ಶೇರ್ ಬಹದ್ದೂರ್ ದೆವುಬಾನನ್ನು ಪ್ರಧಾನಿಯನ್ನಾಗಿಸಬೇಕೆಂದು ನೇಪಾಲದ ಸರ್ವೋಚ್ಚ ನ್ಯಾಯಾಲಯದ ಆದೇಶ

ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಓಲಿಗೆ ಆಘಾತ

ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ರದ್ದು

ಶೇರ್ ಬಹದ್ದೂರ್ ದೆಉಬಾ

ಕಾಠಮಾಂಡು (ನೇಪಾಲ) – ನೇಪಾಲದ ಸರ್ವೋಚ್ಚ ನ್ಯಾಯಾಲಯವು ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಓಲಿಗೆ ‘ವಿರೋಧಿ ಪಕ್ಷವಾಗಿರುವ ನೇಪಾಲಿ ಕಾಂಗ್ರೆಸ್‍ನ ಅಧ್ಯಕ್ಷ ಶೇರ್ ಬಹದ್ದೂರ್ ದೆಉಬಾ ಇವರನ್ನು ೨ ದಿನದೊಳಗೆ ದೇಶದ ಪ್ರಧಾನಿಯನ್ನಾಗಿ ಮಾಡಿ’, ಎಂದು ಆದೇಶ ನೀಡಿದೆ. ಅದೇ ರೀತಿ ಸಂಸತ್ತನ್ನು ವಿಸರ್ಜಿಸುವ ಆದೇಶವನ್ನೂ ರದ್ದು ಪಡಿಸಿದೆ. ಈ ಹಿಂದೆ ವಿವಿಧ ಪಕ್ಷಗಳಿಗೆ ಬಹುಮತ ಸಿಗದೇ ಇದ್ದರಿಂದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಇವರು ಓಲಿ ಇವರನ್ನು ಮತ್ತೆ ಉಸ್ತುವಾರಿ ಪ್ರಧಾನಿಯಾಗಿ ನೇಮಿಸಿದ್ದರು. ಬರುವ ಜುಲೈ ೧೮ ರಂದು ಸಂಸತ್ತಿನ ಸಭೆಯಲ್ಲಿ ತಿಳಿಸುವಂತೆಯೂ ನ್ಯಾಯಾಲಯವು ಹೇಳಿದೆ.