ಹಿಂದೂ ಹೆಸರನ್ನಿಟ್ಟುಕೊಂಡು ಮತಾಂಧನಿಂದ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ನಂತರ, ಆಕೆಗೆ ಲೈಂಗಿಕ ಕಿರುಕುಳ ನೀಡಿದ !

ಇಂತಹ ಮತಾಂಧರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ಗಲ್ಲುಶಿಕ್ಷೆ ವಿಧಿಸುವ ಅಗತ್ಯವಿದೆ !- ಸಂಪಾದಕರು 

ಇಂದೂರ (ಮಧ್ಯಪ್ರದೇಶ) – ಇಲ್ಲಿ ಫೈಜಾನ್ ಖಾನ್ ನು ‘ಕಬೀರ್’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದನು. ಅನಂತರ ಆತ ಚಾಕೂವಿನಿಂದ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ವಿಡಿಯೋ ಮಾಡಿದನು. ಮತಾಂಧನು ಈ ವಿಡಿಯೋ ಪ್ರಸಾರ ಮಾಡುವ ಬೆದರಿಕೆಯೊಡ್ಡುವ ಮೂಲಕ 4 ವರ್ಷಗಳ ಕಾಲ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೈಜಾನ್ ಖಾನ್ ನನ್ನು ಬಂಧಿಸಿದ್ದಾರೆ ಮತ್ತು ಆತನ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿದ್ದಾರೆ.

ನಗರದಲ್ಲಿ ಪೀಠೋಪಕರಣ (ಕುರ್ಚಿಗಳು, ಸೋಫಾಗಳು ಇತ್ಯಾದಿಗಳನ್ನು ತಯಾರಿಸುವುದು) ವ್ಯಾಪಾರ ನಡೆಸುತ್ತಿರುವ ಫೈಜಾನ್ ಖಾನ್ ನು, 2017 ರಲ್ಲಿ ಕಬೀರ್ ಎಂಬ ಹೆಸರಿಟ್ಟುಕೊಂಡು `ಬ್ಯೂಟಿ ಪಾರ್ಲರ್’ನ ನಿರ್ದೇಶಕಿಯಾಗಿದ್ದ 35 ವರ್ಷದ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದನು. ನಂತರ ಒಂದು ದಿನ, ಅವನಿಗೆ ಅವಕಾಶ ಸಿಕ್ಕಾಗ, ಅವನು ಅವಳನ್ನು ಚಾಕುವಿನಿಂದ ಬೆದರಿಸಿ ಅವಳ ಮೇಲೆ ಅತ್ಯಾಚಾರ ಮಾಡಿದ. 4 ವರ್ಷಗಳ ಲೈಂಗಿಕ ದೌರ್ಜನ್ಯದ ನಂತರ, ಆಕೆಗೆ ಒಬ್ಬ ಮಗು ಕೂಡಾ ಆಗಿದೆ. ನಂತರ, ಫೈಜಾನ್ ಖಾನ್ ಆಕೆಯನ್ನು ಮತಾಂತರಿಸಿ ಮದುವೆಯಾಗಲು ಪದೇ ಪದೇ ಬೆದರಿಕೆ ಹಾಕಿದ. ಹಾಗೆ ಮಾಡದಿದ್ದರೆ ಅವಳನ್ನು ಮತ್ತು ಅವಳ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಈ ಪ್ರಕರಣದಲ್ಲಿ, ಆತನ ವಿರುದ್ಧ ಅತ್ಯಾಚಾರ, ಲವ್ ಜಿಹಾದ್ ಇತ್ಯಾದಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.