ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಆಘಾತಕಾರಿ ಮಾಹಿತಿ ಬಹಿರಂಗ !
ಭಾರತ ವಿರೋಧಿ ಘೋಷಣೆಗಳನ್ನು ನೀಡುವ ಹಾಗೂ ನಕ್ಸಲವಾದಿ ಚಟುವಟಿಕೆಗಳಲ್ಲಿ ಸಹಭಾಗಿಯಾಗಿರುವ ಆರೋಪಿಗಳನ್ನು ಬೆಂಬಲಿಸುವ ‘ಜೆಎನ್‌ಯು’ ಮತ್ತು ‘ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ’ಯ ವಿದ್ಯಾರ್ಥಿಗಳೂ ದೇಶದ್ರೋಹಿಗಳಾಗಿದ್ದಾರೆ. ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಮತ್ತು ದೇಶವಿರೋಧಿ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕು !
ಮುಂಬಯಿ : ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳಿಗೆ ತಮ್ಮದೇ ಸರಕಾರ ರಚಿಸಲಿಕ್ಕಿತ್ತು. ಅದಕ್ಕಾಗಿಯೇ ಅವರು ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಘೋಷಿಸಿದರು. ಸ್ಫೋಟಕಗಳನ್ನು ಬಳಸುವ ಮೂಲಕ ನಾಗರಿಕರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಜವಾಹರಲಾಲ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ(ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್)ಯಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದ್ದರು. ಎಂದು ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪತ್ರದ ಕಡಡಿನಲ್ಲಿ ಹೇಳಲಾಗಿದೆ. ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ಯುದ್ಧ ಘೋಷಿಸುವವರಿದ್ದರು, ಎಂಬ ಗಂಭೀರ ಆರೋಪವನ್ನೂ ಇದರಲ್ಲಿ ಮಾಡಲಾಗಿದೆ.
Elgar Parishad case accused recruited JNU, TISS students to carry out terror activities: NIA tells courthttps://t.co/iXgdwyPiZY
— OpIndia.com (@OpIndia_com) August 24, 2021
ಈ ತಿಂಗಳ ಆರಂಭದಲ್ಲಿ ಇದರಲ್ಲಿ ರಾಷ್ಟ್ರೀಯ ತನಿಖಾ ದಳವು ಈ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಲಾಗಿರುವ ೧೫ ಆರೋಪಿಗಳ ವಿರುದ್ಧ ೧೭ ಆರೋಪಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಕಾನೂನುಬಾಹಿರ ಕಾಯ್ದೆಗಳ ತಡೆ ಕಾಯ್ದೆ (‘ಯುಎಪಿಎ’) ಸೇರಿವೆ. ಬಂಧಿತ ಆರೋಪಿಗಳು ನಿಷೇಧಿತ ‘ಸಿಪಿಐ’ (ಮಾವೋವಾದಿ) ಸಂಘಟನೆಯ ಸದಸ್ಯರಾಗಿದ್ದಾರೆ. ‘ಪುಣೆಯಲ್ಲಿ ನಡೆದ ಎಲ್ಗರ್ ಕೌನ್ಸಿಲ್ ಸಭೆಯಲ್ಲಿ ಪ್ರಚೋದನಕಾರಿ ಕಿರು ನಾಟಕಗಳು ಮತ್ತು ಹಾಡುಗಳನ್ನು ಪ್ರಸ್ತುತಪಡಿಸಲಾಗಿತ್ತು’, ಎಂದು ಕರಡಿನಲ್ಲಿ ಹೇಳಲಾಗಿದೆ. ಬಂಧಿತ ಆರೋಪಿಗಳಲ್ಲಿ ನ್ಯಾಯವಾದಿ ಸುಧಾ ಭಾರದ್ವಾಜ, ವೆರ್ಣನ್ ಗೊಂನ್ಸ್ಸಾಲ್ವಿಸ್, ವರವರಾ ರಾವ್, ಪ್ರಾ. ಆನಂದ ತೇಲತುಂಬಡೆ, ದೆಹಲಿ ವಿಶ್ವವಿದ್ಯಾಲಯದ ಪ್ರೊ. ಹನಿ ಬಾಬು, ಶೋಮಾ ಸೇನ್, ಗೌತಮ್ ನವಲಖಾ, ಸುರೇಂದ್ರ ಗಡಲಿಂಗ್‌ಗಿ ಇಷ್ಟು ಮಂದಿ ಒಳಗೊಂಡಿದ್ದಾರೆ.