ರಾಜ್ಯಸಭೆಯಲ್ಲಿ ವಿರೋಧಕರ ಕೋಲಾಹಲದಿಂದಾಗಿ ಕಣ್ಣೀರಿಟ್ಟ ಸಭಾಪತಿ ವೆಂಕಯ್ಯ ನಾಯ್ಡು !

ಇಂತಹ ಘಟನೆಗಳನ್ನು ತಡೆಯಲು, ಸಭಾಪತಿ ನಾಯ್ಡು ಅವರು ಭಾವುಕರಾಗುವ ಬದಲು, ಕಠೋರವಾಗಿ ಸಂಬಂಧಿತ ಸದಸ್ಯರನ್ನು ಅಮಾನತ್ತುಗೊಳಿಸಬೇಕು ಮತ್ತು ಅವರಿಂದ ವ್ಯರ್ಥವಾದ ಸಮಯದ ವೆಚ್ಚವನ್ನು ವಸೂಲು ಮಾಡಬೇಕು !

ನವ ದೆಹಲಿ : ಆಗಸ್ಟ್ ೧೦ ರಂದು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಕೃಷಿ ಕಾಯ್ದೆ ವಿರೋಧಿಸುತ್ತಾ ಬೃಹತ್ ಪ್ರಮಾಣದಲ್ಲಿ ಕೋಲಾಹಲವನ್ನುಂಟು ಮಾಡಿದರು. ಕೆಲವು ಸಂಸದರು ಮೇಜಿನ ಮೇಲೆ ನಿಂತು ವಿರೋಧಿಸಿದರು. ಈ ಎಲ್ಲ ಘಟನೆಗಳಿಂದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರ ಕಣ್ಣಲ್ಲಿ ನೀರು ತುಂಬಿತು.

ಈ ಬಗ್ಗೆ ಆಗಸ್ಟ್ ೧೧ ರಂದು ಸದನದಲ್ಲಿ ಮಾತನಾಡಿದ ನಾಯ್ಡು ಅವರು, ಸದನದಲ್ಲಿ ಏನೆಲ್ಲಾ ನಡೆಯಿತೋ ಅದು ತುಂಬಾ ಕೆಟ್ಟದಾಯಿತು. ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಕೆಲವು ಸಂಸದರು ಖಾಲಿ ಜಾಗಗಳಲ್ಲಿ ಹಾಗೆಯೇ ಮೇಜಿನ ಮೇಲೆ ನಿಂತು ಪುಸ್ತಕಗಳನ್ನು ಎಸೆದರು. ಈ ಎಲ್ಲಾ ದೃಶ್ಯಗಳನ್ನು ನೋಡಿದಾಗ ನನಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಕೆಲವು ಸದಸ್ಯರು ಸಭಾಂಗಣದ ಅಪವಿತ್ರ ಕೃತ್ಯವನ್ನು ಚಿತ್ರೀಕರಿಸಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದರು. ಇದು ಬಹಳ ಕಳವಳಕಾರಿ ವಿಷಯವಾಗಿದೆ. ಸಭಾಂಗಣದ ಘನತೆಗೆ ಧಕ್ಕೆ ತರುತ್ತಿದ್ದೇವೆ ಎಂದು ಅವರು ಜನರಿಗೆ ತೋರಿಸಿದರು. ಕೆಲವು ಸದಸ್ಯರು ತಾವು ಹೇಗೆ ಆಕ್ರಮಣಕಾರಿ ಇದ್ದೇವೆ ಎಂದು ತೋರಿಸುವ ಸ್ಪರ್ಧೆಯ ಪರಿಣಾಮದಿಂದ ಹೀಗಾಗಿದೆ, ಎಂದರು.