ಈ ಸ್ಥಿತಿಗೆ ಯಾರು ಹೊಣೆ ?

೧. ಗೋರಕ್ಷಕರನ್ನು ಸರಕಾರ ಯಾವಾಗ ರಕ್ಷಿಸುತ್ತದೆ ?

ಆಳೇಫಾಟಾ (ಮಹಾರಾಷ್ಟ್ರ) ಪರಿಸರದಲ್ಲಿ ಖ್ಯಾತ ಗೋರಕ್ಷಕ ಹಾಗೂ ಗೌರವಾರ್ಥ ಪ್ರಾಣಿ ಕಲ್ಯಾಣ ಅಧಿಕಾರಿ ಶ್ರೀ. ಶಿವಶಂಕರ ಸ್ವಾಮಿ ಇವರ ಮೇಲೆ ಗೋಮಾಫಿಗಳು ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಶ್ರೀ. ಸ್ವಾಮಿ ಇವರ ವಾಹನ ಚಾಲಕ ಮತ್ತು ಪ್ರಶಾಸಕೀಯ ಸುರಕ್ಷಾ ರಕ್ಷಕರಿಂದಾಗಿ ಬಚಾವಾದರು.

೨. ಈ ಸ್ಥಿತಿಗೆ ಯಾರು ಹೊಣೆ ?

ಕೊರೊನಾದಿಂದ ಬೆಂಗಳೂರು ನಗರದಲ್ಲಿ ರೋಗಿಯ ಮರಣ ಹೊಂದುವ ವೇಗವು ಅಗಾಧ ಪ್ರಮಾಣದಲ್ಲಿವೆ. ಅವರ ಅಂತಿಮಸಂಸ್ಕಾರಕ್ಕಾಗಿ ಸ್ಮಶಾನಭೂಮಿಯಲ್ಲಿ ಅನೇಕ ಗಂಟೆಗಳವರೆಗೆ ಕಾಯಬೇಕಾಗುತ್ತಿದೆ. ಚಾಮರಾಜಪೇಟೆಯ ಒಂದು ಸ್ಮಶಾನ ಭೂಮಿಯ ಹೊರಗಂತೂ ‘ಹೌಸ್ ಫುಲ್ ಎಂದು ಫಲಕವನ್ನೇ ಹಾಕಲಾಗಿದೆ.

೩. ಇಂತಹವರಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು !

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಖಾಸಗಿ ನರ್ಸಿಂಗ್ ಹೋಮ್‌ಗಳು ಮತ್ತು ಆಸ್ಪತ್ರೆಗಳೊಂದಿಗೆ ಹಾಸಿಗೆಗಳನ್ನು ನಿರ್ಬಂಧಿಸಲು ಮತ್ತು ಅದನ್ನು ಅತಿಯಾದ ಶುಲ್ಕಕ್ಕೆ ಕಾಯ್ದಿರಿಸಲು ‘ಒಪ್ಪಂದ ಮಾಡಿದ್ದಾರೆ, ಎಂದು ಎಂದು ಭಾಜಪದ ಸಂಸದ ತೇಜಸ್ವಿಸೂರ್ಯ ಇವರು ಆರೋಪಿಸಿದ್ದಾರೆ.

೪. ಪ್ರತಿಯೊಂದು ಮಂತ್ರದ ಪರಿಣಾಮಗಳ ಸಂಶೋಧನೆ ಮಾಡಬೇಕು !

ಕೇಂದ್ರೀಯ ವಿಜ್ಞಾನ ಸಚಿವಾಲಯವು ‘ಗಾಯತ್ರಿ ಮಂತ್ರದಿಂದ ಕೊರೊನಾ ಗುಣಮುಖವಾಗಬಹುದೇ ? ಎಂದು ಸಂಶೋಧನೆಯನ್ನು ನಡೆಸಲು ಹೃಷಿಕೇಶದಲ್ಲಿನ ಎಮ್ಸ್ ಆಸ್ಪತ್ರೆಗೆ ೩ ಲಕ್ಷ ರೂಪಾಯಿಗಳ ಧನ ಸಹಾಯ ನೀಡಿದೆ.

೫. ಭಾರತೀಯರು ಜ್ಯೂಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸಬೇಕು !

ಭಾರತದಲ್ಲಿ ಕೊರೊನಾದ ಹೆಚ್ಚುತ್ತಿರುವ ಸಂಕಟವನ್ನು ದೂರಗೊಳಿಸಲು ಇಸ್ರೇಲ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಜ್ಯೂ ನಾಗರಿಕರು ಒಟ್ಟಿಗೆ ಸೇರಿ ‘ಓಂ ನಮಃ ಶಿವಾಯ | ಈ ಜಪ ಮತ್ತು ಪ್ರಾರ್ಥನೆ ಮಾಡಿದರು.

೬. ಕೇಂದ್ರ ಸರಕಾರವೇ ಹೀಗೆ ಆದೇಶವನ್ನು ನೀಡಬೇಕು !

ಉತ್ತರಪ್ರದೇಶ ಸರಕಾರವು ಕೊರೊನಾ ಅವಧಿಯಲ್ಲಿ ಗೋವುಗಳಿಗೆ ಪ್ರತ್ಯೇಕ ಸಹಾಯ ಕಕ್ಷೆಯನ್ನು ಸ್ಥಾಪಿಸಲು ಆದೇಶ ನೀಡಿದೆ. ಗೋಶಾಲೆಯಲ್ಲಿ ಗೋವುಗಳು ಮತ್ತು ಇನ್ನಿತರ ಜಾನುವಾರುಗಳಿಗೆ ಸಕಲ ಆರೋಗ್ಯ ಸೌಕರ್ಯ, ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಇವುಗಳ ವ್ಯವಸ್ಥೆಯನ್ನು ಮಾಡಲಾಗುವುದು.

೭. ಇಂತಹವರ ಮೇಲೆ ಉಗ್ರಕ್ರಮ ಕೈಗೊಳ್ಳಬೇಕು !

ಮಧ್ಯಪ್ರದೇಶದ ನೌಗಾವಾದಲ್ಲಿನ ಮಸೀದಿ ಮತ್ತು ಪಲಟನ್ ಮಸೀದಿಯಲ್ಲಿ ಕೊರೋನಾದ ಅವಧಿಯಲ್ಲಿ ಸಾಮೂಹಿಕ ನಮಾಜು ಪಠಣ ಮಾಡಿದ್ದರಿಂದ ಇಬ್ಬರು ಮೌಲ್ವಿ ಸಹಿತ ೨೦೦ ಜನರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ. ಈ ಹಿಂದೆಯೂ ನಿಯಮಗಳ ಉಲ್ಲಂಘನೆ ಮಾಡಿದಾಗ ಪೊಲೀಸರು ಕೇವಲ ಎಚ್ಚರಿಕೆಯನ್ನು ನೀಡಿ ಬಿಟ್ಟುಬಿಟ್ಟಿದ್ದರು.