ನ್ಯಾಯಾಲಯದಿಂದ ಜೋಧಾ-ಅಕಬರ ರವರ ಉದಾಹರಣೆ
ಪ್ರಯಾಗರಾಜ (ಉತ್ತರಪ್ರದೇಶ) – ಅಕಬರ ಹಾಗೂ ಜೋಧಾಬಾಯಿಯವರು ಮತಾಂತರವಾಗದೆ ವಿವಾಹವಾದರು. ಅವರು ಒಬ್ಬರನ್ನೊಬ್ಬರು ಗೌರವಿಸಿದರು ಹಾಗೂ ಧಾರ್ಮಿಕ ಭಾವನೆಗಳನ್ನು ಗೌರವಿಸಿದರು. ಅವರಿಬ್ಬರ ಸಂಬಂಧದ ನಡುವೆ ಧರ್ಮವು ಎಂದಿಗೂ ಅಡ್ಡವಾಗಿರಲಿಲ್ಲ. ಧರ್ಮವು ಶ್ರದ್ಧೆಯ ವಿಷಯವಾಗಿದೆ ಹಾಗೂ ಅದು ನಮ್ಮ ಜೀವನಶೈಲಿಯನ್ನು ದರ್ಶಿಸುತ್ತದೆ. ಈಶ್ವರನ ಬಗ್ಗೆ ಭಾವವನ್ನು ಪ್ರಕಟಪಡಿಸಲು ಯಾವುದಾದರೂ ವಿಶೇಷ ಪೂಜಾ ಪದ್ಧತಿಯೇ ಇರಬೇಕು ಎಂದಿಲ್ಲ. ವಿವಾಹವಾಗಲು ಸಮಾನ ಧರ್ಮದ ಅಗತ್ಯ ಕೂಡ ಇಲ್ಲ. ಕೇವಲ ವಿವಾಹಕ್ಕಾಗಿ ಮತಾಂತರ ಮಾಡುವುದು ಸಂಪೂರ್ಣವಾಗಿ ತಪ್ಪಾಗಿದೆ, ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಅಲಾಹಾಬಾದಿನ ಉಚ್ಛ ನ್ಯಾಯಾಲಯವು ವಿವಾಹದ ಸಮಯದಲ್ಲಿ ಮತಾಂತರದಿಂದ ದೂರವಿರಲು ಸಲಹೆ ನೀಡಿತು.
Religious conversion just for sake of marriage illegal: Allahabad HC
Read @ANI Story | https://t.co/RVsA8w0gWf pic.twitter.com/85PkNjBrZP
— ANI Digital (@ani_digital) October 30, 2020
ಉತ್ತರಪ್ರದೇಶದಲ್ಲಿನ ಎಟಾ ಜಿಲ್ಲೆಯಲ್ಲಿ ಜಾವೇದ್ ಎಂಬುವನು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ಅವಳನ್ನು ವಿವಾಹವಾದನು. ಅವನು ಆ ಹುಡುಗಿಯನ್ನು ಮತಾಂತರಗೊಳಿಸಲು ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದನು. ಅವಳು ಮತಾಂತರವಾದ ಬಳಿಕ ಅವರಿಬ್ಬರ ವಿವಾಹವಾಯಿತು; ಆದರೆ ಆ ಹುಡುಗಿಯು ನ್ಯಾಯಾಧೀಶರ ಮುಂದೆ ಅವಳು ಮೋಸವಾಗಿರುವುದಾಗಿ ನುಡಿದಳು. ಆದ್ದರಿಂದ ಜಾವೇದನನ್ನು ಬಂಧಿಸಲಾಯಿತು. ಬಂಧನದ ಬಳಿಕ ಜಾಮೀನು ಪಡೆಯಲು ಜಾವೇದನು ಅರ್ಜಿ ಸಲ್ಲಿಸಿದನು. ಅದರ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು.
1. ಉಚ್ಛ ನ್ಯಾಯಾಲಯವು, ಈ ರೀತಿಯ ಮತಾಂತರದಿಂದ ಧರ್ಮದ ಬಗ್ಗೆ ವಿಶೇಷ ನಂಬಿಕೆಯಿರುವುದಿಲ್ಲ. ಈ ತೀರ್ಮಾನವು ಕೇವಲ ಒತ್ತಡ, ಭಯ ಹಾಗೂ ಲಾಲಸೆಯಿಂದ ತೆಗೆದುಕೊಳ್ಳಲಾಗಿರುತ್ತದೆ. ಕೇವಲ ವಿವಾಹಕ್ಕಾಗಿ ಮತಾಂತರಗೊಳ್ಳುವುದು ತಪ್ಪಾಗಿದೆ. ಇದಕ್ಕೆ ಯಾವುದೇ ರೀತಿಯ ಸಂವಿಧಾತ್ಮಕ ಒಪ್ಪಿಗೆಯಿರುವುದಿಲ್ಲ. ವೈಯಕ್ತಿಕ ಪ್ರಯೋಜನಕ್ಕಾಗಿ ಮಾಡಿರುವ ಮತಾಂತರಿಂದ ಕೇವಲ ವೈಯಕ್ತಿಕ ಹಾನಿಯೊಂದಿಗೆ ದೇಶ ಹಾಗೂ ಸಮಾಜಕ್ಕಾಗಿ ಘಾತಕವಾಗಿರುತ್ತದೆ. ಈ ರೀತಿಯ ಮತಾಂತರದಿಂದ ಘಟನೆಗಳಿಂದ ಮತದ ಗುತ್ತಿಗೆದಾರರಿಗೆ ಬಲ ಸಿಗುತ್ತದೆ ಹಾಗೂ ವಿಭಜನೆ ಮಾಡುವ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತದೆ.
2. ನ್ಯಾಯಾಲಯವು ಈ ಯಾಚಿಕೆಗೆ ತೀರ್ಮಾನ ನೀಡುವಾಗ, ಮತವು ಶ್ರದ್ಧೆಯ ವಿಷಯವಾಗಿರುತ್ತದೆ. ಯಾರೇ ಆದರೂ ತಮ್ಮ ಪೂಜಾ ಪದ್ಧತಿಗೆ ಅನುಸಾರವಾಗಿ ಈಶ್ವರನ ವಿಷಯವಾಗಿ ಶ್ರದ್ಧೆ ವ್ಯಕ್ತ ಪಡಿಸಬಹುದು. ವಿವಾಹದ ಕಾರಣಗಳಿಂದ ಯಾವ ಪೂಜೆ ಪದ್ಧತಿ ಅಥವ ಧರ್ಮಕ್ಕೆ ಅಡ್ಡ ಬರಲು ಸಾಧ್ಯವಿಲ್ಲ. ಮತಾಂತರಗೊಳ್ಳದೆ ವಿವಾಹವಾಗಬಹುದು.