‘ಸೆಕ್ಯುಲರ್‌ವಾದದ ಹೆಸರಿನಲ್ಲಿ ಹಿಂದೂವಿರೋಧಿ ಪತ್ರಿಕೋದ್ಯಮ’ ಈ ವಿಷಯದಲ್ಲಿ ಆನ್‌ಲೈನ್ ವಿಶೇಷ ಪರಿಸಂವಾದ !

ಮತಾಂಧರು ದೇಶದಲ್ಲಿ ಗೃಹಯುದ್ಧವನ್ನು ಪ್ರಾರಂಭಿಸಿದ್ದಾರೆ; ಆದರೆ ಮುಖ್ಯ ಪ್ರವಾಹದಲ್ಲಿನ ವಾರ್ತಾವಾಹಿನಿಗಳು ತಥಾಕಥಿತ ‘ಸೆಕ್ಯುಲರಿಸಮ್’ನ ಹೆಸರಿನಲ್ಲಿ ಅದನ್ನು ತೋರಿಸುತ್ತಿಲ್ಲ. – ಶ್ರೀ. ಸುರೇಶ ಚವ್ಹಾಣಕೆ, ಮುಖ್ಯ ಸಂಪಾದಕರು, ಸುದರ್ಶನ ನ್ಯೂಸ್ ಚಾನೆಲ್

ಹರಿಯಾಣದ ‘ಮೆವಾತ’ನಲ್ಲಿ ಮಾತ್ರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧರು ದೌರ್ಜನ್ಯ ನಡೆಸಿದ್ದಾರೆ ಎಂದೇನಿಲ್ಲ. ದೇಶದಾದ್ಯಂತ ಇಂತಹ ಅನೇಕ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಕೆಲವು ವರ್ಷಗಳ ಹಿಂದೆ, ‘ಸುದರ್ಶನ ಚಾನಲ್’ ನಲ್ಲಿ ‘ಮಿನಿ ಪಾಕಿಸ್ತಾನ’ ಎಂಬ ಹೆಸರಿನ ಕಾರ್ಯಕ್ರಮವನ್ನು ತೋರಿಸಲಾಗಿತ್ತು’ ಅದರಲ್ಲಿ ನಾವು ಭಾರತದಲ್ಲಿರುವ ಇಂತಹ ಒಂದು ಸಾವಿರ ಸ್ಥಳಗಳನ್ನು ತೋರಿಸಿದ್ದೆವು. ಅದರಲ್ಲಿ ೯ ಪ್ರದೇಶಗಳು ಹೇಗಿವೆ ಎಂದರೆ; ಅಲ್ಲಿ ಪಿಜ್ಝಾ ಹೋಗುವುದಿಲ್ಲ; ಯಾವುದೇ ಆನ್‌ಲೈನ್ ಖರೀದಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆಯಿಲ್ಲ. ಅಪರಾಧಿಗಳನ್ನು ಬಂಧಿಸಲು ಪೊಲೀಸರು ಹೋಗುವುದಿಲ್ಲ; ಪೊಲೀಸರು ಹೋಗಬೇಕಾಗಿದ್ದಲ್ಲಿ ಅರೆಸೇನಾ ಪಡೆಯನ್ನು ಜೊತೆಯಲ್ಲಿರಿಸಿಕೊಂಡು ಹೋಗಬೇಕಾಗುತ್ತದೆ. ದಿಲ್ಲಿಯಲ್ಲಿಯೂ ಮತಾಂಧರು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದಿದ್ದಾರೆ. ದಿಲ್ಲಿಯ ಸಿಲಮಪುರದಲ್ಲಿನ ಪರಿಸ್ಥಿತಿಯು ‘ಮೇವಾತ್’ ಗಿಂತಲೂ ಹೆಚ್ಚು ಗಂಭೀರವಾಗಿದೆ. ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ೨೦೦ ಮಂದಿ ಮತಾಂಧರು ಯಾದವ ಸಮಾಜದ ಜನರ ಮೇಲೆ ಹಿಂಸಾತ್ಮಕ ಆಕ್ರಮಣ ನಡೆಸಿದ್ದರು. ಅದರಲ್ಲಿ ಮಹಿಳೆಯರ ಮೇಲೆ ಬಲಾತ್ಕಾರ ಮಾಡುವುದರಿಂದ ಹಿಡಿದು ಅವರನ್ನು ಹತ್ಯೆಗೈಯ್ಯುವ ತನಕ ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಯಿತು. ಮಾಧ್ಯಮದವರಿಗೆ ಮಾತ್ರ ಈ ವಿಷಯವು ಕೋಮುವಾದ ಎಂದು ಅನಿಸದೇ ಕೇವಲ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಎಂದೆನಿಸುತ್ತದೆ. ಆದರೆ ಇದು ಒಂದು ಗೃಹಯುದ್ಧವೇ ಆಗಿದ್ದು ಅದು ದೇಶದ ಅನೇಕ ಕಡೆಗಳಲ್ಲಿ ಪ್ರಾರಂಭವಾಗಿದೆ. ಆದರೆ ಮುಖ್ಯ ಪ್ರವಾಹದಲ್ಲಿನ ವಾರ್ತಾವಾಹಿನಿಗಳು ‘ಸೆಕ್ಯುಲರಿಸಮ್’ನ ಹೆಸರಿನಲ್ಲಿ ಅದನ್ನು ತೋರಿಸುತ್ತಿಲ್ಲ. ಎಂದು ಸುದರ್ಶನ ಚಾನಲ್ ನ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆಯವರು ಘಂಟಾಘೋಷವಾಗಿ ತಿಳಿಸಿದರು. ಅವರು ‘ಹಿಂದೂ ಜನಜಾಗೃತಿ ಸಮಿತಿ’ಯು ಆಯೋಜಿಸಿದ ‘ಸೆಕ್ಯುಲರ್‌ವಾದದ ಹೆಸರಿನಲ್ಲಿ ಹಿಂದೂವಿರೋಧಿ ಪತ್ರಿಕೋದ್ಯಮ’ ಎಂಬ ‘ಆನ್‌ಲೈನ್ ವಿಶೇಷ ಪರಿಸಂವಾದ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ HinduJagruti.org, ಯು-ಟ್ಯೂಬ್ ಮತ್ತು ಟ್ವಿಟರ್ ನ ಮೂಲಕ ೫೪೦೦ ಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷ ವೀಕ್ಷಿಸಿದರು.

ಈ ಸಮಯದಲ್ಲಿ ಬೆಂಗಳೂರಿನ ಲೇಖಕ ಹಾಗೂ ಸ್ತಂಭಲೇಖಕ ಶ್ರೀ. ಆಭಾಸ ಮಲದಹಿಯಾರರು ಹೀಗೆಂದರು, ಕಮ್ಯುನಿಸ್ಟ್ ಪತ್ರಕರ್ತರ ಮಾನಸಿಕತೆಯನ್ನು ತಿಳಿದುಕೊಳ್ಳಬೇಕು. ಅವರ ಉದ್ದೇಶವು ಹಿಂದೂವಿರೋಧಿಯಲ್ಲ, ಭಾರತವಿರೋಧಿಯಾಗಿದೆ. ಅದಕ್ಕಾಗಿ ಅವರು ಮೊದಲಿಗೆ ಹಿಂದೂ ಸಮಾಜವನ್ನು ಗುರಿಯಾಗಿರಿಸಿಕೊಂಡು ಅದನ್ನು ದುರ್ಬಲಗೊಳಿಸಿದ್ದಾರೆ. ಭಾರತವಿರೋಧಿ ಸುದ್ದಿಗಳನ್ನು ತೋರಿಸುತ್ತಿದ್ದಾರೆ. ಒಂದು ಸಲ ಹಿಂದೂ ದುರ್ಬಲಗೊಂಡರೆ ದೇಶದ ಮೇಲೆ ತಮ್ಮ ಸ್ವಂತದ ವಿಚಾರಧಾರೆಯನ್ನು ಸ್ಥಾಪಿಸುವರು.

ಈ ಸಂದರ್ಭದಲ್ಲಿ ‘ಆಪ್ ಇಂಡಿಯಾ’ ಈ ಜಾಲತಾಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ರಾಹುಲ ರೌಶನ್ ಹಾಗೂ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಸಹಸಂಪಾದಕ ಶ್ರೀ. ಚೇತನ ರಾಜಹಂಸ ಇವರೂ ತಮ್ಮ ವಿಷಯವನ್ನು ಮಂಡಿಸಿದರು.