ಲಂಡನ್ (ಬ್ರಿಟನ್) – ‘ಯುನಿವರ್ಸಿಟಿ ಕಾಲೇಜ ಲಂಡನ್’ ಕೊರೊನಾ ಲಸಿಕೆಯ ಕುರಿತು ನಡೆಸಿದ ಅಧ್ಯಯನದಲ್ಲಿ, ‘ಫೈಜರ್’ ಮತ್ತು ‘ಅಸ್ಟ್ರಾಜೆನೆಕಾ’(ಕೊವಿಶಿಲ್ಡ್) ಕೊರೊನಾ ತಡೆಗಟ್ಟುವ ಲಸಿಕೆಯ ಎರಡು ಡೋಸ್ ತೆಗೆದುಕೊಂಡ ನಂತರವೂ ಪ್ರತಿರೋಧಕದ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ, ಕೊರೊನಾದಿಂದ ರಕ್ಷಿಸಲು ಈ ಲಸಿಕೆಯ ೨ ಡೋಸ್‌ಅನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ; ಆದರೆ, ಈ ಲಸಿಕೆಗಳ ಎರಡೂ ಡೋಸ್‌ಅನ್ನು ತೆಗೆದುಕೊಂಡ ನಂತರವೂ ೨-೩ ತಿಂಗಳಲ್ಲಿ ಪ್ರತಿರೋಧಕ ಕಡಿಮೆಯಾಗುತ್ತದೆ. ೧೮ ವರ್ಷಕ್ಕಿಂತ ಮೇಲ್ಪಟ್ಟ ೬೦೦ ಜನರ ಅಧ್ಯಯನದಿಂದ ಈ ನಿಷ್ಕರ್ಷವನ್ನು ತೆಗೆಯಲಾಯಿತು. ಇದರಲ್ಲಿ ವ್ಯಕ್ತಿಯ ವಯಸ್ಸು ಅಥವಾ ಅವರಿಗಿರುವ ಇತರ ಕಾಯಿಲೆಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.
Lancet: Pfizer, AstraZeneca antibody levels start waning after six weeks https://t.co/j05tE4tvri
— TOI World News (@TOIWorld) July 27, 2021
೧. ‘ಫೈಜರ್’ ಮತ್ತು ‘ಅಸ್ಟ್ರಾಜೆನೆಕಾ’ ಲಸಿಕೆಗಳಿಂದ ತಯಾರಾಗಿರುವ ‘ಕೊರೊನಾ ಪ್ರತಿರೋಧಕ’ಗಳು ೬ ವಾರಗಳಲ್ಲಿ ದುರ್ಬಲಗೊಳ್ಳಲು ಪ್ರಾರಂಭವಾಗುತ್ತವೆ ಮತ್ತು ೧೦ ನೇ ವಾರದಲ್ಲಿ ಶೇ. ೫೦ ರಷ್ಟು ಇಳಿಕೆಯಾಗುತ್ತದೆ. ಎಂದು ‘ಲ್ಯಾನ್ಸೆಟ್’ ಈ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
೨. ಯುನಿವರ್ಸಿಟಿ ಕಾಲೇಜ್ ಲಂಡನ್ ಪ್ರಕಾರ, ಒಂದುವೇಳೆ ಪ್ರತಿರೋಧಕಗಳು ವೇಗವಾಗಿ ಕಡಿಮೆಯಾಗುತ್ತಿದ್ದಲ್ಲಿ, ಈ ಲಸಿಕೆಗಳಿಂದ ಸಿಗುವ ರಕ್ಷಣೆ ಕಡಿಮೆಯಾಗುತ್ತದೆ. ಹಾಗೂ ಅದರಲ್ಲಿಯೇ ರೋಗಾಣುಗಳ ಹೊಸ ವಿಧಗಳು ಕಂಡು ಬರುತ್ತಿವೆ.