ಸ್ವಾತಂತ್ರ್ಯ ಬಂದಿದೆ, ಆದರೆ ಸುರಾಜ್ಯವನ್ನು ತರಲು  ಸಂಘರ್ಷವನ್ನು ಮಾಡಬೇಕಾಗುವುದು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ಬೆಂಗಳೂರು : ‘ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹಿಂದೂ ದೇವಸ್ಥಾನಗಳಿಗೆ ಸರಕಾರದ ಕಪಿಮುಷ್ಟಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಮಹಾಭಾರತ, ರಾಮಾಯಾಣ ಮತ್ತು ಭಗವದ್ಗೀತೆಯ ಶಿಕ್ಷಣ ಪಡೆಯಲು ಸ್ವಾತಂತ್ರ್ಯ ಸಿಕ್ಕಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದಲ್ಲಿ ಎಲ್ಲಾ ಕಡೆ ಲೂಟಿ, ಶೋಷಣೆ ನಡೆಯುತ್ತಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರವರು ‘ಸುರಾಜ್ಯ ಇದು ನನ್ನ ಜನ್ಮಸಿದ್ದ ಹಕ್ಕು’ ಎಂದು ಹೇಳಿ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದರು. ಅನೇಕ ಕ್ರಾಂತಿಕಾರಿಗಳು ಸುರಾಜ್ಯಕ್ಕಾಗಿ ಬಲಿದಾನ ಮಾಡಿದರು. ಸ್ವಾತಂತ್ರ್ಯವೀರ ಸಾವರಕರ ಇವರು ಸ್ವಾತಂತ್ರ್ಯ ಸಹಿತ ಹಿಂದೂ ರಾಷ್ಟ್ರದ ಕನಸನ್ನು ನನಸು ಮಾಡಲು ಜೀವನವಿಡಿ  ಸಂಘರ್ಷ ಮಾಡಿದರು.

ಇವರೆಲ್ಲರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅದಕ್ಕೂ ಮುಂದೆ ಹೋಗಿ ಸುರಾಜ್ಯವನ್ನು ಸಾಕಾರಗೊಳಿಸಲು  ನಾವು ಹೋರಾಟ ಮಾಡಬೇಕಾಗಿದೆ, ಆಗಲೇ ನಾವು ಮುಂದಿನ ಪೀಳಿಗೆಗೆ ಆನಂದ ನೀಡಬಹುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಕರೆ ನೀಡಿದರು.

ಬೆಂಗಳೂರಿನ ಶ್ರೀ ಮಹಾಗಣಪತಿ ನಗರದಲ್ಲಿ ‘ವಂದೇ ಮಾತರಂ ಸಮಾಜ ಸೇವಾ ಸಮಿತಿ’ಯ ವತಿಯಿಂದ ೧೫ ಆಗಸ್ಟ್ ೨೦೨೧ ರಂದು ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ. ಮೋಹನ ಗೌಡ ಇವರು ಉಪಸ್ಥಿತರಿದ್ದು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ‘ವಂದೇ ಮಾತರಂ ಸಮಾಜ ಸೇವಾ ಸಮಿತಿ’ಯ ರವಿಯಣ್ಣ ಇವರು ನಿರೂಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ  ‘ವಂದೇ ಮಾತರಂ ಸಮಾಜ ಸೇವಾ ಸಮಿತಿ’ಯ ಸದಸ್ಯರು ಮತ್ತು ಮಹಿಳೆಯರು ಸೇರಿ ೫೦ ಕ್ಕೂ ಅಧಿಕ ಜನರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ವಂದೇ ಮಾತರಂ ಸಮಾಜ ಸೇವಾ ಸಮಿತಿ’ಯ ಶ್ರೀ. ನಟರಾಜ ಬಿ. ಇವರು ಮಾತನಾಡುತ್ತಾ ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ, ಲವ್ ಜಿಹಾದ್ ಘಟನೆಗಳು ಮಿತಿ ಮೀರಿ ನಡೆಯುತ್ತಿದೆ. ಅದರ ಬಗ್ಗೆ ನಾವು ಕಡಿವಾಣ ಹಾಕಬೇಕು’, ಎಂದರು. ಹಾಗೆಯೇ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಶ್ರೀ. ನಟರಾಜ ಬಿ. ಇವರು ಕಳವಳ ವ್ಯಕ್ತ ಪಡಿಸಿದರು.