ಆದರ್ಶ ರಾಜಪುರುಷರಲ್ಲಿರುವಂತಹ ಸಾಮರ್ಥ್ಯಶಾಲಿ, ಪ್ರಿಯದರ್ಶನ, ಧೃಢಪ್ರತಿಜ್ಞೆ ಮುಂತಾದ ಎಲ್ಲ ಲಕ್ಷಣಗಳ್ಳುಳ್ಳ ಪ್ರಭು ಶ್ರೀರಾಮ !
೧. ಮಹರ್ಷಿ ವಾಲ್ಮೀಕಿಯವರ ಅಭಿಪ್ರಾಯಕ್ಕನುಸಾರ
‘ಮಹರ್ಷಿ ವಾಲ್ಮೀಕಿಯವರ ಅಭಿಪ್ರಾಯಕ್ಕನುಸಾರ ‘ಆದರ್ಶ ರಾಜನು ಗುಣವಂತ, ಪರಾಕ್ರಮಿ, ಧರ್ಮಪರಾಯಣ, ಉಪಕಾರ ಸ್ಮರಣೀ, ಸತ್ಯವಚನಿ, ಧೃಢಪ್ರತಿಜ್ಞೆ, ಸದಾಚಾರಿ, ಸಮಸ್ತ ಪ್ರಾಣಿಗಳ ಹಿತಬಯಸುವ, ವಿದ್ವಾಂಸ, ಬಲಶಾಲಿ, ಪ್ರೀತಿಯುಳ್ಳವ, ಮನಸ್ಸಿನ ಮೇಲೆ ನಿಯಂತ್ರಣವುಳ್ಳವ, ಕ್ರೋಧವನ್ನು ಗೆದ್ದ, ಕಾಂತಿಯುಕ್ತ, ಅನಿಂದಕನು ಮತ್ತು ಯುದ್ಧದಲ್ಲಿ ಅಪರಾಜಿತ ಯೋಧನಾಗಿರುತ್ತಾನೆ.
೨. ಮಹಾಬಲಿ ಹನುಮಂತನ ಅಭಿಪ್ರಾಯಕ್ಕನುಸಾರ
ಆದರ್ಶ ರಾಜನು ಪೂರ್ಣ ಚಂದ್ರನಂತೆ ಮನೋಹರ ರೂಪಿ ಮುಖವುಳ್ಳ, ಕಮಲಪತ್ರದಂತೆ ವಿಶಾಲ ನೇತ್ರಗಳುಳ್ಳ, ರೂಪ-ಯೌವನ ಸಂಪನ್ನ, ತೇಜ, ಕ್ಷಮೆ, ಬುದ್ಧಿವಂತ ಮತ್ತು ಯಶಸ್ವೀ, ಸದಾಚಾರಿ, ಧರ್ಮ ಮತ್ತು ಚಾತುರ್ವರ್ಣದ ರಕ್ಷಕ, ಪರಮ ಪ್ರಕಾಶರೂಪ, ರಾಜನೀತಿ ನಿಪುಣ, ಬ್ರಾಹ್ಮಣರ ಉಪಾಸಕ, ಜ್ಞಾನಿ, ಶೀಲವಂತ, ವಿನಮ್ರ, ವೇದವೇದಾಂಗಗಳ ಪರಿನಿಷ್ಠಿತ (ಪೂರ್ಣ ಸಂಪನ್ನ) ವಿದ್ವಾಂಸ ಮತ್ತು ಸಾಮುದ್ರಿಕ ಶಾಸ್ತ್ರಕ್ಕನುಸಾರ ಶುಭ ಅಂಗ-ಉಪಾಂಗಗಳುಳ್ಳವನು.
೩. ಅಯೋಧ್ಯೆಯ ಜನತೆಗನುಸಾರ
ಆದರ್ಶ ರಾಜನು ವೀರ್ಯವಂತನು, ಸ್ಥಿತಪ್ರಜ್ಞನು, ವಿದ್ವಾಂಸನು, ಎಲ್ಲ ವಿದ್ಯೆಗಳಲ್ಲಿ ಮತ್ತು ವೇದವೇದಾಂಗಗಳ ಪಾರಂಗತನು, ಮಧುರಭಾಷಿ, ಸಜ್ಜನನು, ಕೋಪರಹಿತ, ಅಸೂಯೆ ಮತ್ತು ಮತ್ಸರ ಇವುಗಳಿಂದ ಅಲಿಪ್ತ, ವೃದ್ಧ ಮತ್ತು ಬ್ರಾಹ್ಮಣರ ಪೂಜಕನು, ಸದೈವ ಶಾಂತ, ಗಂಭೀರ, ವ್ಯವಸ್ಥೆಯನ್ನು ಗುಪ್ತವಾಗಿಡುವವನು, ಭಾಷಾಜ್ಞಾನ ನಿಪುಣನು, ಶತ್ರುವಿನ ಮೇಲೆ ದಂಡೆತ್ತಿ ಹೋಗುವವ, ಹೋರಾಟದಲ್ಲಿ ಪಾರಂಗತ, ಸೇನೆಸಂಚಾಲನೆಯಲ್ಲಿ ನಿಪುಣ, ದೋಷದೃಷ್ಟಿ ಇಲ್ಲದವ, ಪರಾಕ್ರಮಿ, ಅಂತರ್ಬಾಹ್ಯ ಶುದ್ಧ, ನಿರೋಗಿ, ಯುವಕ ಮತ್ತು ದೇಶಕಾಲ ತತ್ತ್ವವನ್ನು ಅರಿತವನು ಇರುತ್ತಾನೆ. ವಾಲ್ಮೀಕಿ ರಾಮಾಯಣಕ್ಕನುಸಾರ ಮೇಲಿನ ಎಲ್ಲ ಲಕ್ಷಣಗಳು ಪ್ರಭು ಶ್ರೀರಾಮಚಂದ್ರನಲ್ಲಿ ಕಾಣಿಸುತ್ತಿದ್ದವು.
(ತ್ರೈಮಾಸಿಕ ‘ಶ್ರೀಗುರುಸೇವಾ’, ೧ ಆಗಸ್ಟ್ ರಿಂದ ೩೧ ಅಕ್ಟೋಬರ್ ೨೦೧೦)