ಇಂತಹ ಕಾಮುಕರಿಗೆ ಸಾರ್ವಜನಿಕ ಚೌಕದಲ್ಲೇ ಗಲ್ಲು ಶಿಕ್ಷೆ ವಿಧಿಸಬೇಕು. ಹಾಗೆ ಮಾಡಿದರೆ ಮಾತ್ರ ಇಂತಹ ಅಪರಾಧಗಳು ನಿಲ್ಲುತ್ತವೆ!

ಠಾಣೆ, ಜೂನ್ ೨೨ (ವಾರ್ತೆ) – ಕಲ್ಯಾಣ್ (ಪೂರ್ವ) ಪ್ರದೇಶದಲ್ಲಿ ಕಸ ಆಯ್ದು ಜೀವನ ಸಾಗಿಸುತ್ತಿದ್ದ ೧೫ ವರ್ಷದ ಅಪ್ರಾಪ್ತ ಬಾಲಕಿಗೆ ಆಮಿಷ ಒಡ್ಡಿ, ಮನೆಯೊಂದಕ್ಕೆ ಕರೆದೊಯ್ದು ಅಖ್ತರ್ ಮಣಿಯಾರ್ (೬೦ ವರ್ಷ) ಮತ್ತು ಸಲೀಂ ಶೇಖ್ (೬೨ ವರ್ಷ) ಎಂಬುವವರು ಅತ್ಯಾಚಾರ ಮಾಡಿದರು. ಜೂನ್ ೨೦ರ ಮಧ್ಯರಾತ್ರಿ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು ಮತ್ತು ತಕ್ಷಣ ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಿಸಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳು ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಕೋಳಸೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಮತಾಂಧರ ಮಾನಸಿಕತೆಯನ್ನು ತಿಳಿಯಿರಿ! ಕಾನೂನಿನ ಭಯವಿಲ್ಲದ ಕಾರಣ ಇಂತಹ ಕೆಲಸ ಮಾಡುವ ಧೈರ್ಯ ಅವರಿಗೆ ಬರುತ್ತದೆ. – ಸಂಪಾದಕರು)
ಈ ಘಟನೆಯ ನಂತರ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದುತ್ವನಿಷ್ಠ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಸ್ಥಳೀಯ ನಾಗರಿಕರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಶಿವಸೇನೆಯ ಸ್ಥಳೀಯ ನಗರಸೇವಕ ಮಹೇಶ್ ಗಾಯಕ್ವಾಡ್ ಅವರೂ ಕೂಡ ಈ ಪ್ರಕರಣದ ವಿಚಾರಣೆಯನ್ನು ಶೀಘ್ರಗತಿ ನ್ಯಾಯಾಲಯದಲ್ಲಿ (ಫಾಸ್ಟ್ ಟ್ರ್ಯಾಕ್ ಕೋರ್ಟ್) ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಾದ ಮಣಿಯಾರ್ ಟೀ ಸ್ಟಾಲ್ ನಡೆಸುತ್ತಾನೆ, ಸಲೀಂ ಶೇಖ್ ರಿಕ್ಷಾ ಚಾಲಕನಾಗಿದ್ದಾನೆ. ಇನ್ನು, ಸಂತ್ರಸ್ತ ಬಾಲಕಿ ಅತ್ಯಂತ ಬಡ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !