‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ

‘ಕರ್ನಾಟಕ ರಾಜ್ಯದ ಸಾಧಕರಿಗೆ ಸಾಧನೆಯ ದಿಶೆ ಮತ್ತು ಸಾಧನೆಯ ಯೋಗ್ಯ ದೃಷ್ಟಿ ಕೋನವನ್ನು ನೀಡಿ ಸಾಧನೆಯಲ್ಲಿ ಮುಂದೆ ಕರೆದೊಯ್ಯಲು ಪೂ. ರಮಾನಂದ ಗೌಡ ಇವರು ಅನೇಕ ಶಿಬಿರಗಳನ್ನು ಆಯೋಜಿಸಿ ಸಾಧಕರನ್ನು ಪ್ರೋತ್ಸಾಹಿಸಿದರು ಮತ್ತು ‘ಅವರ ಸಾಧನೆಯಾಗಬೇಕು ಎಂದು ತುಂಬಾ ತಳಮಳದಿಂದ ಪ್ರಯತ್ನಿಸಿ ಅನೇಕ ಸಾಧಕರನ್ನು ತಯಾರಿಸಿದರು. ಅವರು ಮಾಡಿರುವ ಪ್ರಯತ್ನಗಳು ಮತ್ತು ಅದರಿಂದ ಅರಿವಾದ ಅವರ ಗುರುಕಾರ್ಯದ ತಳಮಳ ಮತ್ತು ಸಾಧಕರ ಬಗ್ಗೆ ಅವರಿಗಿರುವ ವಾತ್ಸಲ್ಯಭಾವ ಇತ್ಯಾದಿ ಅನೇಕ ಅಂಶಗಳು ಕಲಿಯಲು ಸಿಕ್ಕವು. ಜ್ಯೇಷ್ಠ ಶುಕ್ಲ ಪಕ್ಷ ನವಮಿ(೧೯.೬.೨೦೨೧) ಯಂದು ಪೂ. ರಮಾನಂದ ಅಣ್ಣನವರ ಹುಟ್ಟುಹಬ್ಬವಾಯಿತು. ತನ್ನಿಮಿತ್ತ ಅವರು ಸಾಧಕರನ್ನು ಸಿದ್ಧಗೊಳಿಸಲು ಮಾಡಿದ ಪ್ರಯತ್ನಗಳನ್ನು ಮುಂದೆ ಕೊಡಲಾಗಿದೆ. ಕಳೆದ ವಾರ ನಾವು ‘ಪೂ. ರಮಾನಂದ ಅಣ್ಣನವರು ‘ಗುರುಪೂರ್ಣಿಮೆಯ ಸೇವೆ ಉತ್ತಮ ರೀತಿಯಲ್ಲಿ ಆಗಬೇಕು ಮತ್ತು ಅದರಿಂದ ಸಾಧಕರ ಸಾಧನೆಯಾಗಬೇಕು, ಎಂದು ಮಾಡಿದ ಪ್ರಯತ್ನಗಳ ಬಗೆಗಿನ ಲೇಖನವನ್ನು ನೋಡಿದೆವು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.

(ಭಾಗ ೨)

೩. ಪೂ. ರಮಾನಂದ ಗೌಡರವರು ಆಯೋಜಿಸಿದ ವಿವಿಧ ವಿಷಯಗಳ ಮೇಲಿನ ಶಿಬಿರಗಳು

೩ ಅ . ಜನಸಂಪರ್ಕ ಶಿಬಿರ

೩ ಅ ೧. ‘ಸಮಾಜದಲ್ಲಿನ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ಅವರನ್ನು ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವ ಹಾಗೆ ಹೇಗೆ ಮಾಡಬೇಕು ?, ಎಂಬುದರ ವಿಷಯದಲ್ಲಿ ಮಾಹಿತಿಯನ್ನು ನೀಡಲು ಶಿಬಿರವನ್ನು ಆಯೋಜಿಸುವುದು : ‘ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಸನಾತನ ಸಂಸ್ಥೆಯೊಂದಿಗೆ ಹೇಗೆ ಜೋಡಿಸಬೇಕು ?, ಎಂಬುದನ್ನು ಹೇಳಲು ಮತ್ತು ಜನಸಂಪರ್ಕ ಸೇವೆಗಾಗಿ ಸಾಧಕರನ್ನು ಸಕ್ಷಮಗೊಳಿಸಲು ಜನಸಂಪರ್ಕ ಶಿಬಿರಗಳನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ ಜಿಲ್ಲೆಯಲ್ಲಿನ ಜಾಹೀರಾತು ಸೇವೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಾಧಕರು, ಅಲ್ಲದೇ ಉದ್ಯಮಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಸಂಪರ್ಕಿ ಸುವ ಕ್ಷಮತೆ ಮತ್ತು ಮುಂದಾಳತ್ವದ ಗುಣವಿರುವ ಸಾಧಕರನ್ನು ಕರೆದು ಅವರಿಗಾಗಿ ೨ ದಿನಗಳ ಶಿಬಿರವನ್ನು ಮಾಡಲಾಯಿತು.

೩ ಅ ೨. ಈ ಉಪಕ್ರಮದ ಮಾಧ್ಯಮದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಉತ್ತಮ ರೀತಿಯಿಂದ ಆಗಲು ಮಾರ್ಗದರ್ಶನ ಮಾಡುವುದು : ‘ನಮ್ಮ ವೈಯಕ್ತಿಕ ಸಾಧನೆ ಉತ್ತಮ ರೀತಿಯಲ್ಲಾದರೆ, ಸಮಷ್ಟಿಯಲ್ಲಿ ಅದರಿಂದ ಹೇಗೆ ಪರಿಣಾಮವಾಗುತ್ತದೆ  ? ಸಮಷ್ಟಿಯಲ್ಲಿ ಹೋಗುವಾಗ ನಾವು ಹೇಗೆ ಆದರ್ಶರಾಗಿ ಹೋಗಬೇಕು ? ನಾವು ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಎಂಬ ಅರಿವನ್ನು ಸತತವಾಗಿ ಇಟ್ಟುಕೊಳ್ಳುವುದು ಹೇಗೆ ?, ಇದರ ಬಗ್ಗೆ ಎಲ್ಲರಿಗೂ ಹೇಳಲಾಯಿತು. ಕೊನೆಯಲ್ಲಿ ಪೂ. ಅಣ್ಣನವರು ಈ ಉಪಕ್ರಮದ ಮಾಧ್ಯಮದಿಂದ ‘ನಮ್ಮಲ್ಲಿನ ಸ್ವಭಾವ ದೋಷ ಮತ್ತು ಅಹಂನ್ನು ನಿರ್ಮೂಲನಗೊಳಿಸಿ ಗುಣವೃದ್ಧಿಯನ್ನು ಹೇಗೆ ಮಾಡಬೇಕು ? ಮತ್ತು ನಮ್ಮ ಸಾಧನೆ ಚೆನ್ನಾಗಿ ಆಗಲು ಹೇಗೆ ಪ್ರಯತ್ನಿಸಬೇಕು ? ಇದರ ಬಗ್ಗೆ ಹೇಳಿದರು.

೩ ಅ ೩. ಪೂ. ಅಣ್ಣನವರು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವುದು : ಈ ಶಿಬಿರದ ವೈಶಿಷ್ಟ್ಯವೆಂದರೆ ‘ಸಾಧಕರು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಾರೆ ?, ಈ ವಿಷಯದಲ್ಲಿ ಗುಂಪು ಚರ್ಚೆಯನ್ನು ತೆಗೆದುಕೊಳ್ಳಲಾಯಿತು. ತದನಂತರ ಪೂ. ಅಣ್ಣನವರು ಸ್ವತಃ ಎಲ್ಲರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡರು. ಇದರಿಂದ ಎಲ್ಲ ಸಾಧಕರಿಗೆ ‘ತಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ, ಎಂಬುದರ ಅರಿವಾಗಿ ಅವರ ಅಂತರ್ಮುಖತೆ ಹೆಚ್ಚಾಯಿತು. ಇದರ ಫಲಿತಾಂಶವೆಂದು ವಾರಕ್ಕೊಮ್ಮೆ ವರದಿ ಸತ್ಸಂಗ ಪ್ರಾರಂಭವಾಯಿತು. ಇದರಿಂದ ಸಾಧಕರ ವ್ಯಷ್ಟಿ ಸಾಧನೆ ವ್ಯವಸ್ಥಿತವಾಗಿ ಆಗತೊಡಗಿತು ಮತ್ತು ಸಮಷ್ಟಿ ಸೇವೆಯ ನಿಯೋಜನೆಯೂ ಸಮರ್ಪಕವಾಗಿ ಪ್ರಾರಂಭವಾಯಿತು.

೩ ಅ ೪. ಫಲಿತಾಂಶ – ಪೂ. ಅಣ್ಣನವರು ಹೇಳಿದಂತೆ ಪ್ರಯತ್ನಿಸಿದ್ದರಿಂದ ೪ ಕನ್ನಡ ಗ್ರಂಥಗಳ ಜಾಹೀರಾತುಗಳು ೧೦ ದಿನಗಳಲ್ಲಿ ಪೂರ್ಣಗೊಳ್ಳುವುದು ಮತ್ತು ಅಧಿಕ ವಿಶೇಷಾಂಕಗಳನ್ನು ಮುದ್ರಿಸಲು ಸಾಧ್ಯವಾಗುವುದು : ಜಾಹೀರಾತಿನ ಜನಸಂಪರ್ಕ ಸೇವೆಯನ್ನು ಮಾಡುವ ಸಾಧಕರಲ್ಲಿ ಸಾಧನೆಯ ಸ್ತರದಲ್ಲಿ ಬದಲಾವಣೆಯಾಯಿತು. ಅವರು ವಾರಕ್ಕೆ ಒಂದು ಪದ್ಧತಿಯಂತೆ ವಿವಿಧ ಧ್ಯೇಯವನ್ನು ಇಟ್ಟುಕೊಂಡರು, ಉದಾ. ಒಂದು ವಾರ ಗ್ರಂಥಗಳಿಗೆ ಜಾಹೀರಾತು ತರುವುದು, ಎರಡನೇ ವಾರದಲ್ಲಿ ವಿಶೇಷಾಂಕಕ್ಕಾಗಿ ಜಾಹೀರಾತು ತರುವುದು, ತದನಂತರ ಗ್ರಂಥಾಲಯಗಳನ್ನು ಸಂಪರ್ಕಿಸುವುದು ಇತ್ಯಾದಿ. ಈ ರೀತಿ ಧ್ಯೇಯವನ್ನು ಇಟ್ಟುಕೊಂಡು ಪ್ರಯತ್ನಿಸಿದ್ದರಿಂದ ೪ ಕನ್ನಡ ಗ್ರಂಥಗಳ ಜಾಹೀರಾತುಗಳು ಕೇವಲ ೧೦ ದಿನಗಳಲ್ಲಿ ಸಿಕ್ಕವು ಮತ್ತು ಹೆಚ್ಚುವರಿ ೪-೫ ವರ್ಣರಂಜಿತ ವಿಶೇಷಾಂಕಗಳನ್ನು ಮುದ್ರಿಸಲು ಸಾಧ್ಯವಾಯಿತು.

ಈಗ ಎಲ್ಲ ಜಿಲ್ಲೆಗಳಲ್ಲಿ ಜನಸಂಪರ್ಕ ಸೇವಕರು ಮುಂದಾಳತ್ವವನ್ನು ವಹಿಸಿಕೊಂಡು, ಸಂಪರ್ಕದ ಪಟ್ಟಿಯನ್ನು ತಯಾರಿಸಿ ಪ್ರಯತ್ನಿಸುತ್ತಿದ್ದಾರೆ. ಪ್ರತಿವಾರ ನಡೆಯುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸತ್ಸಂಗದಲ್ಲಿ ಪೂ. ಅಣ್ಣನವರು ಸ್ವತಃ ಉಪಸ್ಥಿತರಿರುತ್ತಿದ್ದರು. ಅವರು ಸತ್ಸಂಗದಿಂದ ಸಾಧಕರಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವಾಗ ‘ಅವರು ಎಲ್ಲಿ ಕಡಿಮೆ ಬೀಳುತ್ತಿದ್ದಾರೆ ಎನ್ನುವುದನ್ನು ಹೇಳಿ, ಅವರನ್ನು ಮುಂದಿನ ಸೇವೆಗಾಗಿ ಪ್ರೋತ್ಸಾಹಿಸುತ್ತಿದ್ದರು. ಇದರಿಂದ ಸಾಧಕರಿಗೆ ಅವರ ಆಧಾರ ವೆನಿಸಿತು ಮತ್ತು ಸೇವೆ ಹಾಗೂ ಸಾಧನೆಯನ್ನು ಮಾಡುವ ಉತ್ಸಾಹ ಹೆಚ್ಚಾಯಿತು.

೩ ಆ. ಸಾಧಕತ್ವ ಮತ್ತು ಗುರುಕಾರ್ಯವೃದ್ಧಿ ಶಿಬಿರ

೩ ಆ ೧. ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಕಡಿಮೆ ಮಾಡುವ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡು ಅವರಿಗೆ ವ್ಯಷ್ಟಿ ಸಾಧನೆಯನ್ನು ಮಾಡಲು ಪ್ರೋತ್ಸಾಹ ನೀಡುವುದು : ಜನಸಂಪರ್ಕ ಶಿಬಿರವಾದ ಬಳಿಕ ಕರ್ನಾಟಕ ರಾಜ್ಯದ ಸಾಧಕರಿಗಾಗಿ ಸಾಧಕತ್ವ ಮತ್ತು ಗುರುಕಾರ್ಯವೃದ್ಧಿ ಶಿಬಿರದ ಆಯೋಜನೆಯನ್ನು ಮಾಡಲಾಯಿತು. ಇಂತಹ ಶಿಬಿರನ್ನು ರಾಜ್ಯದಲ್ಲಿನ ೩ ಸ್ಥಳಗಳಲ್ಲಿ ತೆಗೆದುಕೊಳ್ಳಲಾಯಿತು. ಇದರಲ್ಲಿ ಮೊದಲು ಶಿಬಿರದಲ್ಲಿ ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಭಾಗವಹಿಸಿದ್ದರು. ೫ ದಿನಗಳ ಈ ಶಿಬಿರದಲ್ಲಿ ‘ಸಾಧಕರು ವ್ಯಷ್ಟಿ ಸಾಧನೆಯಲ್ಲಿ ಎಲ್ಲಿ ಹಿಂದೆ ಬೀಳುತ್ತಿದ್ದಾರೆ?, ಈ ವಿಷಯದಲ್ಲಿ ಸಾಧಕರ ವ್ಯಷ್ಟಿ ಸಾಧನೆಯ ವಿಷಯದಲ್ಲಿ ಗುಂಪು ಚರ್ಚೆಯನ್ನು ಏರ್ಪಡಿಸಲಾಗಿತ್ತು. ಯಾರ ವ್ಯಷ್ಟಿ ಸಾಧನೆಯ ಪ್ರಯತ್ನಗಳು ಕಡಿಮೆಯಾಗಿವೆಯೋ, ಅವರ ವರದಿಯನ್ನು ಸ್ವತಃ ಪೂ. ಅಣ್ಣನವರು ತೆಗೆದುಕೊಂಡರು. ಪೂ. ಅಣ್ಣನವರು ಇನ್ನುಳಿದ ಸಾಧಕರಿಗಾಗಿಯೂ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡು ಅವರನ್ನು ಅಂತರ್ಮುಖಗೊಳಿಸಿದರು ಮತ್ತು ಅವರ ಸಮಷ್ಟಿ ಕಾರ್ಯ ಉತ್ತಮವಾಗಿ ಆಗಲು ಅವರ ನಿಯೋಜನೆಯನ್ನು ಮಾಡಲಾಯಿತು.

೩ ಆ ೨. ಸಾಧಕರ ಗುಣಕೌಶಲ್ಯಗಳನ್ನು ಗುರುತಿಸಿ ಅವರಿಗೆ ಸೇವೆಯ ಜವಾಬ್ದಾರಿಯನ್ನು ನೀಡುವ ವಿಷಯದಲ್ಲಿ ಪ್ರಾಯೋಗಿಕ ಭಾಗವನ್ನು ತೆಗೆದುಕೊಳ್ಳುವುದು : ಶಿಬಿರದಲ್ಲಿ ಭಾಗವಹಿಸಿರುವ ‘ಸಾಧಕರನ್ನು ನೋಡಿ, ಅವರ ಮಾತುಗಳನ್ನು ಕೇಳಿ ಅಥವಾ ಇತರರು ಅವರ ವಿಷಯದಲ್ಲಿ ಹೇಳಿರುವುದನ್ನು ಕೇಳಿ ಆ ಸಾಧಕರಲ್ಲಿರುವ ಕ್ಷಮತೆ ಮತ್ತು ಕೌಶಲ್ಯವನ್ನು ಹೇಗೆ ಗುರುತಿಸಬೇಕು ?, ಎಂಬುದನ್ನು ಪ್ರಾಯೋಗಿಕ ಭಾಗದಲ್ಲಿ ಕಲಿಸಲಾಯಿತು.

ಅ. ಒಬ್ಬ ಸಾಧಕನನ್ನು ಎದುರಿಗೆ ಕರೆದು ಇತರ ಸಾಧಕರಿಗೆ ಅವನ ನಿರೀಕ್ಷಣೆಯನ್ನು ಮಾಡಲು ಹೇಳಿದರು ಮತ್ತು ‘ಅವನು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು?, ಎಂಬುದರ ಅಭ್ಯಾಸವನ್ನೂ ಮಾಡಿ ಹೇಳಲು ಹೇಳಿದರು. ತದನಂತರ ಆ ಸಾಧಕನ ಜಿಲ್ಲೆಯ ಸಾಧಕರಿಗೆ, ಆ ಸಾಧಕನ ವಿಷಯದಲ್ಲಿನ ಅವರ ನಿರೀಕ್ಷಣೆಯನ್ನು ಹೇಳಲು ಹೇಳಿದರು.

ಇ. ಸಾಧಕರು ಅವರ ನಿರೀಕ್ಷಣೆಯನ್ನು ಹೇಳಿದ ಬಳಿಕ, ಪೂ. ಅಣ್ಣನವರು ‘ಅವನಲ್ಲಿನ ಭಾವ ಹೇಗಿದೆ ? ಅವನಲ್ಲಿ ಯಾವ ಗುಣಗಳಿವೆ ? ಅವನಲ್ಲಿ ಯಾವ ಕೌಶಲ್ಯಗಳಿವೆ ? ಅವನ ಕ್ಷಮತೆ ಎಷ್ಟಿದೆ ? ಅವನ ಮುಂದಾಳತ್ವದ ಗುಣ ಹೇಗಿದೆ ? ಹೀಗೆ ಎಲ್ಲವನ್ನು ನಿರೀಕ್ಷಣೆ ಮಾಡಿ ಹೇಳಿದರು.

ಈ. ಸಾಧಕರು ಸಾಧಕನ ನಿರೀಕ್ಷಣೆಯನ್ನು ಮಾಡುವಾಗ ಕೇವಲ ಒಂದೇ ಬದಿಯಿಂದ, ಅಂದರೆ ಸ್ವಭಾವ ದೋಷದ ದೃಷ್ಟಿಯಿಂದ ವಿಚಾರ ಮಾಡುತ್ತಿದ್ದರು; ಆದರೆ ಪೂ. ಅಣ್ಣನವರು ಅವನ ಸ್ವಭಾವದೋಷದೊಂದಿಗೆ ‘ಅವನಲ್ಲಿ ಯಾವ ಗುಣಗಳಿವೆ ? ಅವನ ಕೌಶಲ್ಯ ಏನಿದೆ ಮತ್ತು ಕ್ಷಮತೆ ಎಷ್ಟಿದೆ? ಅವನ ಅಡಚಣೆಗಳನ್ನು ತಿಳಿದುಕೊಂಡು ಅವನನ್ನು ಮುಂದಿನ ಹಂತಕ್ಕೆ ಕರೆದುಕೊಂಡು ಹೋಗಲು ಏನು ಸಹಾಯ ಮಾಡಬೇಕು? ಎಂಬುದರ ಅಧ್ಯಯನವನ್ನು ಹೇಗೆ ಮಾಡಬೇಕು? ಎನ್ನುವುದನ್ನು ಇದರಿಂದ ಕಲಿಸಿದರು.

೩ ಆ ೩. ಸಾಧಕರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಧ್ಯೇಯವನ್ನಿಟ್ಟುಕೊಂಡು ಪ್ರಯತ್ನಿಸಲು ನಿರ್ಧರಿಸುವುದು : ಎಲ್ಲ ಸಾಧಕರಿಗೆ ಧ್ಯೇಯವನ್ನಿಟ್ಟು ಪ್ರಯತ್ನಿಸುವ ಮಹತ್ವವನ್ನು ಹೇಳಿದ ಬಳಿಕ ಎಲ್ಲ ಸಾಧಕರು ೩ ತಿಂಗಳ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಧ್ಯೇಯವನ್ನು ನಿರ್ಧರಿಸಿದರು ಮತ್ತು ಸಮಯವನ್ನು ನಿಗದಿ ಪಡಿಸಿಕೊಂಡು ಪ್ರಯತ್ನಿಸಲು ನಿರ್ಧರಿಸಿದರು. ಈ ಶಿಬಿರದಿಂದ ‘ನಮಗೆ ಸಾಧನೆಯಲ್ಲಿ ಪುನರ್ಜನ್ಮ ಸಿಕ್ಕಿತು ಎಂಬ ಕೃತಜ್ಞತಾಭಾವ ಎಲ್ಲ ಸಾಧಕರಲ್ಲಿ ಜಾಗೃತವಾಯಿತು.

೩ ಇ. ಈ ರೀತಿ ಇತರ ೨ ಸ್ಥಳಗಳಲ್ಲಿ ತೆಗೆದುಕೊಂಡ ಶಿಬಿರಗಳು

೩ ಇ ೧. ಸ್ವಭಾವದೋಷಗಳಿಂದ ಸಾಧನೆಯಲ್ಲಿ ಯಾವ ಸಾಧಕರ ಹಾನಿಯಾಗಿದೆಯೋ, ಆ ಸಾಧಕರನ್ನು ಶಿಬಿರಕ್ಕೆ ಕರೆಯುವುದು: ಈ ರೀತಿಯ ಎರಡನೇಯ ಮತ್ತು ಮೂರನೆ ಶಿಬಿರದಲ್ಲಿ ‘ನಾವು ಏನಾದರು ಮಾಡುತ್ತಿದ್ದೇವೆ, ಎಂಬ ಅಲ್ಪಸಂತುಷ್ಟಿ ಇರುವುದು, ಮನಸ್ಸು ಬಿಚ್ಚಿ ಮಾತನಾಡದಿರುವುದು, ಕರ್ತೃತ್ವ ಈ ಸ್ವಭಾವದೋಷವಿರುವ ಮತ್ತು ಅಯೋಗ್ಯ ಮಾನಸಿಕತೆ ಇರುವ ಸಾಧಕರನ್ನು ಕರೆಯಲಾಗಿತ್ತು. ಹಿಂದಿನ ವರ್ಷ ಇದರಲ್ಲಿನ ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟವೂ ಕಡಿಮೆಯಾಗಿತ್ತು, ಇನ್ನೂ ಕೆಲವು ಸಾಧಕರ ಮಟ್ಟ ಮೊದಲು ಇದ್ದಷ್ಟೇ ಉಳಿದಿತ್ತು.

೩ ಇ ೨. ಎಲ್ಲ ಶಿಬಿರಾರ್ಥಿಗಳಿಗಾಗಿ ಶಿಬಿರದಲ್ಲಿ ಪ್ರತಿದಿನ ೧ ಗಂಟೆ ಸಂತರ ನಾಮಜಪಾದಿ ಉಪಾಯಗಳನ್ನು ಇಡಲಾಗಿತ್ತು.

೩ ಇ ೩. ‘ಸಾಧಕರ ಮನಸ್ಸಿನಲ್ಲಿನ ಅಯೋಗ್ಯ ವಿಚಾರಗಳು ದೂರವಾಗಬೇಕು, ಎಂದು ತೆಗೆದುಕೊಂಡ ವ್ಯಷ್ಟಿ ಸಾಧನೆಯ ವರದಿಯಲ್ಲಿ ಸಾಧಕರಿಗೆ ತಮ್ಮ ಅಯೋಗ್ಯ ವಿಚಾರಗಳು ಅರಿವಿಗೆ ಬರುವುದು : ‘ಸಾಧಕರ ಮನಸ್ಸಿನಲ್ಲಿ ಯಾವ ಅಯೋಗ್ಯ ವಿಚಾರಗಳಿವೆ?, ಎಂಬುದನ್ನು ಗಮನದಲ್ಲಿ ತೆಗೆದುಕೊಂಡು ‘ಆ ಅಯೋಗ್ಯ ವಿಚಾರಗಳು ಹೋಗಬೇಕು, ಎಂದು ಅವರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡರು. ಈ ವರದಿಯನ್ನು ತೆಗೆದುಕೊಂಡ ಬಳಿಕ ಸಾಧಕರಿಗೆ ‘ತಮ್ಮ ಮನಸ್ಸಿನಲ್ಲಿ ಯಾವ ಅಯೋಗ್ಯ ವಿಚಾರಗಳಿವೆ?, ಎನ್ನುವುದು ತಿಳಿಯಿತು. ತದನಂತರ ಪೂ. ಅಣ್ಣನವರು ಎಲ್ಲರಿಗೂ ಮಾರ್ಗದರ್ಶನ ಮಾಡಿದರು. ಇದರಲ್ಲಿ ಎಲ್ಲರೂ ಮನಸ್ಸು ಬಿಚ್ಚಿ ಅವರ ವಿಚಾರಗಳನ್ನು ಹೇಳಿದರು. ಇದರಿಂದ ಎಲ್ಲರಿಗೂ ‘ತಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ? ತಮ್ಮ ಮನಸ್ಸಿನಲ್ಲಿನ ಯಾವ ವಿಚಾರಗಳಿಂದ ನಾವು ಸಾಧನೆಯ ಒಂದೇ ಹಂತದಲ್ಲಿ ಸಿಲುಕಿದ್ದೇವೆ ?, ಎನ್ನುವುದು ಗಮನಕ್ಕೆ ಬಂದಿತು. ಎಲ್ಲರೂ ಅಂತರ್ಮುಖರಾದರು. ‘ಇಷ್ಟು ವರ್ಷಗಳಿಂದ ನಮ್ಮ ಮನಸ್ಸಿನಲ್ಲಿ ಇಂತಹ ವಿಚಾರಗಳನ್ನು ಇಟ್ಟುಕೊಂಡು ನಮ್ಮ ಸಾಧನೆಯಲ್ಲಿ ಎಷ್ಟು ಹಾನಿಯನ್ನು ಮಾಡಿಕೊಂಡೆವು? ಎಂದೆನಿಸಿ ಎಲ್ಲರಿಗೂ ಪಶ್ಚಾತ್ತಾಪವಾಯಿತು. ಈಗ ಮನಸ್ಸು ಬಿಚ್ಚಿ ಮಾತನಾಡಿದ್ದರಿಂದ ಸಾಧಕರ ಮನಸ್ಸು ಹಗುರವಾಯಿತು. ಶಿಬಿರಕ್ಕೆ ಬರುವ ಮೊದಲು ಸಾಧಕರ ಮನಸ್ಸಿನಲ್ಲಿ ಯಾವ ನಕಾರಾತ್ಮಕ ವಿಚಾರಗಳಿದ್ದವೋ, ಅವೆಲ್ಲವೂ ದೂರವಾಗಿ ಸಾಧಕರು ಮುಂದಾಳತ್ವ ಮತ್ತು ಜವಾಬ್ದಾರಿ ವಹಿಸಿ ಸೇವೆ ಮಾಡಲು ಸಿದ್ಧರಾದರು.

೩ ಇ ೪. ಫಲಿತಾಂಶ

ಅ. ಶಿಬಿರಕ್ಕೆ ಬಂದಿದ್ದ ಶಿಬಿರಾರ್ಥಿಗಳಿಗಾಗಿ ಪೂ. ಅಣ್ಣನವರು ವೈಯಕ್ತಿಕ ಸಮಯವನ್ನು ನೀಡಿದರು. ಅವರು ಎಲ್ಲ ಶಿಬಿರಾರ್ಥಿಗಳೊಂದಿಗೆ ಪ್ರೀತಿಯಿಂದ ಮಾತನಾಡಿದರು. ಇದರಿಂದ ಎಲ್ಲರಿಗೂ ಅವರ ಆಧಾರವೆನಿಸಿತು. ಇದರ ಪರಿಣಾಮವೆಂದು ಎಲ್ಲ ಸಾಧಕರು ಮುಂದಾಳತ್ವವನ್ನು ವಹಿಸಿಕೊಂಡು ಸೇವೆಯನ್ನು ಮಾಡಲು ಸಿದ್ಧರಾದರು.

ಆ. ಈ ಮೂರು ಶಿಬಿರಗಳ ಫಲಿತಾಂಶವೆಂದರೆ, ಸಾಧಕರು ‘ಅವರಿಗೆ ಯಾವುದೇ ಸೇವೆಯನ್ನು ನೀಡಿದರೂ, ಅವರು ಆ ಸೇವೆಯನ್ನು ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದರು. ಹೊಸ ಜವಾಬ್ದಾರಿಯ ಸೇವೆಯನ್ನು ಮಾಡಲು ಕೆಲವು ಸಾಧಕರು ಸಿದ್ಧರಾದರು. ಇನ್ನುಳಿದ ಸಾಧಕರು ಸ್ಥಳೀಯ ಸೇವೆಗಳನ್ನು ಮಾಡಲು ಸಿದ್ಧರಾಗಿದ್ದಾರೆ ಮತ್ತು ಅವರು ಅದರಂತೆ ಸೇವೆಯನ್ನೂ ಪ್ರಾರಂಭಿಸಿ ದ್ದಾರೆ. ಶಿಬಿರದಲ್ಲಿ ಬಂದಿದ್ದ ಶೇ. ೭೦ ಕ್ಕಿಂತ ಅಧಿಕ ಸಾಧಕರಲ್ಲಿ ಬದಲಾವಣೆ ಕಂಡು ಬಂದಿದೆ. ಎಲ್ಲರೂ ಯೋಗ್ಯ ದೃಷ್ಟಿಕೋನವನ್ನು ಮತ್ತು ದಿಶೆಯನ್ನು ಇಟ್ಟುಕೊಂಡು ಪ್ರಯತ್ನಿಸಿದರು.

ಈ. ಓರ್ವ ಸಾಧಕಿಯು ೪ ತಿಂಗಳುಗಳಲ್ಲಿ ಸಾಧನೆಯ ಒಳ್ಳೆಯ ಪ್ರಯತ್ನವನ್ನು ಮಾಡಿ ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿದಳು.

೩ ಇ ೫. ಪೂ. ಅಣ್ಣನವರ ಸಾಧಕರ ಬಗ್ಗೆ ಇರುವ ನಿರಪೇಕ್ಷ ಪ್ರೀತಿ ಮತ್ತು ವಾತ್ಸಲ್ಯಭಾವ !

೩ ಇ ೫ ಅ. ಪೂ. ಅಣ್ಣನವರು ಪೂರ್ಣವೇಳೆ ಸಾಧನೆಯನ್ನು ಮಾಡುವ ಸಾಧಕರಿಗೆ ಅವರ ಸಾಧನೆಯಲ್ಲಿನ ಅಡಚಣೆಗಳನ್ನು ಪ್ರೀತಿಯಿಂದ ವಿಚಾರಿಸುವುದು : ಮೊದಲನೇಯ ಶಿಬಿರದಲ್ಲಿ ಬಹಳಷ್ಟು ಸಾಧಕರು ಪೂರ್ಣವೇಳೆ ಸಾಧನೆಯನ್ನು ಮಾಡುವವರಾಗಿದ್ದರು. ಶಿಬಿರದ ಬಳಿಕ ಪೂರ್ಣವೇಳೆ ಸಾಧನೆ ಮಾಡುವ ಎಲ್ಲ ಸಾಧಕರೊಂದಿಗೆ ಪೂ. ಅಣ್ಣನವರು ಒಂದು ಅನೌಪಚಾರಿಕ ಸತ್ಸಂಗವನ್ನು ತೆಗೆದುಕೊಂಡರು. ಈ ಸತ್ಸಂಗದಲ್ಲಿ ಅವರು ‘ಸಾಧಕರಿಗೆ ಪ್ರಸಾರದಲ್ಲಿ ಯಾವ ಅಡಚಣೆಗಳು ಬರುತ್ತವೆ ? ಪ್ರಸಾರದಲ್ಲಿ ಹೊರಗೆ ಹೋದಾಗ ಭೋಜನ ಅಥವಾ ವಾಸ್ತವ್ಯದಲ್ಲಿ ಏನಾದರೂ ಅಡಚಣೆಗಳು ಬರುತ್ತವೆಯೋ ? ಎಲ್ಲರ ಬಳಿ ಬ್ಯಾಗ, ಬಟ್ಟೆ, ಚಪ್ಪಲಿ, ಕೊಡೆ, ಟೊಪ್ಪಿಗೆ ಇತ್ಯಾದಿ ಆವಶ್ಯಕ ವಸ್ತುಗಳು ಇವೆ ಅಲ್ಲವೇ ? ಎಲ್ಲರ ಸಂಚಾರವಾಣಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ? ಸಾಧಕರಿಗೆ ಶಾರೀರಿಕ ದೃಷ್ಟಿಯಲ್ಲಿ ಏನಾದರೂ ಅಡಚಣೆಗಳು ಇವೆಯೇ ?, ಇತ್ಯಾದಿ ಎಲ್ಲವನ್ನು ಬಹಳ ಆತ್ಮೀಯತೆಯಿಂದ ಪ್ರೀತಿಯಿಂದ ವಿಚಾರಿಸಿದರು. ಪೂ. ಅಣ್ಣನವರ ಈ ವಾತ್ಸಲ್ಯ ಭಾವದಿಂದ ಸಾಧಕರು ತಮಗೆ ಎದುರಾಗುವ ಎಲ್ಲ ಅಡಚಣೆಗಳನ್ನು ಮುಕ್ತ ಮನಸ್ಸಿನಿಂದ ಹೇಳಿದರು. ಪೂ. ಅಣ್ಣನವರು ‘ಅವುಗಳಿಗೆ ಏನು ಉಪಾಯ ಮಾಡಬೇಕು ? ಎಂದು ಹೇಳಿದರು. ಇದರಿಂದ ಎಲ್ಲರಲ್ಲಿ ಒಂದು ಕುಟುಂಬ ಭಾವನೆ ನಿರ್ಮಾಣವಾಗಿ ಎಲ್ಲರ ಭಾವಜಾಗೃತಿಯಾಯಿತು.

೩ ಈ. ಸಾಧನಾ ಶಿಬಿರ : ಮೊದಲ ರಾಜ್ಯಮಟ್ಟದ ಶಿಬಿರದಿಂದ ದೊರಕಿದ ಪ್ರೇರಣೆಯಿಂದ ಜವಾಬ್ದಾರಿ ವಹಿಸಿಕೊಂಡು ಸೇವೆಯನ್ನು ಮಾಡುವ ಸಾಧಕರನ್ನು ಒಟ್ಟುಮಾಡಿ ಎಲ್ಲ ಸ್ಥಳಗಳಲ್ಲಿ ಸಾಧನಾ ಶಿಬಿರಗಳನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ ‘ಸಾಧಕರಿಗೆ ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರೋತ್ಸಾಹಿಸುವುದು, ಅವರ ಸೇವೆಯಲ್ಲಿನ ಅಡಚಣೆಗಳನ್ನು ವಿಚಾರಿಸುವುದು, ‘ಅವರಿಗೆ ಯಾವ ಸಹಾಯ ಬೇಕು ?, ಎಂದು ವಿಚಾರಿಸುವುದು. ‘ಅವರು ಎಲ್ಲಿ ಕಡಿಮೆ ಬೀಳುತ್ತಿದ್ದಾರೆ ? ಅವರು ಸಾಧನೆಯಲ್ಲಿ ಮುಂದೆ ಹೋಗಲು ಏನು ಮಾಡಬೇಕು ?, ಇತ್ಯಾದಿ ಎಲ್ಲ ವಿಷಯಗಳನ್ನು ತೆಗೆದುಕೊಂಡರು. ಇದರಿಂದ ಎಲ್ಲ ಸಾಧಕರು ಮುಂದಾಳತ್ವವನ್ನು ವಹಿಸಿಕೊಂಡು ಸೇವೆಯನ್ನು ಮಾಡಲು ಸಿದ್ಧರಾದರು. ಹೇಗೆ ಒಂದೊಂದು ಶಿಬಿರಗಳು ನಡೆದವೋ, ಹಾಗೆ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮತ್ತು ಸೇವೆಯ ಫಲಿತಾಂಶ ವೃದ್ಧಿಸತೊಡಗಿತು.

(ಮುಂದುವರಿಯುವುದು)