ಪಾಕ್‍ನಲ್ಲಿ ಅಲ್ಲಲ್ಲಿ ತಾಲಿಬಾನ್ ಧ್ವಜಗಳನ್ನು ಹಾರಾಡಿಸಿದ ಮತಾಂಧರು !

ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್‍ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !

ಇಸ್ಲಾಮಾಬಾದ್ (ಪಾಕಿಸ್ತಾನ) – ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಪಾಕ್‍ನಲ್ಲಿ ಆನಂದ ಉತ್ಸವವನ್ನು ಆಚರಿಸಲಾಗುತ್ತಿದೆ. ರಾಜಧಾನಿ ಇಸ್ಲಾಮಾಬಾದ ಸಹಿತ ಅನೇಕ ನಗರಗಳಲ್ಲಿ ತಾಲಿಬಾನೀ ಧ್ವಜವನ್ನು ಹಾರಿಸಲಾಯಿತು. ಇಸ್ಲಾಮಾಬಾದಿನ ಜಾಮಿಯಾ ಹಫ್ಸಾ ಮದರಸಾದ ಮೇಲೆ ಸಹ ತಾಲಿಬಾನೀ ಧ್ವಜವನ್ನು ಹಾರಿಸಲಾಯಿತು. ಹಾಗೂ ಕೆಲವು ಮೌಲ್ವಿಗಳು ತಾಲಿಬಾನಿಗೆ ಶುಭಾಶಯ ಸಹ ತಿಳಿಸಿದ್ದಾರೆ.