ಸೆಕ್ಷನ್ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ 23 ನಾಯಕರ ಮತ್ತು ಕಾರ್ಯಕರ್ತರ ಹತ್ಯೆ

ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಜಮ್ಮು-ಕಾಶ್ಮೀರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ವಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಹತ್ಯೆ ಆಗುವುದು ಅಪೇಕ್ಷಿತವಿಲ್ಲ. ಕಾಶ್ಮೀರದ ಸ್ಥಿತಿ ಬದಲಾಯಿಸಲು ಹೆಚ್ಚು ಕಠಿಣ ನಿರ್ಣಯ ಮತ್ತು ಕೃತಿ ಮಾಡುವ ಅವಶ್ಯಕತೆ ಇದೆ.

ಶ್ರೀನಗರ (ಜಮ್ಮು-ಕಾಶ್ಮೀರ) – ಸೆಕ್ಷನ್ 370 ರದ್ದು ಪಡಿಸಿದ ನಂತರ ಕಳೆದ 2 ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಈವರೆಗೆ ಬಿಜೆಪಿಯ 23 ನಾಯಕರು ಮತ್ತು ಕಾರ್ಯಕರ್ತರು ಜಿಹಾದಿ ಭಯೋತ್ಪಾದಕರಿಂದ ಹತ್ಯೆಯಾಗಿದ್ದಾರೆ. ಬಿಜೆಪಿಯ ವಕ್ತಾರರ ಹೇಳಿಕೆ ಪ್ರಕಾರ, ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.