ಶಾಲೆಗಳಲ್ಲಿ ‘ಸ್ವಸ್ತಿಕ’ ಚಿಹ್ನೆ ಧಾರ್ಮಿಕ ದ್ವೇಷದ ಪ್ರತೀಕವಾಗಿದೆ ಎಂದು ಕಲಿಸುವಂತೆ ಒತ್ತಾಯಿಸುವ ಮಸೂದೆ ಹಿಂಪಡೆ !

ಅಮೆರಿಕದಲ್ಲಿ ಹಿಂದೂಗಳ, ಜೈನರ ಮತ್ತು ಬೌದ್ಧರ ವಿರೋಧದ ಪರಿಣಾಮ !

ವಿದೇಶದ ಹಿಂದೂಗಳು ಇಂತಹ ಅವಮಾನದ ಬಗ್ಗೆ ಜಾಗರೂಕರಾಗಿ ಅದನ್ನು ವಿರೀಧಿಸುತ್ತಾರೆ ಹಾಗೂ ಅದರಲ್ಲಿ ಗೆಲುವು ಸಾಧಿಸುತ್ತಾರೆ; ಆದರೆ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅನೇಕ ಬಾರಿ ಹಿಂದೂಗಳೇ ತಮ್ಮ ಧರ್ಮವನ್ನು ಅವಮಾನಿಸುತ್ತಾರೆ ಹಾಗೂ ಇತರ ಹಿಂದೂಗಳು ಅದನ್ನು ವಿರೋಧಿಸುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ !

ನ್ಯೂಜೆರ್ಸಿ (ಅಮೇರಿಕಾ) – ನ್ಯೂಯಾರ್ಕ್‍ನ ಶಾಲೆಗಳಲ್ಲಿ ಧಾರ್ಮಿಕ ಸಂಕೇತವಾದ ‘ಸ್ವಸ್ತಿಕ’ ಈ ಧಾರ್ಮಿಕ ಚಿಹ್ನೆಯನ್ನು ದ್ವೇಷ ಹಾಗೂ ಅಸಹಿಷ್ಣುತೆಯ ಪ್ರತೀಕವಾಗಿದೆ, ಎಂದು ಕಲಿಸಬೇಕು, ಎಂಬ ಬೇಡಿಕೆಯ ಬಗ್ಗೆ ಅಮೇರಿಕಾದ ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯನ್ನು ಹಿಂದೂಗಳು, ಜೈನರು ಮತ್ತು ಬೌದ್ಧರು ವಿರೋಧಿಸಿದ್ದರಿಂದ ಈ ಮಸೂದೆಯನ್ನು ಅಂತಿಮವಾಗಿ ಹಿಂಪಡೆಯಲಾಗಿದೆ. ಸಂಸದ ಡೇವಿಡ್ ಕಾಮಿನ್ಸ್ಕಿ ಇವರು ಈ ಮಸೂದೆಯನ್ನು ಮಂಡಿಸಿದ್ದರು ಅವರೇ ಅದನ್ನು ಹಿಂತೆಗೆದುಕೊಂಡರು. ಈ ನಿರ್ಧಾರವನ್ನು `ಕೊಲಿಶನ ಆಫ್ ಹಿಂದೂಸ್ ಆಫ್ ನಾರ್ತ್ ಅಮೇರಿಕಾ’ ಈ ಹಿಂದುತ್ವನಿಷ್ಠ ಸಂಘಟನೆಯು ಸ್ವಾಗತಿಸಿದೆ.

ಇಂತಹ ಮಸೂದೆಯು ನ್ಯೂಯಾರ್ಕ್‍ನ ಶಾಲೆಗಳ ಹಿಂದೂ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅಲ್ಲದೆ, ಹಿಂದೂಗಳು, ಬೌದ್ಧರು, ಜೈನರು, ಸ್ಥಳೀಯ ಅಮೆರಿಕನ್ನರು ಮತ್ತು ಇತರ ೩೦೦ ಕೋಟಿಗೂ ಹೆಚ್ಚು ಜನರು ಸ್ವಸ್ತಿಕ ಚಿಹ್ನೆಯನ್ನು ಶಾಂತಿ, ಕಲ್ಯಾಣ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಿದ್ದಾರೆ. ಹಿಟ್ಲರ್ ಮತ್ತು ನಾಜಿ ಸೈನ್ಯ ಬಳಸಿದ್ದ ಚಿಹ್ನೆ ‘ಹ್ಯಾಕೆನ್‍ಕ್ರೂಸ್’ (ಹುಕ್ ಕ್ರಾಸ್) ಇದು ತಿರಸ್ಕಾರದ ಸಂಕೇತವಾಗಿದೆ; ಆದ್ದರಿಂದ ಸ್ವಸ್ತಿಕ ಚಿಹ್ನೆಯನ್ನು ಸಾವು ಮತ್ತು ವಿನಾಶದ ಸಂಕೇತವಾಗಿ ಜನರಲ್ಲಿ ತಪ್ಪುಗ್ರಹಿಕೆಯು ಹರಡುತ್ತದೆ ಎಂದು ಸಂಘಟನೆಯು ಹೇಳಿದೆ.