ಭಾರತೀಯರೇ, ಚೀನಾದ ರಾಖಿಗಳನ್ನು ಬಹಿಷ್ಕರಿಸುವ ಮೂಲಕ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಿ !

ಕಳೆದ ಅನೇಕ ದಶಕಗಳಿಂದ ಚೀನಾವು ಭಾರತದ ಶತ್ರು ಆಗಿದೆ. ಪ್ರತಿದಿನವೂ ಗಡಿಯಲ್ಲಿ ತನ್ನ ದುಷ್ಟ ಕೃತ್ಯಗಳನ್ನು ನಡೆಸುತ್ತಿರುತ್ತದೆ. ಚೀನಾವು ಗಲವಾನ್ ಕಣಿವೆಯ ಮೇಲೆ ದಾಳಿ ಮಾಡಿ, ಭಾರತೀಯ ಸೈನಿಕರನ್ನು ಕೊಲ್ಲುತ್ತದೆ. ಈಗಂತೂ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಅಧಿಕಾರವನ್ನು ಕಬಳಿಸಿರುವ ತಾಲಿಬಾನ್‌ಗೆ ಚೀನಾ ಕೂಡ ಬಹಿರಂಗವಾಗಿ ಬೆಂಬಲವನ್ನು ವ್ಯಕ್ತಪಡಿಸಿದೆ. ಇದರಿಂದ ಚೀನಾದ ರಾಷ್ಟ್ರದ್ರೋಹಿ ಮತ್ತು ಅಪಾಯಕಾರಿ ಉದ್ದೇಶಗಳೇ ಕಂಡುಬರುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಚೀನಾಕ್ಕೆ ಯೋಗ್ಯವಾದ ಪ್ರತ್ಯುತ್ತರ ನೀಡಬೇಕಾಗಿದೆ.

ಭಾನುವಾರ ದಿನಾಂಕ ೨೨.೮.೨೦೨೧ ರಂದು ರಕ್ಷಾಬಂಧನವಿದೆ. ಭಾರತವು ಚೀನಾದ ಅತಿದೊಡ್ಡ ಮಾರುಕಟ್ಟೆಯಾಗಿದೆ. ನಾವು ಚೀನಾದ ರಾಖಿಗಳನ್ನು ಖರೀದಿಸಲು ಆದ್ಯತೆ ನೀಡಿದರೆ, ಭಾರತದಿಂದ ಹಣವು ಅಂತಿಮವಾಗಿ ಚೀನಾಕ್ಕೆ ಹೋಗುತ್ತದೆ. ಚೀನಾವು ಭಾರತದಿಂದ ಬಂದ ಹಣವನ್ನು ಮತ್ತೆ ಭಾರತದ ಮೇಲೆ ಆಕ್ರಮಣ ಮಾಡಲು ಬಳಸಬಹುದು. ಈ ಭಯಾನಕ ವಾಸ್ತವವನ್ನು ನೆನಪಿಟ್ಟುಕೊಳ್ಳಿ ಮತ್ತು ರಾಷ್ಟ್ರಪ್ರೇಮಿ ನಾಗರಿಕರೆಂದು ಚೀನೀ ರಾಖಿಗಳನ್ನು ಬಹಿಷ್ಕರಿಸಿ !