ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಗಾಂಧಿ ಇವರ ನಿಧನ !

ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರಲ್ಲಿ ಪಿತೃಛಾಯೆ ಕಳೆದುಕೊಂಡ ಭಾವನೆ

ನ್ಯಾಯವಾದಿ ಗೋವಿಂದಜಿ ಗಾಂಧಿ

ಸಾತಾರ ( ಮಹಾರಾಷ್ಟ್ರ) – ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಪುಖರಾಜ ಗಾಂಧಿ (ವಯಸ್ಸು 71 ವರ್ಷ) ಇವರು ಅಲ್ಪಕಾಲೀನ ಕಾಯಿಲೆಯಿಂದ ನಿಧನರಾದರು. ರಾಜಸ್ಥಾನದ ಪ್ರವಾಸದಲ್ಲಿರುವಾಗ ಜಯಪುರದಲ್ಲಿ ಈ ಘಟನೆ ನಡೆದಿದೆ. ನ್ಯಾಯವಾದಿ ಗೋವಿಂದ ಗಾಂಧಿ ಇವರ ಅನಿರೀಕ್ಷಿತ ನಿಧನದಿಂದ ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರು ದುಃಖ ಪರಿತಾಪದಿಂದ ಮರುಗುತ್ತಿದ್ದಾರೆ. ಇವರ ನಂತರ ಮಗ ಉಮೇಶ ಗಾಂದಿ,  2 ಹೆಣ್ಣು ಮಕ್ಕಳು, 2 ಅಳಿಯಂದಿರು ಮತ್ತು ಮೊಮ್ಮಕ್ಕಳು ಹೀಗೆ ಕುಟುಂಬ ಇದೆ. ಆಗಸ್ಟ್ 4 ರಂದು ಅವರ ಮೃತದೇಹವನ್ನು ಸಾತಾರಾ ಕ್ಕೆ ತರುವವರಿದ್ದು ಶಾಹುಪುರಿಯಲ್ಲಿನ ದೇಶಪಾಂಡೆ ಮಾರುತಿ ಬಳಿಯ ಅವರ ನಿವಾಸ ಸ್ಥಾನದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಸಂಗಮ ಮಾಹುಲಿಯಲ್ಲಿನ ಕೈಲಾಸ ಸ್ಮಶಾನ ಭೂಮಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಮಾಡಲಾಗುವುದು. 50 ವರ್ಷಗಳಗಿಂತಲೂ ಹೆಚ್ಚುಕಾಲದಿಂದ ತನು, ಮನ ಧನದಿಂದ ನಿರಂತರವಾಗಿ ಹಿಂದೂ ಸಂಘಟನೆಯ ಕಾರ್ಯವನ್ನು ಮಾಡಿರುವ ನ್ಯಾಯವಾದಿ ಗೋವಿಂದಜಿ ಗಾಂಧಿ ಇವರ ನಿಧನದಿಂದ ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರಲ್ಲಿ ಪಿತೃಛಾಯೆಯನ್ನು ಕಳೆದುಕೊಂಡಂತಹ ಭಾವನೆಯು ಉದ್ಭವಿಸಿದೆ.