Supreme Court Judgement : ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’, ‘ಪಾಕಿಸ್ತಾನಿ’ ಎಂದು ಕರೆಯುವುದು ಅಪರಾಧವಲ್ಲ! – ಸುಪ್ರೀಂ ಕೋರ್ಟ್

ನವದೆಹಲಿ – ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’ ಮತ್ತು ‘ಪಾಕಿಸ್ತಾನಿ’ ಎಂದು ಕರೆಯುವುದು ತಪ್ಪು; ಆದರೆ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು ಇತ್ಯಾದಿ) ಅಡಿಯಲ್ಲಿ ಆರೋಪದಿಂದ ಒಬ್ಬ ವ್ಯಕ್ತಿಯನ್ನು ಬಿಡುಗಡೆ ಮಾಡಿದೆ. ನ್ಯಾಯಲಯವು, ನೀಡಲಾದ ಹೇಳಿಕೆಯು ನಿಸ್ಸಂದೇಹವಾಗಿ ತಪ್ಪು ಎಂದು ಹೇಳಿದೆ. ಆದಾಗ್ಯೂ, ಇದು ಅರ್ಜಿದಾರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ.

1. ಜಾರ್ಖಂಡ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಮೇಲಿನ ತೀರ್ಪು ನೀಡಿದೆ. ಈ ಪ್ರಕರಣವು ಚಾಸ್‌ನ ಉಪವಿಭಾಗೀಯ ಕಚೇರಿಯಲ್ಲಿ ಉರ್ದು ಭಾಷಾಂತರಕಾರ ಮತ್ತು ಕಾರ್ಯನಿರ್ವಾಹಕ ಗುಮಾಸ್ತ (ಮಾಹಿತಿ ಹಕ್ಕು) ದಾಖಲಿಸಿದ ಅಪರಾಧಕ್ಕೆ ಸಂಬಂಧಿಸಿತ್ತು.

2. ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಮಾಹಿತಿ ನೀಡಲು ದೂರುದಾರರು ಆರೋಪಿಯನ್ನು ಭೇಟಿಯಾಗಲು ಹೋದಾಗ, ಆರೋಪಿಯು ತನ್ನ ಧರ್ಮವನ್ನು ಉಲ್ಲೇಖಿಸಿ ತನ್ನೊಂದಿಗೆ ದುರ್ವರ್ತನೆ ಮಾಡಿದ್ದಾನೆ ಮತ್ತು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯಲು ಬಲವನ್ನು ಬಳಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.