ಸಂಪಾದಕರು)