ಚೀನಾವು ತೈವಾನ್ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯನ್ನು ಮನಗಂಡು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಆಸ್ಟ್ರೇಲಿಯಾ !

ಬೀಜಿಂಗ್ (ಚೀನಾ) – ಮುಂದಿನ ಐದು ವರ್ಷಗಳಲ್ಲಿ ಚೀನಾವು ತೈವಾನ್ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾವು ಚೀನಾದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಒಂದು ರಣತಂತ್ರವನ್ನು ರೂಪಿಸಲಾಗುತ್ತಿದೆ. ಇದೇ ವಾರದಲ್ಲಿ ಚೀನಾವು ೨೫ ಯುದ್ಧವಿಮಾನಗಳ ಒಂದು ದಂಡನ್ನು ತೈವಾನ್‌ನ ವಾಯುಪ್ರದೇಶಕ್ಕೆ ಕಳುಹಿಸಿತ್ತು. ಚೀನಾದ ಯುದ್ಧ ವಿಮಾನಗಳು ಇಂತಹ ಕುತಂತ್ರವನ್ನು ನಿರಂತರವಾಗಿ ನಡೆಸುತ್ತಿವೆ. ಆದ್ದರಿಂದಲೇ ಆಸ್ಟ್ರೇಲಿಯಾ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ. ಚೀನಾವು ಹಲವು ವರ್ಷಗಳಿಂದ ತೈವಾನ್ ತನ್ನ ಪ್ರದೇಶವಾಗಿದೆ ಎಂದು ಹೇಳಿಕೊಳ್ಳುತ್ತಿದೆ.