ಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ದೇಶದಲ್ಲಿನ ಗುಲಾಮಗಿರಿಯನ್ನು ತೋರಿಸುವ ಹೆಸರುಗಳನ್ನು ಬದಲಾಯಿಸಲು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಪ್ರಯತ್ನ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ!
ಲಕ್ಷ್ಮಣಪುರಿ (ಉತ್ತರಪ್ರದೇಶ) – ಈ ರಾಜ್ಯದಲ್ಲಿ ಗಾಜಿನ ಬಳೆಗಳಿಗೆ ಪ್ರಸಿದ್ಧವಾಗಿರುವ ಫಿರೊಜಾಬಾದ್ ಜಿಲ್ಲೆಯ ಹೆಸರನ್ನು ಬದಲಾಯಿಸಿ ಚಂದ್ರನಗರ ಎಂದು ನಾಮಕರಣ ಮಾಡುವಂತೆ ಸಲ್ಲಿಸಿದ ಬೇಡಿಕೆಯ ಠರಾವಿಗೆ ಜಿಲ್ಲಾ ಪರಿಷತ್ತು ಅನುಮೋದನೆ ನೀಡಿದೆ. ಇದರ ಮೊದಲಿನ ಹೆಸರು ‘ಚಂದವಾಡೆ’ ಎಂದಾಗಿತ್ತು. 1566 ರಲ್ಲಿ ಅಕ್ಬರ್ ನ ಕಾಲದಲ್ಲಿ ಅದನ್ನು ಬದಲಾಯಿಸಿ ‘ಫಿರೊಜಾಬಾದ್’ ಎಂದು ಮಾಡಲಾಯಿತು. ಅಕ್ಬರ್ ನು ತನ್ನ ಸರದಾರ ಫಿರೊಜಶಹಾನನ್ನು ಈ ಪಟ್ಟಣಕ್ಕೆ ಕಳುಹಿಸಿದ್ದರಿಂದ ಅದರ ಹೆಸರನ್ನು ‘ಫಿರೊಜಾಬಾದ್’ ಎಂದು ಮಾಡಲಾಗಿತ್ತು ಇಲ್ಲಿಯ ಪುರಸಭೆಯ ಕಛೇರಿಯ ಮುಂದೆ ಫಿರೊಜ ಶಾಹನ ಗೋರಿ (ಮಕಬರಾ(ಕಬ್ರ) ಇದೆ. ರಾಜಾ ಚಂದ್ರಸೇನನು ಚಂದ್ರವಾಡದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಅವರ ಹೆಸರಿನಲ್ಲಿ ‘ಚಂದ್ರನಗರ’ ಎಂದು ಹೆಸರಿಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
The Yogi Adityanath government has already changed the name of Allahabad to Prayagraj, Faizabad to Ayodhya and Mughalsarai to Deen Dayal Upadhyaya Nagar#Firozabad #ChandraNagarhttps://t.co/RaHvaHKxqU
— India TV (@indiatvnews) August 2, 2021