ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ರ ನಿಧನ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪದ ಮುಖಂಡರಾದ ಕಲ್ಯಾಣ ಸಿಂಗ್ ರವರು ಆಗಸ್ಟ್ 21 ರಂದು ರಾತ್ರಿ ಅಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಲ್ಯಾಣ ಸಿಂಗ್ ರವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು. ಕಲ್ಯಾಣ ಸಿಂಗ್ ರವರು 2 ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು. ಅವರ ಬಳಿ ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ರಾಜ್ಯಪಾಲದ ಜವಾಬ್ದಾರಿಯಿತ್ತು. ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಆಂಧೋಲನದಲ್ಲಿ ಅವರು ಭಾಜಪದ ಪ್ರಮುಖ ಮುಖಂಡರಾಗಿದ್ದರು. ಅವರು ಮುಖ್ಯಮಂತ್ರಿಗಳಾಗಿರುವಾಗ ಕಾರಸೇವಕರು ಬಾಬರಿಯ ಅವಶೇಷವನ್ನು ಧ್ವಂಸಗೊಳಿಸಿದರು. ಕಲ್ಯಾಣ ಸಿಂಗ್ ರವರ ನಿಧನದ ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ, ಉಪರಾಷ್ಟ್ರಪತಿಗಳಾದ ವ್ಯಂಕಯ್ಯ ನಾಯಡೂ, ಗೃಹಮಂತ್ರಿ ಅಮಿತ ಶಹಾ, ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು, ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರವರವರು ಸೇರಿದಂತೆ ಹಲವರು ಶೋಕ ವ್ಯಕ್ತ ಪಡಿಸಿದರು. ಆಗಸ್ಟ್ 23 ರಂದು ರಾಜ್ಯದಲ್ಲಿನ ನರೋರೋದಲ್ಲಿನ ಗಂಗಾನದಿಯ ತೀರದಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಗುವುದು. ಆಗಸ್ಟ್ 23 ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆಯಿರುವುದು ಹಾಗೂ 3 ದಿನಗಳ ಶೋಕ ಪಾಲಿಸಲಾಗುವುದು, ಎಂದು ಯೋಗಿ ಆದಿತ್ಯನಾಥರವರು ಹೇಳಿದ್ದಾರೆ.