ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರದ ನಿಲುವು ಸ್ಪಷ್ಟನೆ
ನವ ದೆಹಲಿ: ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಹೇರುವುದನ್ನು ಕೇಂದ್ರ ಸರಕಾರ ವಿರೋಧಿಸಿದೆ. ಈ ಸಂಬಂಧ ಅರ್ಜಿಯ ಕುರಿತು ಕೇಂದ್ರ ಸರಕಾರವು ತನ್ನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದೆ. ಇಂತಹ ರಾಜಕಾರಣಿಗಳಿಗೆ 6 ವರ್ಷಗಳ ಅನರ್ಹತೆ ಸಾಕು ಎಂದು ಸರಕಾರ ಹೇಳಿದೆ. ಅಂತಹ ಅನರ್ಹತೆಯ ಹೇರಿಕೆ ಸಂಪೂರ್ಣವಾಗಿ ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಅರ್ಜಿಯಲ್ಲಿನ ಬೇಡಿಕೆಯೆಂದರೆ ಕಾನೂನನ್ನು ಪುನಃ ಬರೆಯುವುದು ಅಥವಾ ಸಂಸತ್ತಿಗೆ ನಿರ್ದಿಷ್ಟ ರೀತಿಯಲ್ಲಿ ಶಾಸನ ಮಾಡಲು ನಿರ್ದೇಶಿಸುವುದು. ಇದು ನ್ಯಾಯಾಂಗ ಪರಿಶೀಲನೆಯ ಹಕ್ಕುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ, ಎಂದು ಹೇಳಿದೆ.
1. ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ 2016 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, 1951ರ ಕಲಂ 8 ಮತ್ತು 9 ರ ಪ್ರಜಾಪ್ರತಿನಿಧಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಜನಾಹಿತ ಅರ್ಜಿಯನ್ನು ದಾಖಲಿಸಿದ್ದರು. ಅವರು, ‘ರಾಜಕೀಯ ಪಕ್ಷಗಳಿಗೆ ಒಳ್ಳೆಯ ಪ್ರತಿಭೆ ಇರುವವರು ಏಕೆ ಸಿಗುತ್ತಿಲ್ಲ?’ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿದ್ದರು. ದೇಶದಲ್ಲಿ ಸಂಸದರು ಮತ್ತು ಶಾಸಕರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಶೀಘ್ರವಾಗಿ ಮುಗಿಸಬೇಕು ಮತ್ತು ತಪ್ಪಿತಸ್ಥ ರಾಜಕಾರಣಿಗಳನ್ನು ಜೀವಾವಧಿ ನಿಷೇಧಗೊಳಿಸಬೇಕು ಎಂದು ಒತ್ತಾಯಿಸಿದ್ದರು.
2. ಕೇಂದ್ರವು, ಈ ನಿಬಂಧನೆಗಳ ಅಡಿಯಲ್ಲಿ ಜೀವಾವಧಿ ಅನರ್ಹತೆಯ ಶಿಕ್ಷೆಯನ್ನು ವಿಧಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಅಪರಾಧಿಗಳನ್ನು ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಆಯ್ಕೆ ಮಾಡಿ ಕಾನೂನು ಮಾಡುವ ಹಕ್ಕನ್ನು ನೀಡುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ! ಅಂತಹವರನ್ನು ಜೀವಾವಧಿ ನಿಷೇಧ ಮಾಡಬೇಕು! |