ಇಂದಿನವರೆಗೂ ಅನೇಕ ಭಯೋತ್ಪಾದನೆಯ ಪ್ರಕರಣಗಳಲ್ಲಿ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಮುಸಲ್ಮಾನರು ಭಾಗವಹಿಸಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಅಂತಹವರಿಗೆ ಆಧಾರ ಕಾರ್ಡ್ ಇತ್ಯಾದಿಗಳನ್ನು ನೀಡಿದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ಮೇಲೆ ದೇಶದ್ರೋಹದ ಅಪರಾಧವನ್ನು ನೋಂದಾಯಿಸಿ ಅವರನ್ನು ಆಜೀವ ಕಾರಾಗೃಹದಲ್ಲಿಡಬೇಕು !
ಗಾಝಿಯಾಬಾದ್ (ಉತ್ತರಪ್ರದೇಶ) – ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ. ಶಾಸಕ ಗುರ್ಜರರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆ ಲಾಭಾರ್ಥಿಗಳ ಸಂಖ್ಯೆಯು ಶೇಕಡ 70ಕ್ಕಿಂತ ಹೆಚ್ಚಾಗಿದ್ದು ಈ ಪ್ರಕರಣದ ಮೇಲೆ ತಕ್ಷಣ ವಿಚಾರಣೆ ನಡೆಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
प्रधानमंत्री आवास योजना: दिल्ली के नजदीक रोहिंग्या और बांग्लादेशियों को दिए गए मकान?https://t.co/D2IbNcI8sQ
— India TV Hindi (@IndiaTVHindi) July 28, 2021
ಶಾಸಕರಾದ ಗುರ್ಜರರು ಸಂಬಂಧಪಟ್ಟ ವಿಭಾಗದಿಂದ ಈ ವಿಷಯದ ಮೇಲೆ ಮಾಹಿತಿಯನ್ನು ತರಿಸಿಕೊಂಡು ನೋಡಿದಾಗ ಅದರಲ್ಲಿ ಮೇಲೆ ನೀಡಿದ ಮಾಹಿತಿಯು ಸ್ಪಷ್ಟವಾಯಿತು. ಈ ರೀತಿಯ ನಕಲಿ ಕಾಗದಪತ್ರಗಳ ಆಧಾರ ಮೇಲೆ ಆಧಾರ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹಾಗೂ ಪರಿಚಯ ಪತ್ರವನ್ನು ಪಡೆದುಕೊಂಡಿರುವವರೆಲ್ಲರ ತಪಾಸಣೆ ಮಾಡಿ ಅದನ್ನು ರದ್ದು ಪಡಿಸಬೇಕು, ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಂತರ್ಗತವಾಗಿ ಕಠಿಣ ಕಾರ್ಯಾಚರಣೆ ನಡೆಸುವಂತಾಗಬೇಕು, ಎಂಬ ಬೇಡಿಕೆಯನ್ನೂ ಗುರ್ಜರರು ಸಲ್ಲಿಸಿದ್ದಾರೆ.