ನನ್ ಮತ್ತು ಪಾದ್ರಿಗಳ ಸಂಬಳದ ಮೇಲೆ ತೆರಿಗೆ ವಿಧಿಸಬೇಕು ! – ಕೇರಳ ಉಚ್ಚನ್ಯಾಯಾಲಯದ ಆದೇಶ

ಸಂವಿಧಾನದ ೨೫ನೇ ವಿಧಿ ಪ್ರಕಾರ ಧರ್ಮದ ಆಧಾರದ ಮೇಲೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ !

ಪ್ರತಿಯೊಬ್ಬ ದುಡಿಯುವ ಭಾರತೀಯನು ತೆರಿಗೆಯನ್ನು ಪಾವತಿಸಲೇಬೇಕು. ಈ ತೆರಿಗೆಯಿಂದ ದೇಶವನ್ನು ನಡೆಸಲಾಗುತ್ತದೆ. ಅದರಲ್ಲಿ ನನ್ ಮತ್ತು ಪಾದ್ರಿಗಳನ್ನು ಹೇಗೆ ಬೇರೆ ಇಡಬಹುದು ? ‘ಅವರು ತೆರಿಗೆ ಪಾವತಿಸಲು ಬಯಸದಿದ್ದರೆ, ಈ ದೇಶದಲ್ಲಿ ಇರಬಾರದು’ ಹೀಗೆ ಯಾರಾದರೂ ಹೇಳಿದರೆ ತಪ್ಪೇನಿದೆ ?

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಅರ್ಜಿಯೊಂದನ್ನು ಆಲಿಸುವಾಗ, ‘ಸಂವಿಧಾನದ ೨೫ ನೇ ವಿಧಿಯ ಪ್ರಕಾರ, ಯಾರಿಗೂ ಧರ್ಮದ ಆಧಾರದ ಮೇಲೆ ತೆರಿಗೆಯಲ್ಲಿ ವಿನಾಯಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ. ಈ ವಿಧಿ ಧರ್ಮಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ. ನನ್ ಮತ್ತು ಪಾದ್ರಿಗಳ ಸಂಬಳದಿಂದ ಟಿ.ಡಿ.ಎಸ್. (ತೆರಿಗೆ) ಕಡಿತಗೊಳಿಸುವುದು ಅಗತ್ಯವಿದೆ. ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಸಂಬಳ ಪಡೆಯುತ್ತಿದ್ದರೆ, ಟಿ.ಡಿ.ಎಸ್ ಅದನ್ನು ಕಡಿತಗೊಳಿಸಬೇಕು’, ಎಂದು ಸ್ಪಷ್ಟಪಡಿಸಿದೆ.

೧೯೪೪ ರಲ್ಲಿ, ಸಹಕಾರಿ ಹಾಗೂ ಅನುದಾನಿತ ಸಂಸ್ಥೆಗಳಿಂದ ನನ್ ಮತ್ತು ಪಾದ್ರಿಗಳಿಗೆ ನೀಡಲಾಗುತ್ತಿದ್ದ ಸಂಬಳದ ಮೇಲೆ ಯಾವುದೇ ತೆರಿಗೆ ಇರಲಿಲ್ಲ; ಆದರೆ, ೨೦೧೪ ರಲ್ಲಿ, ಈ ನಿಯಮವನ್ನು ತಿದ್ದುಪಡಿ ಮಾಡುವ ಮೂಲಕ, ನನ್ ಮತ್ತು ಪಾದ್ರಿಗಳನ್ನು ಈ ಕಾನೂನಿನಲ್ಲಿ ಸೇರಿಸಲಾಯಿತು. ಈ ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.