ಆರ್ಥಿಕ ಬಿಕ್ಕಟ್ಟಿನಿಂದಾಗಿ ಗೀತಾ ಪ್ರೆಸ್ ಮುಚ್ಚಲಾಗುವುದು ಎಂಬ ಸುದ್ದಿಗೆ ಬಿಜೆಪಿ ಸಂಸದ ರವಿ ಕಿಶನ್‍ರಿಂದ ಭರವಸೆ !

ಗೀತಾ ಪ್ರೆಸ್‍ಗೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇಲ್ಲ !

ಗೀತಾ ಪ್ರೆಸ್‍ಗೆ ಆರ್ಥಿಕ ಅಡಚಣೆಗಳಿದ್ದಲ್ಲಿ, ಸರಕಾರವು ಅದಕ್ಕೆ ಅನುದಾನ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗೋರಖ್‍ಪುರ (ಉತ್ತರ ಪ್ರದೇಶ) – ಇಲ್ಲಿಯ ಗೀತಾ ಪ್ರೆಸ್ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಆದ್ದರಿಂದ ಈ ಪ್ರೆಸ್ ಮುಚ್ಚಲ್ಪಡಲಿದೆ ಎಂಬ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಪ್ರತ್ಯಕ್ಷವಾಗಿ ಈ ಮುದ್ರಣಾಲಯಕ್ಕೆ ಹೋಗಿ ನೈಜ ಮಾಹಿತಿಯನ್ನು ತಿಳಿದುಕೊಂಡಾಗ, ಪ್ರೆಸ್‍ಗೆ ಯಾವುದೇ ಆರ್ಥಿಕ ಬಿಕ್ಕಟ್ಟು ಇಲ್ಲ ಎಂದು ತಿಳಿದಾಗ ನನಗೆ ಸಂತೋಷವಾಯಿತು. ಕಳೆದ ಹಲವಾರು ದಶಕಗಳಿಂದ ಈ ಪ್ರೆಸ್ ಸನಾತನ ಧರ್ಮದ ಪ್ರಸಾರವನ್ನು ಮಾಡುತ್ತಿದೆ. ಇದು ಉತ್ತಮವಾಗಿ ನಡೆಯುತ್ತಿದೆ ಎಂದು ಇಲ್ಲಿಯ ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.

ರವಿ ಕಿಶನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರೆಸ್ ಸಂಪೂರ್ಣವಾಗಿ ಸ್ವಾವಲಂಬಿಯಾಗಿದೆ. ನೌಕರರಿಗೆ ತಿಂಗಳಿಗೆ ೮೦ ಲಕ್ಷ ರೂ.ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದೆ. ಪ್ರತಿ ತಿಂಗಳು ೧೫ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ. ಇಲ್ಲಿ ಮುದ್ರಣ ಯಂತ್ರಗಳು ಅತ್ಯಾಧುನಿಕವಾಗಿದೆ. ಪ್ರೆಸ್‍ಗೆ ಆರ್ಥಿಕ ಬಿಕ್ಕಟ್ಟು ಇಲ್ಲ. ಈ ಪ್ರೆಸ್ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.