ಅಸ್ಸಾಂನಲ್ಲಿ ಸಾಮಾಜಿಕ ಜಾಲತಾಣದಿಂದ ತಾಲಿಬಾನ್‍ಅನ್ನು ಬೆಂಬಲಿಸಿದ 14 ಜನರ ಬಂಧನ !

ಗುಹಾಟಿ (ಅಸ್ಸಾಂ) – ತಾಲಿಬಾನ್‍ಗೆ ಬೆಂಬಲ ನೀಡಿದ ಬಗ್ಗೆ ಅಸ್ಸಾಂನಲ್ಲಿ ವಿವಿಧ ಕಡೆಗಳಿಂದ ಒಟ್ಟು 14 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಯಮಗಳ ಉಲ್ಲಂಘನೆ ಮತ್ತು ಸಿ.ಆರ್.ಪಿ.ಸಿ.ಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ‘ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗುವಂತಹ, ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವವರ ಮೇಲೆ ಅಸ್ಸಾಂ ಪೊಲೀಸರು ಸೂಕ್ಷ್ಮವಾಗಿ ನಿಗಾ ಇಟ್ಟಿದ್ದಾರೆ’, ಎಂದು ಒರ್ವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.(ಇಂತಹವರಿಗೆ ಶಿಕ್ಷೆಯೆಂದು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು ಎಂದು ಯಾರಾದರೂ ಬೇಡಿಕೆ ಇಟ್ಟರೆ, ಆಶ್ಚರ್ಯವೇನೂ ಇಲ್ಲ ! – ಸಂಪಾದಕರು)