ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !- ಸಂಪಾದಕರು
ಮಾಸ್ಕೋ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ನಿರಾಶ್ರಿತರಿಗೆ ರಷ್ಯಾದ ನೆರೆಯ ರಾಷ್ಟ್ರಗಳಲ್ಲಿ ಆಶ್ರಯ ನೀಡುವುದಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಿರಾಶ್ರಿತರ ಸೋಗಿನಲ್ಲಿ ಭಯೋತ್ಪಾದಕರಿಗೆ ಆಶ್ರಯ ಸಿಗಬಾರದು. ‘ನಮಗೆ ರಷ್ಯಾದಲ್ಲಿ ಅಫ್ಘಾನ್ ಭಯೋತ್ಪಾದಕರು ಬೇಕಾಗಿಲ್ಲ’ ಎಂದು ಪುತಿನ್ ಹೇಳಿದರು. ಅಫ್ಘಾನ್ ನಿರಾಶ್ರಿತರನ್ನು ಮಧ್ಯ ಏಷ್ಯಾದ ದೇಶಗಳಿಗೆ ಸ್ಥಳಾಂತರಿಸುವ ಬಗ್ಗೆ ಕೆಲವು ಪಾಶ್ಚಿಮಾತ್ಯ ದೇಶಗಳಿಂದಾಗುತ್ತಿರುವ ವಿಚಾರವನ್ನು ಪುಟಿನ್ ಇವರು ವಿರೋಧಿಸಿದ್ದಾರೆ.
Putin: we don’t want Afghan militants in Russia https://t.co/oAsZP5AW85 pic.twitter.com/zJJwIvvxY3
— Reuters (@Reuters) August 22, 2021
1. ನಿರಾಶ್ರಿತರಿಗೆ ಅಮೇರಿಕಾ ಮತ್ತು ಯುರೋಪಿನ್ ನಿಂದ ವೀಸಾ ನೀಡುವ ಪ್ರಕ್ರಿಯೆ ನಡೆಯುತ್ತಿದೆ (ಬೇರೆ ದೇಶದಲ್ಲಿ ಉಳಿಯಲು ಅನುಮತಿ). ಈ ಬಗ್ಗೆ ಪುಟಿನ್ ಮಾತನಾಡುತ್ತಾ, ‘ಇದರರ್ಥ ಅವರು (ಪಾಶ್ಚಿಮಾತ್ಯ ದೇಶಗಳು) ಸ್ವತಃ ವೀಸಾ ಇಲ್ಲದೆ ಯಾರಿಗೂ ಪ್ರವೇಶ ನೀಡುವುದಿಲ್ಲ ಹೀಗಿರುವಾಗ ವೀಸಾ ವಿಲ್ಲದೇ ನಮ್ಮ ನೆರೆಯ ದೇಶಗಳಿಗೆ ನಿರಾಶ್ರಿತ ಅಫ್ಘಾನ್ ನಾಗರಿಕರನ್ನು ಕಳುಹಿಸಲು ಹೊರಟಿದ್ದಾರೆಯೇ ? ಎಂದು ಪ್ರಶ್ನಿಸಿದ್ದಾರೆ.
2. ಮತ್ತೊಂದೆಡೆ, ರಷ್ಯಾವು ‘ತಾಲಿಬಾನ್ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದೆ’ ಎಂದು ತಾಲಿಬಾನ್ ಅನ್ನು ಪ್ರಶಂಸಿಸಿದೆ. ರಷ್ಯಾದ ವಿದೇಶಾಂಗ ಸಚಿವ ಸೆರೆಗಿ ಇವರು ‘ತಾಲಿಬಾನ್ ನಾಯಕರು ತಮ್ಮ ಆಶ್ವಾಸನೆಗಳನ್ನು ಪಾಲಿಸುತ್ತಿದ್ದಾರೆ’, ಎಂದು ಹೇಳಿದ್ದಾರೆ. (ರಷ್ಯಾದಿಂದಾಗುವ ತಾಲಿಬಾನ್‍ನ ಪ್ರಶಂಸೆಯು ರಷ್ಯಾದ ರಾಜಕೀಯ ಸ್ವಾರ್ಥವಾಗಿದೆ. ಇಂತಹ ಸ್ವಾರ್ಥಿ ಮಹಾಧಿಕಾರದಿಂದಾಗಿಯೇ ಇಂದು ಅಫ್ಘಾನಿಸ್ತಾನದಲ್ಲಿ ಈ ಸ್ಥಿತಿ ಉದ್ಭವಿಸಿದೆ ! – ಸಂಪಾದಕರು)