ಬಲಿಯಾ(ಉತ್ತರಪ್ರದೇಶ) ದಲ್ಲಿ ‘ಲವ್‌ಜಿಹಾದ’ !
ಹಿಂದೂ ಯುವತಿಯರನ್ನು ಮೋಹಿಸಿ ಅವರೊಂದಿಗೆ ಮದುವೆ ಮಾಡಿಕೊಳ್ಳುವ ಮತಾಂಧರಿಗೆ ಕಠೋರ ಶಿಕ್ಷೆ ವಿಧಿಸುವ ಮೂಲಕ ಉತ್ತರಪ್ರದೇಶ ಸರಕಾರ ‘ಲವ್‌ಜಿಹಾದ ವಿರೋಧಿ ಕಾನೂನು’ಅನ್ನು ಸಾರ್ಥಕಗೊಳಿಸಬೇಕು !- ಸಂಪಾದಕರು
ಬಲಿಯಾ (ಉತ್ತರಪ್ರದೇಶ) – ಹಿಂದೂ ಯುವತಿಗೆ ಬುರಖಾ ತೊಡಿಸಿ ನ್ಯಾಯಾಲಯಕ್ಕೆ ಬಂದು ನೋಂದಣಿ ಪದ್ಧತಿಯಿಂದ ವಿವಾಹವಾಗಲು (ರೆಜಿಸ್ಟರ್ ಮ್ಯಾರೇಜ್) ಪ್ರಯತ್ನಿಸುತ್ತಿದ್ದ ಮತಾಂಧ ದಿಲಶಾದ್ ಸಿದ್ದಿಕಿ ಎಂಬಾತನನ್ನು ಜನರು ಹಿಡಿದು ಕಟ್ಟಿ ಹಾಕಿದರು. ಇದು ಕೆಲ ಸಮಯ ಅಲ್ಲಿ ಉದ್ವಿಗ್ನತೆಯನ್ನುಂಟು ಮಾಡಿತು; ಆದರೆ ಪೊಲೀಸರು ಯುವತಿಗೆ ಸುರಕ್ಷಿತ ಸ್ಥಳದಲ್ಲಿಟ್ಟು ದಿಲಶಾದ್‌ನನ್ನು ಬಂಧಿಸಿದರು.
ಯುವತಿಯ ತಂದೆ ರಿಕ್ಷಾ ಚಾಲಕರಾಗಿದ್ದಾರೆ. ಬಿಲ್ಥರಾ ರಸ್ತೆಯಲ್ಲಿ ವಾಸಿಸುತ್ತಿದ್ದ ಯುವತಿಗೆ ೩ ತಿಂಗಳ ಹಿಂದೆ ಸ್ವಜಾತೀಯ ಯುವಕನೊಂದಿಗೆ ವಿವಾಹವಾಗಿತ್ತು. ಸ್ವಲ್ಪ ದಿನಗಳಲ್ಲಿ ಅವಳು ತವರು ಮನೆಗೆ ಮರಳಿ ಬಂದಳು. ಕೆಲವು ದಿನಗಳ ನಂತರ ಅವಳು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಳು. ಈ ಕುರಿತು ಸಂಬಂಧಿಕರು ಉಂಭಾವ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವು ‘ಲವ್‌ಜಿಹಾದ’ಗೆ ಸಂಬಂಧಿಸಿದೆ ಎಂದು ಪೊಲೀಸರ ಅನಿಸಿಕೆಯಾಗಿದ್ದರೂ ಯುವತಿಯ ಸಂಬಂಧಿಕರು ಮತ್ತು ಯುವತಿಯು ಅಂತಹ ಆರೋಪವನ್ನು ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಯುವತಿಯನ್ನು ಅಪಹರಿಸಿ ಮತಾಂತರ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.