ಪಾಕ್ ನಲ್ಲಿ ಮತಾಂಧರಿಂದ ಗಣಪತಿ ದೇವಸ್ಥಾನದ ವಿಧ್ವಂಸ !

ಶ್ರೀ ಗಣೇಶ, ಶಿವ ಮತ್ತು ಪಾರ್ವತಿಯ ಮೂರ್ತಿಗಳ ವಿಧ್ವಂಸ

* ಪಾಕಿಸ್ತಾನದಲ್ಲಿನ ಹಿಂದೂಗಳು ಹಾಗೂ ಅವರ ಮಂದಿರಗಳು ಅಸುರಕ್ಷಿತವಾಗಿರುವುದು ಹೊಸತೇನಲ್ಲ; ಆದರೆ ಅವರ ರಕ್ಷಣೆಗಾಗಿ ಭಾರತದಲ್ಲಿನ 85 ಕೋಟಿ ಹಿಂದೂಗಳು ಮತ್ತು ಅವರ ಸರಕಾರ, ಹಾಗೆಯೇ ಜಗತ್ತಿನಾದ್ಯಂತ ಇರುವ ಹಿಂದೂಗಳು ಧೋರಣಾತ್ಮಕ ಕೃತಿಗಳನ್ನು ಮಾಡುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 

* ಭಾರತದಲ್ಲಿನ ಜಾತ್ಯಾತೀತವಾದಿಗಳಿಗೆ ಇಸ್ಲಾಮಿ ದೇಶದಲ್ಲಿರುವ ಹಿಂದೂಗಳ ಸ್ಥಿತಿಯು ಏಕೆ ಕಾಣಿಸುತ್ತಿಲ್ಲ? ಈ ವಿಷಯದಲ್ಲಿ ಅವರು ಏಕೆ ಯಾವತ್ತೂ ಏನೂ ಮಾತನಾಡುವುದಿಲ್ಲ ? – ಸಂಪಾದಕರು 

* ಕೇವಲ ಪಾಕನಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಇರುವ ಹಿಂದೂಗಳ ಹಾಗೂ ಅವರ ಧಾರ್ಮಿಕ ಕ್ಷೇತ್ರಗಳನ್ನು ರಕ್ಷಿಸಲು ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಬಿಟ್ಟರೆ ಬೇರೆ ಪರ್ಯಾಯವಿಲ್ಲ ! – ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕ ನ ಪಂಜಾಬ್ ಪ್ರಾಂತ್ಯದಲ್ಲಿನ ಭೊಂಗ ನಗರದಲ್ಲಿ ಮತಾಂಧರು ಗಣಪತಿ ಮಂದಿರವನ್ನು ಧ್ವಂಸಗೊಳಿಸಿದರು. ಮಂದಿರದಲ್ಲಿನ ಶ್ರೀ ಗಣೇಶ, ಶಿವ ಮತ್ತು ಪಾರ್ವತಿಯ ಮೂರ್ತಿ ಹಾಗೂ ಗೊಂಚಲಿನ ಮತ್ತು ಗಾಜಿನ ಅಲಂಕಾರಿಕ ವಸ್ತುಗಳನ್ನು ಒಡೆದುಹಾಕಿದರು. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಲಾಗಿದೆ. ಇಲ್ಲಿ ಮತಾಂಧರು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಇಲ್ಲಿಯವರೆಗೂ ಯಾರ ಮೇಲೆಯೂ ಕಾರ್ಯಾಚರಣೆ ಮಾಡಲಾಗಿಲ್ಲ; ಬದಲಾಗಿ ಮಂದಿರದ ಹತ್ತಿರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಾಕಿಸ್ತಾನದ ಪ್ರಧಾನಮಂತ್ರಿಗಳ ಕಾರ್ಯಾಲಯವು ಈ ಘಟನೆಯನ್ನು ನೊಂದಣಿ ಮಾಡಿಕೊಂಡಿದ್ದು ಅಪರಾಧಿಗಳ ಮೇಲೆ ಕಾರ್ಯಾಚರಣೆ ಮಾಡುವ ಬಗ್ಗೆ ಆದೇಶ ನೀಡಿದೆ. ಅಲ್ಲಿನ ಉಪಆಯುಕ್ತರಾದ ಡಾ. ಖುರಮ ಶಹಜಾದರು ಮಂದಿರಕ್ಕೆ ಭೇಟಿ ನೀಡಿ ನಿರೀಕ್ಷಣೆ ಮಾಡಿದರು.

ಪೊಲೀಸರಿಂದ ದುರ್ಲಕ್ಷ್ಯ !

ಪಾಕಿಸ್ತಾನದಲ್ಲಿನ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಡಾ. ರಮೇಶ ವಂಕಾವಣಿಯವರು ‘ಸ್ಥಳೀಯ ಹಿಂದೂಗಳು ಈ ಬಗ್ಗೆ ಪೊಲೀಸರ ಬಳಿ ದೂರು ನೊಂದಾಯಿಸಲು ಪ್ರಯತ್ನಿಸಿದರೂ ಪೊಲೀಸರು ಇದರ ಕಡೆಗೆ ದುರ್ಲಕ್ಷ್ಯ ಮಾಡಿದರು. ಇದರಿಂದಾಗಿ ಹಿಂದೂಗಳು ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಬಳಿ ಆರೋಪಿಗಳ ಮೇಲೆ ಕಾರ್ಯಾಚರಣೆ ನಡೆಸಬೇಕಾಗಿ ವಿನಂತಿಸಿದರು’ ಎಂದು ಹೇಳಿದ್ದಾರೆ.