ಸರ್ವೋಚ್ಚ ನ್ಯಾಯಾಲಯದಲ್ಲಿ 8, ಮತ್ತು ಉಚ್ಚ ನ್ಯಾಯಾಲಯಗಳಲ್ಲಿ 454 ಇಷ್ಟು ಸಂಖ್ಯೆಯಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ.

ಜಿಲ್ಲಾ ನ್ಯಾಯಾಲಯಗಳು ಮತ್ತು ಅವುಗಳ ಅಧೀನವಿರುವ ನ್ಯಾಯಾಲಯಗಳಲ್ಲಿ 5000 ಕ್ಕೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ !

* ಇದು ಸ್ವಾತಂತ್ರ್ಯಾನಂತರದ 74 ವರ್ಷಗಳ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

* ಒಂದೆಡೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವಾಗ, ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದಲ್ಲಿ, ಹಲವು ಪ್ರಕರಣಗಳು ವರ್ಷಗಟ್ಟಲೆ ಬಾಕಿ ಉಳಿಯುವುವು ಮತ್ತು ಜನರಿಗೆ ತಡವಾಗಿ ನ್ಯಾಯ ಸಿಗುವುದು. ‘ನ್ಯಾಯ ವಿಳಂಬ ಎಂದರೆ ನ್ಯಾಯ ನಿರಾಕರಣೆಗೆ ಸಮಾನ’ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ತ್ವರಿತ ಮತ್ತು ಶೀಘ್ರವಾಗಿ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸಬೇಕು, ಎಂದು ಜನರ ಅಪೇಕ್ಷೆಯಾಗಿದೆ !

ನವ ದೆಹಲಿ : ಸರ್ವೋಚ್ಚ ನ್ಯಾಯಾಲಯದಲ್ಲಿ 8 ಮತ್ತು ಉಚ್ಚ ನ್ಯಾಯಾಲಯಗಳಲ್ಲಿ 454 ಇಷ್ಟು ಸಂಖ್ಯೆಯಲ್ಲಿ ನ್ಯಾಯಾಧೀಶ ಹುದ್ದೆಗಳು ಖಾಲಿ ಇರುವುದು ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಲಯಗಳು ಮತ್ತು ಅವುಗಳ ಅಧೀನದ ನ್ಯಾಯಾಲಯಗಳಲ್ಲಿ 5,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಜುಲೈ 28 ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರನೀಡುತ್ತಾ ಕೇಂದ್ರ ಸರಕಾರವು ಈ ಮಾಹಿತಿಯನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿರುವ ಒಟ್ಟು ನ್ಯಾಯಾಧೀಶರ ಸಂಖ್ಯೆ 34 ಆಗಿದ್ದು ಅವುಗಳಲ್ಲಿ 8 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಇರುವ 26 ನ್ಯಾಯಾಧೀಶರಲ್ಲಿ 25 ಪುರುಷರು ಮತ್ತು 1 ಮಹಿಳಾ ನ್ಯಾಯಾಧೀಶರಿದ್ದಾರೆ.

ಕೇಂದ್ರ ಸರಕಾರವು, ದೇಶದ ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು ನ್ಯಾಯಾಧೀಶರ ಸಂಖ್ಯೆ 1,098 ಇಷ್ಟಿದ್ದು, ಅವುಗಳಲ್ಲಿ 454 ಹುದ್ದೆಗಳು ಖಾಲಿಯಿವೆ. ಅವುಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿದ್ದು ಅಲ್ಲಿ 160 ಹುದ್ದೆಗಳಿವೆ, ಮತ್ತು ಕಡಿಮೆ ಎಂದರೆ ಸಿಕ್ಕಿಂ ಉಚ್ಚ ನ್ಯಾಯಾಲಯದಲ್ಲಿ ಮೂರು ಹುದ್ದೆಗಳು ಖಾಲಿ ಇವೆ. ಪ್ರಸ್ತುತ, ದೇಶದ ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ 644 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ, ಅದರಲ್ಲಿ 567 ಪುರುಷರು ಮತ್ತು 77 ಮಹಿಳಾ ನ್ಯಾಯಧೀಶರು ಇದ್ದಾರೆ.

ಸರ್ವೋಚ್ಚ ನ್ಯಾಯಾಲಯದಲ್ಲಿ 66 ಸಾವಿರ 727 ಪ್ರಕರಣಗಳು ಬಾಕಿಯಿದ್ದರೆ, 57 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಉಚ್ಚನ್ಯಾಯಾಲಯದಲ್ಲಿ ಬಾಕಿ ಇವೆ !

2021 ರ ಮಾರ್ಚ್ 1 ರವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ 66,727 ಪ್ರಕರಣಗಳು ಬಾಕಿ ಉಳಿದಿದ್ದರೆ, ದೇಶದ 25 ಉಚ್ಚ ನ್ಯಾಯಾಲಯಗಳಲ್ಲಿ 57 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೇಂದ್ರವು ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ಈ 57 ಲಕ್ಷ ಪ್ರಕರಣಗಳಲ್ಲಿ ಶೇ. 40 ರಷ್ಟು ಪ್ರಕರಣಗಳು 5 ವರ್ಷಕ್ಕಿಂತ ಜಾಸ್ತಿ ಕಾಲಾವಧಿಯದ್ದಾಗಿವೆ. ಬಾಕಿ ಇರುವ ಒಟ್ಟು ಪ್ರಕರಣಗಳಲ್ಲಿ ಶೇ. 54 ರಷ್ಟು ಖಟ್ಲೆಗಳು ಅಲಹಾಬಾದ್, ಪಂಜಾಬ್ ಮತ್ತು ಹರಿಯಾಣ, ಮದ್ರಾಸ್, ಮುಂಬಯಿ ಮತ್ತು ರಾಜಸ್ಥಾನ ಈ ಐದು ನ್ಯಾಯಾಲಯಗಳಲ್ಲಿ ಬಾಕಿ ಇವೆ.