ಕಾಬುಲ್ ವಿಮಾನ ನಿಲ್ದಾಣದಿಂದ ಕಥಿತ ಅಪಹರಣವಾದ 150 ನಾಗರಿಕರು ಸುರಕ್ಷಿತ

ಕಾಬುಲ್(ಅಫ್ಘಾನಿಸ್ತಾನ) – ಇಲ್ಲಿಯ ವಿಮಾನ ನಿಲ್ದಾಣದ ಹತ್ತಿರ 150 ಜನರನ್ನು ಅಪಹರಿಸಲಾಗಿದೆ ಎಂದು ವಾರ್ತಾ ವಾಹಿನಿಗಳಲ್ಲಿ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು. ಆದರೆ ಸ್ಥಳಿಯ ಅಫ್ಘಾನ್ ಪ್ರಸಾರ ಮಾಧ್ಯಮಗಳು ಇದನ್ನು ಸ್ಪಷ್ಟಪಡಿಸುತ್ತಾ, ಈ 150 ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಇದರಲ್ಲಿ ಭಾರತೀಯ ಹಿಂದೂ, ಅಫ್ಘಾನಿ ಸಿಕ್ಖ, ಮತ್ತು ಕೆಲವು ಅಫ್ಘಾನಿ ಮುಸಲ್ಮಾನರು ಇದ್ದಾರೆ. ಅವರ ಪಾಸಪೋರ್ಟಗಳ ಪರಿಶೀಲನೆ ಮಾಡಲಾಗುತ್ತಿದೆ. ಅವರಿಗೆ ಹೊಡೆದು ಹಿಂಸಿಸಲಾಗಿದೆ ಎಂದು ಹೇಳಲಾಗಿತ್ತು. ಭಾರತ ಸರಕಾರವು ಅಪಹರಣ ಘಟನೆಗೆ ಸಂಬಂಧಿಸಿದ ಯಾವುದೇ ಹೇಳಿಕೆ ಕೊಟ್ಟಿಲ್ಲ. ಅಫ್ಘಾನ್ ಪ್ರಸಾರ ಮಾಧ್ಯಮಗಳು ಈ ವಾರ್ತೆಯನ್ನು ನಿರಾಕರಿಸಿವೆ. ತಾಲಿಬಾನಿನ ವಕ್ತಾರ ಅಹಮದುಲ್ಲಾಹ ವಸೇಕನು 150 ನಾಗರಿಕರ ಅಪಹರಣ ವಾರ್ತೆಯನ್ನು ಖಂಡಿಸಿದ್ದಾನೆ. ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕಾಬೂಲ್ ವಿಮಾನ ನಿಲ್ದಾಣದ ಒಳಗಡೆ ಕಳುಹಿಸಿರುವ ಬಗ್ಗೆ ವಾಸೇಕ ಹೇಳಿದ್ದಾನೆ.

ಅಫ್ಘಾನಿಸ್ತಾನದಿಂದ ಮಾತೃಭೂಮಿಗೆ ಹಿಂತಿರುಗಲು ಅನೇಕ ಭಾರತೀಯ ನಾಗರಿಕರು ಕಾಬುಲ್ ವಿಮಾನನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಅದರಲ್ಲಿ ಆಗಸ್ಟ್ 21 ರಂದು ಭಾರತೀಯ ವಾಯುಸೇನೆಯ ಒಂದು ವಿಮಾನ ಕಾಬುಲ್ ವಿಮಾನನಿಲ್ದಾಣದಿಂದ 85 ನಾಗರಿಕರನ್ನು ಕರೆದುಕೊಂಡು ಹೋಗಲು ರವಾನೆಯಾಗಿತ್ತು. ಅದಕ್ಕೂ ಮೊದಲು ಭಾರತೀಯ ನಾಗರಿಕರ ಅಪಹರಣದ ಸುದ್ದಿ ಪ್ರಸಾರವಾಗಿತ್ತು.