
ನವದೆಹಲಿ – ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ವಾದವನ್ನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ವಕೀಲ ರಮೇಶ್ ಕುಮಾರನ್ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಹಾಜರಿದ್ದರು. ಈ ವೇಳೆ ಅವರು, ‘ಆರೋಪಿ ವಿರುದ್ಧದ ಅಪರಾಧ ರದ್ದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು. (ತೀರ್ಪು ತಮ್ಮ ಪರವಾಗಿ ಬರಲು ನ್ಯಾಯಾಲಯದ ಮೇಲೆ ಒತ್ತಡ ಹೇರುವುದು ನ್ಯಾಯಾಂಗವನ್ನು ಒತ್ತೆಯಾಳಾಗಿಸಿದಂತೆ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು)
ಇದಕ್ಕೆ ನ್ಯಾಯಮೂರ್ತಿ ಅಭಯ ಎಸ್. ಓಕ್ ಮತ್ತು ನ್ಯಾಯಮೂರ್ತಿ ಉಜ್ವಲ ಭುಯಾನ್ ಅವರ ಪೀಠವು ವಕೀಲರಿಗೆ ಮಾರ್ಚ್ 7 ರವರೆಗೆ ಲಿಖಿತ ಕ್ಷಮೆಯಾಚಿಸಲು ಹೇಳಿದೆ. ನ್ಯಾಯಮೂರ್ತಿ ಓಕ್ ಇವರು, ‘ನಾವು ನಿಮ್ಮ ಅರ್ಜಿಯನ್ನು ಸ್ವೀಕರಿಸದಿದ್ದರೆ, ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ ಎಂದು ನೀವು ನ್ಯಾಯಾಲಯಕ್ಕೆ ಹೇಗೆ ಬೆದರಿಕೆ ಹಾಕಬಹುದು. ನೀವು ವಕೀಲರಾಗಿದ್ದೀರಿ. ನಿಮ್ಮ ಪರವಾನಗಿಯನ್ನು ಅಮಾನತುಗೊಳಿಸಲು ಮತ್ತು ಪ್ರಕರಣ ದಾಖಲಿಸಲು ನಾವು ‘ಬಾರ್ ಕೌನ್ಸಿಲ್’ ಗೆ ಹೇಳಬಹುದು’ ಎಂದು ಹೇಳಿದರು.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ