ಶಾಸಕರ ಮತ್ತು ಸಂಸದರ ಸಂಬಳ ಹೆಚ್ಚಾದಂತೆ ಸಾಮಾನ್ಯ ಜನತೆಯ ಸಂಬಳ ಹೆಚ್ಚಾಗುವುದಿಲ್ಲ ! ಶಾಸಕರ ಅಧಿಕಾರಾವಧಿಯು ೫ ವರ್ಷಗಳಾಗಿದ್ದರೂ ಅವರು ತಮ್ಮ ಜೀವಿತಾವಧಿಯಲ್ಲಿ ಪಿಂಚಣಿ ಮತ್ತು ಇತರ ಪ್ರಯೋಜನಗಳ ಲಾಭ ಪಡೆಯುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ದೆಹಲಿ – ಶಾಸಕರ ಸಂಬಳವನ್ನು ಹೆಚ್ಚಿಸುವ ದೆಹಲಿಯ ಎ.ಎ.ಪಿ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಇದರ ಪರಿಣಾಮವಾಗಿ ಈಗ ದೆಹಲಿಯ ಶಾಸಕರ ಒಟ್ಟು ಸಂಬಳ ೭೨ ಸಾವಿರ ದಿಂದ ೧ ಲಕ್ಷ ೭೦ ಸಾವಿರಕ್ಕೆ ಏರಿಕೆಯಾಗಲಿದೆ. ಇದರ ಜೊತೆಗೆ ಪ್ರತಿವರ್ಷ ರಜೆಯಲ್ಲಿ ಹೊರಗೆ ಹೋಗಲು ೧ ಲಕ್ಷ ರೂಪಾಯಿ ಸಹ ಪಡೆಯಲಿದ್ದಾರೆ. ಹೊಸ ವಾಹನದ ಖರೀದಿಗಾಗಿ ೧೨ ಲಕ್ಷ ಮುಂಗಡವನ್ನು ನೀಡಲಾಗುತ್ತದೆ.
Salaries of Delhi govt ministers, Leader of Opposition set to increase to Rs 1.70 lakhhttps://t.co/9zTltNCPe8
— Express Delhi-NCR 😷 (@ieDelhi) August 7, 2021