ಪಾಕಿಸ್ತಾನದಲ್ಲಿ 50 ವರ್ಷದ ಮೌಲ್ವಿಯಿಂದ 3 ವರ್ಷದ ಕ್ರೈಸ್ತ ಬಾಲಕಿಯ ಮೇಲೆ ಬಲಾತ್ಕಾರ !

* ಭಾರತದಲ್ಲಿನ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಎಂದು ಬೊಬ್ಬೆಯಿಡುವ ಅಸದುದ್ದಿನ್ ಓವೈಸಿ ಈಗ ಏಕೆ ಸುಮ್ಮನಿದ್ದಾರೆ ? – ಸಂಪಾದಕರು 

* ಪಾಕಿಸ್ತಾನದಲ್ಲಿ ಕಟ್ಟರವಾದಿ ಮತಾಂಧರಿಂದ ಅಲ್ಪಸಂಖ್ಯಾತ ಸಮಾಜದ ಚಿಕ್ಕ ಬಾಲಕಿಯೂ ಸುರಕ್ಷಿತವಾಗಿಲ್ಲ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಇದರಿಂದ ಇಲ್ಲಿನ ಮಹಿಳೆಯರ ಸ್ಥಿತಿ ಎಷ್ಟು ಭಯಾನಕವಾಗಿದೆ ಎಂಬುದರ ಕಲ್ಪನೆ ಮಾಡಬಹುದು. ಭಾರತದಲ್ಲಿನ ಕ್ಷುಲ್ಲಕ ಘಟನೆಗಳ ಮೇಲೆ ಬಾಯಿ ಬಡಿದುಕೊಳ್ಳುವ ಅಂತರಾಷ್ಟ್ರೀಯ ಮಾನವಾಧಿಕಾರ ಸಂಘಟನೆಗಳು ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಸಮಯದಲ್ಲಿ ಎಲ್ಲಿ ಅಡಗಿ ಕುಳಿತಿವೆ ? – ಸಂಪಾದಕರು 

ಲಾಹೋರ್ – ಪಾಕಿಸ್ತಾನದ ಲಾಹೋರಿನಲ್ಲಿ ಡಾ. ಮಹಮ್ಮದ್ ಸಲೀಂ ಎಂಬ ಹೆಸರಿನ 50 ವರ್ಷದ ಮೌಲ್ವಿಯು 3 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೌಲ್ವಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಂದೆ-ತಾಯಿಯ ಹೇಳಿಕೆಯಂತೆ ಮಗು ಒಂದು ಖಾಸಗಿ ಸಂಸ್ಥೆಯಿಂದ ನಡೆಸಲಾಗುವ ಶಾಲೆಗೆ ಕಲಿಯಲು ಹೋಗಿದ್ದಳು. ಅಲ್ಲಿಂದ ಹಿಂದಿರುಗುವಾಗ ಆರೋಪಿ ಸಲೀಮನು ಆಕೆಯ ಮೇಲೆ ಬಲಾತ್ಕಾರ ಮಾಡಿದನು.

ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಹಿತಕ್ಕಾಗಿ ಹೋರಾಡುವ ಮಾನವಾಧಿಕಾರ ಕಾರ್ಯಕರ್ತರಾದ ಶ್ರೀ. ರಾಹತ್ ಆಸ್ಟಿನ್ ಇವರು ಸನಾತನ ಪ್ರಭಾತಕ್ಕೆ ಕಳಿಸಿದ ಮಾಹಿತಿಗನುಸಾರ, ಲಾಹೋರ್ ನಲ್ಲಿನ ರಾಯವಿಂಡ ಸುಂದರ ರಸ್ತೆಯಲ್ಲಿರುವ ಕ್ರೈಸ್ತ ವಸಾಹತಿನಲ್ಲಿ ಈ ಮೌಲ್ವಿಯು ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ವಿಷಯದಲ್ಲಿ ಪೊಲೀಸರು ಯಾವುದೇ ಕಾರ್ಯಾಚರಣೆ ಮಾಡದಿರುವ ಬಗ್ಗೆ ಅಲ್ಪಸಂಖ್ಯಾತ ಖಾತೆಯ ಪ್ರಾಂತೀಯ ಮಂತ್ರಿಗಳಾದ  ಎಜಾಜ್ ಆಲಂ ಅಗಸ್ಟೀನ್ ಇವರಿಗೆ ತಿಳಿಸಲಾಯಿತು. ಆಗಸ್ಟೀನರು ಇದನ್ನು ಗಮನಿಸಿ ಪೊಲೀಸರಿಗೆ ಆದೇಶ ನೀಡುತ್ತಲೇ ಮೌಲ್ವಿಯನ್ನು ಬಂಧಿಸಲಾಯಿತು.