೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ತಮ್ಮ ತಂದೆಯೊಂದಿಗೆ ಶಬರಿಮಲೈ ದೇವಸ್ಥಾನಕ್ಕೆ ದರ್ಶನಕ್ಕಾಗಿ ಹೋಗಬಹುದು ! – ಕೇರಳ ಉಚ್ಚನ್ಯಾಯಾಲಯ

ತಿರುವನಂತಪುರಂ (ಕೇರಳ) – ಕೇರಳ ಉಚ್ಚನ್ಯಾಯಾಲಯವು ೧೦ ವರ್ಷದೊಳಗಿನ ಹುಡುಗಿಯರಿಗೆ ತಮ್ಮ ತಂದೆಯೊಂದಿಗೆ ಶಬರಿಮಲೈ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದೆ. ಈ ಪ್ರಕರಣದಲ್ಲಿ, ೯ ವರ್ಷದ ಹುಡುಗಿಯು ತಾನು ತನ್ನ ತಂದೆಯ ಜೊತೆ ಶಬರಿಮಲೈ ದೇವಸ್ಥಾನಕ್ಕೆ ಹೋಗಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಳು. ‘ಆಕೆ ೧೦ ವರ್ಷ ತುಂಬುವ ಮೊದಲೇ ದೇವಸ್ಥಾನಕ್ಕೆ ಹೋಗಲು ಬಯಸಿದ್ದಾಳೆ; ಏಕೆಂದರೆ ಮುಂದಿನ ೪೦ ವರ್ಷಗಳ ತನಕ ನಾನು ಈ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ’, ಎಂದು ಹುಡುಗಿ ಅರ್ಜಿಯಲ್ಲಿ ಹೇಳಿದ್ದಳು. ಈ ದೇವಸ್ಥಾನದಲ್ಲಿ ೧೦ ರಿಂದ ೫೦ ವರ್ಷದೊಳಗಿನ ಹುಡುಗಿಯರು ಮತ್ತು ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ನ್ಯಾಯಾಲಯವು ಈ ನಿಷೇಧವನ್ನು ತೆಗೆದುಹಾಕಿದಾಗಿನಿಂದ ಅದಕ್ಕೆ ಸವಾಲು ಮಾಡಲಾಗಿದೆ.