ಶ್ರೀಕಾಕುಲಂ (ಆಂಧ್ರಪ್ರದೇಶ) ನ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿನ ಶ್ರೀ ಗಣೇಶ ಮತ್ತು ಶ್ರೀ ಸರಸ್ವತಿ ದೇವಿಯ ಮೂರ್ತಿಗಳು ಅಜ್ಞಾತರಿಂದ ಧ್ವಂಸ !

ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿರುವುದರಿಂದ ಮೂರ್ತಿ ಭಂಜನೆಯ ಉದ್ದೇಶವು ಸ್ಪಷ್ಟವಾಗಿದೆ!

* ಆಂಧ್ರಪ್ರದೇಶದಲ್ಲಿ ಈ ಮೊದಲೂ ದೊಡ್ಡ ಪ್ರಮಾಣದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣದ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಬಂದಿವೆ. ಆದರೂ ರಾಜ್ಯದಲ್ಲಿನ ಕ್ರೈಸ್ತ ಮುಖ್ಯಮಂತ್ರಿ ಇರುವ ಸರಕಾರದಿಂದ ದೇವಸ್ಥಾನಗಳ ಸುರಕ್ಷತೆಗಾಗಿ ಯಾವುದೇ ಪ್ರಯತ್ನವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! ಆದುದರಿಂದ ದೇವಸ್ಥಾನಗಳ ರಕ್ಷಣೆಗಾಗಿ ಈಗ ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ! 

ದೇವಸ್ಥಾನದಲ್ಲಿ ಧ್ವಂಸಗೊಳಿಸಿದ ಶ್ರೀ ಸರಸ್ವತಿದೇವಿ ಮೂರ್ತಿ

ಶ್ರೀಕಾಕುಲಂ (ಆಂಧ್ರಪ್ರದೇಶ) – ಕೆಲವು ದಿನಗಳ ಹಿಂದೆ ಶ್ರೀಕಾಕುಲಂ ಜಿಲ್ಲೆಯ ಕರಾಕಾವಲಸಾ ಗ್ರಾಮದಲ್ಲಿ ಅಜ್ಞಾತರು ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿನ ಶ್ರೀ ಸರಸ್ವತಿದೇವಿ ಮತ್ತು ಶ್ರೀ ಗಣೇಶನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ದೇವಸ್ಥಾನವು ಪರ್ವತದ ಮೇಲೆ ಇರುವುದರಿಂದ ಸದ್ಯ ಕೇವಲ ಪೂಜಾರಿಗಳು ಮಾತ್ರ ಅಲ್ಲಿ ಹೋಗುತ್ತಿರುವುದರಿಂದ ಈ ಘಟನೆಯು ಈಗ ಬೆಳಕಿಗೆ ಬಂದಿದೆ. ಈ ದೇವಸ್ಥಾನದಿಂದ ಯಾವುದೇ ಬೆಲೆಬಾಳುವ ವಸ್ತುಗಳ ಕಳ್ಳತನವಾಗದಿರುವುದರಿಂದ ಕೇವಲ ಧ್ವಂಸ ಮಾಡುವ ಉದ್ದೇಶದಿಂದಲೇ ಈ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಉಪಾಧೀಕ್ಷಕ ಮಹೇಂದ್ರ ಇವರು ‘ನಾವು ಇದೇ ವರ್ಷ ಜನವರಿಯಂದು ದೇವಸ್ಥಾನದ ಸಮಿತಿಗೆ ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಹೇಳಿದ್ದೆವು. ಆದರೆ ಅವುಗಳನ್ನು ಅಳವಡಿಸಲಾಗಿಲ್ಲ’ ಎಂದು ಹೇಳಿದ್ದಾರೆ. (ಸಿಸಿಟಿವಿ ಕ್ಯಾಮೆರಾದಿಂದ ವಿಧ್ವಂಸ ಮಾಡುವವರಿಂದ ದೇವಸ್ಥಾನಗಳ ರಕ್ಷಣೆಯಾಗುವುದಿಲ್ಲ, ಅದು ಪೊಲೀಸರು ಸಂರಕ್ಷಣೆ ನೀಡುವುದರಿಂದಲೇ ಆಗುತ್ತದೆ; ಆದರೆ ಪೊಲೀಸರು ಇಂತಹ ಹೇಳಿಕೆಗಳನ್ನು ನೀಡಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ