ಭದ್ರತಾ ಪಡೆಗಳ ಮಾಹಿತಿ ಕಲೆ ಹಾಕುವ ಪ್ರಯತ್ನ !
ಭಾರತವು ಶೀಘ್ರದಲ್ಲೇ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ ಅದನ್ನು ಉಪಯೋಗಿಸಬೇಕು !
ನವ ದೆಹಲಿ – ಜಿಹಾದಿ ಭಯೋತ್ಪಾದಕರಿಂದ ಜಮ್ಮುವಿನಲ್ಲಿ ಸೈನ್ಯ ನೆಲೆ ಮತ್ತು ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನಗಳಾದ ಬೆನ್ನಲ್ಲೇ ಈಗ ನಕ್ಸಲರಿಂದಲೂ ಕೂಡ ಭದ್ರತಾ ಪಡೆಗಳ ಮಾಹಿತಿಯನ್ನು ಸಂಗ್ರಹಿಸಲು ಡ್ರೋನ್‍ಅನ್ನು ಉಪಯೋಗಿಸಲು ಪ್ರಯತ್ನವಾಗುತ್ತಿರುವುದು ಬೆಳಕಿಗೆ ಬಂದಿದೆ.
ಸೂತ್ರಗಳ ಪ್ರಕಾರ ಇತ್ತಿಚೆಗೆ ಛತ್ತೀಸಗಡದಲ್ಲಿನ ಸುಕುಮಾದಲ್ಲಿಯ ದೊರನಾಪಾಲದಲ್ಲಿ ಡ್ರೋನ್ ಕಂಡು ಬಂದಿತ್ತು. ಇಲ್ಲಿ ನೇಮಿಸಿದ ಭದ್ರತಾಪಡೆಗಳ ಮಾಹಿತಿಯನ್ನು ಕಲೆ ಹಾಕಲು ಇದನ್ನು ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ‘ಭವಿಷ್ಯದಲ್ಲಿ ನಕ್ಸಲರು ಈ ಡ್ರೋನ್‍ಅನ್ನು ಉಪಯೋಗಿಸಿ ದಾಳಿ ಮಾಡುವ ಸಾಧ್ಯತೆಗಳಿವೆ’, ಎಂದು ಹೇಳಲಾಗುತ್ತಿದೆ.
(ಸೌಜನ್ಯ: India Today )