ಎಲ್ಲಿಯವರೆಗೆ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಿಗುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ! – ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಘೋಷಣೆ

‘ನಾಯಿ ಬಾಲ ಡೊಂಕು’, ಎಂದು ಘೋಷಣೆಯ ಬಗ್ಗೆ ಹೇಳಬಹುದು !

ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು-ಕಾಶ್ಮೀರ) – ಎಲ್ಲಿಯವರೆಗೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಜಾರಿಯಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಪಕ್ಷ ಯಾವುದೇ ಚುನಾವಣೆಯನ್ನು ಸ್ಪರ್ಧಿಸುವುದಿಲ್ಲ, ಎಂದು ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷದ(ಪಿಡಿಪಿಯ) ಅಧ್ಯಕ್ಷೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಘೋಷಣೆ ಮಾಡಿದ್ದಾರೆ.

ಮುಫ್ತಿಯವರು, ನಾನು ಕೇಂದ್ರಾಡಳಿತದ ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇದು ನಾನು ಅನೇಕ ಬಾರಿ ಸ್ಪಷ್ಟ ಪಡಿಸಿದ್ದೇನೆ; ಆದರೆ ಅದೇ ಸಮಯದಲ್ಲಿ ನಾವು ಯಾರಿಗೂ ಕೂಡ ರಾಜಕೀಯ ಸ್ಥಾನವನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ, ಇದರ ಅರಿವು ನಮ್ಮ ಪಕ್ಷಕ್ಕೆ ಇದೆ. ನಾವು ಕಳೆದ ವರ್ಷ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ಅದೇರೀತಿ ವಿಧಾನಸಭೆ ಚುನಾವಣೆಯು ಘೋಷಣೆಯಾದರೆ ಪಕ್ಷದ ಪದಾಧಿಕಾರಿಗಳು ಕುಳಿತು ಚರ್ಚಿಸುವರು. (ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದೇ ಇದನ್ನು ಅರ್ಥೈಸಬೇಕಾಗುತ್ತದೆ. ಮೆಹಬೂಬಾ ಮುಫ್ತಿ ಇವರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಅಂದರೆ ಕೇವಲ ನಾಟಕವಾಗಿದೆ, ಎಂದು ಹೇಳಬಹುದು ! – ಸಂಪಾದಕ)