ರಾಜಸ್ಥಾನದಲ್ಲಿ ೧೧ ಲಕ್ಷ ೫೦ ಸಾವಿರ ಡೋಸ್ ಕೊರೊನಾ ಲಸಿಕೆ ವ್ಯರ್ಥವಾಯಿತು ! – ಕೇಂದ್ರ ಸಚಿವ ಗಜೇಂದ್ರಸಿಂಹ ಶೇಖಾವತ ಅವರ ಹೇಳಿಕೆ

ಸರಕಾರಿ ಅಂಕಿಅಂಶಗಳ ಪ್ರಕಾರ, ಕೇವಲ ಶೇ. ೨ ರಷ್ಟು ಡೋಸ್ ವ್ಯರ್ಥ !

ರಾಜಸ್ಥಾನದಲ್ಲಿ ಕಾಂಗ್ರೆಸ್‍ನ ಸರಕಾರ ಇರುವುದರಿಂದ ನಿಜವಾದ ಅಂಕಿಅಂಶಗಳು ಹೊರಬರಲು ಸಾಧ್ಯವೇ ಇಲ್ಲ, ಎಂದು ಹೇಳಬೇಕಾಗಬಹುದು !

ಜೈಪುರ (ರಾಜಸ್ಥಾನ) – ಕೇಂದ್ರ ಸಚಿವ ಗಜೆಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೊನಾದ ೧೧ ಲಕ್ಷ ೫೦ ಸಾವಿರ ಡೋಸ್ ಲಸಿಕೆಗಳು ವ್ಯರ್ಥವಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ಬಾಟಲಿಯಲ್ಲಿ ೧೦ ಡೋಸ್ ಇರುತ್ತದೆ. ಈ ೧೦ ರಲ್ಲಿ ಕೆಲವು ವ್ಯಕ್ತಿಗಳು ಲಸಿಕೆ ನೀಡಲು ಉಪಸ್ಥಿತರಿರಲಿಲ್ಲದ್ದರೆ, ಉಳಿದಿದ್ದು ಎಸೆಯ ಬೇಕಾಗುತ್ತದೆ. ಆದ್ದರಿಂದ ದೇಶದಲ್ಲಿ ಈವರೆಗೆ ಹೆಚ್ಚಿನ ಸಂಖ್ಯೆಯ ಲಸಿಕೆಗಳು ವ್ಯರ್ಥವಾಗಿವೆ. ದೈನಿಕ ಭಾಸ್ಕರ ಈ ವಾರ್ತಾವಾಹಿನಿಯ ಪ್ರಕಾರ ರಾಜಸ್ಥಾನದ ೮ ಜಿಲ್ಲೆಗಳ ೩೫ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ೫೦೦ ಬಾಟಲುಗಳ ಪೈಕಿ ೨೫೦೦ ಡೋಸ್ ಕಸದ ಬುಟ್ಟಿಯಲ್ಲಿ ಸಿಕ್ಕಿವೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸರಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಕೇವಲ ಶೇ.೨ ರಷ್ಟು ಡೋಸ್ ಮಾತ್ರ ವ್ಯರ್ಥವಾಗಿದೆ ಎಂದು ಹೇಳಿದೆ.