ಆಪತ್ಕಾಲದಲ್ಲಿ ಸಾಧಕರಿಗೆ ಮಾರ್ಗದರ್ಶಕ ಅಂಶಗಳು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಸಾಧಕರು ಪರಸ್ಪರರಿಂದ ಕಲಿತು ಅದರಂತೆ ಕೃತಿ ಮಾಡುವುದು ಆವಶ್ಯಕವಾಗಿದೆ !

ಭಗವಂತನು ಪ್ರತಿಯೊಂದು ಜೀವವನ್ನು ಹೇಗೆ ರೂಪಿಸುತ್ತಾನೆ, ಎಂಬುದು ನಮಗೆ ಕಲಿಯಲು ಸಿಗುತ್ತದೆ. ಪ್ರತಿಯೊಬ್ಬರಲ್ಲಿ ಅನಂತ ಗುಣಗಳಿವೆ. ಒಂದು ವೇಳೆ ನಾವು ದೇವರ ಚರಣಗಳಲ್ಲಿ ನಮ್ಮ ಗುಣಗಳನ್ನು ಅರ್ಪಿಸಿದರೆ, ಖಂಡಿತವಾಗಿಯೂ ನಮ್ಮ ಪ್ರಗತಿಯಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುಸ್ವರೂಪರಾಗಿದ್ದು ಅವರು ‘ಗುರುಕೃಪಾಯೋಗ’ವನ್ನು ತಯಾರಿಸಿದ್ದಾರೆ. ದೇವರಿಗೆ ನಮ್ಮ ಒಂದೊಂದು ಗುಣವನ್ನು ಅರ್ಪಿಸುವುದೆಂದರೆ ದೇವರು ನಮಗೆ ಏನೆಲ್ಲ ಕೊಟ್ಟಿದ್ದಾನೆಯೋ, ಅದನ್ನು ಅವನಿಗೆ ಅರ್ಪಿಸುವುದು ಮತ್ತು ದೋಷಗಳ ನಿರ್ಮೂಲನೆಯನ್ನು ಮಾಡುವುದು ಎಂದಾಗಿದೆ. ಪರಾತ್ಪರ ಗುರುದೇವರಿಗೆ ಸಾಧಕರು ಪರಸ್ಪರರಿಂದ ಕಲಿತು, ತಮ್ಮಲ್ಲಿ ಇತರರ ಗುಣಗಳನ್ನು ಅಳವಡಿಸಿಕೊಂಡು ಕೃತಿಗಳನ್ನು ಮಾಡಬೇಕು ಎಂಬ ಅಪೇಕ್ಷೆಯಿದೆ. ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಮಾಡಿಕೊಂಡು ಮನಸ್ಸನ್ನು ಶುದ್ಧ, ಸ್ವಚ್ಛ ಮತ್ತು ನಿರ್ಮಲಗೊಳಿಸಬೇಕು, ಇದರಿಂದ ಭಕ್ತಿ ಹೆಚ್ಚಾಗಲು ಸಹಾಯವಾಗಿ ದೇವರ ಬಲ ಸಿಗುತ್ತದೆ. ‘ಆಪತ್ಕಾಲದಲ್ಲಿ ಶೇ. ೬೧ ರಷ್ಟು ಮಟ್ಟವನ್ನು ಪ್ರಾಪ್ತಮಾಡಿಕೊಳ್ಳುವ ಸಾಧಕರ ಫಸಲು ಬರಲಿದೆ’ ಎಂದು ಗುರುಗಳ ಸಂಕಲ್ಪವು ಈಗಾಗಲೇ ಆಗಿದೆ. ಗುರುಗಳ ಈ ಸಂಕಲ್ಪವು ಸಾಧನೆಯನ್ನು ಮಾಡುವ ಪ್ರತಿಯೊಂದು ಜೀವಕ್ಕಾಗಿ ಕಾರ್ಯನಿರತವಾಗಿದೆ. ಆದುದರಿಂದ ನಿರ್ಧಾರ ಮಾಡಿ ಕೃತಿಯ ಸ್ತರದಲ್ಲಿ ಸಾಧನೆಯನ್ನು ಮಾಡಲು ಪ್ರಯತ್ನಿಸೋಣ.

೨. ಆಪತ್ಕಾಲದ ದೃಷ್ಟಿಯಿಂದ ಮನಸ್ಸಿನ ಸಿದ್ಧತೆಯಾಗುವುದು ಮಹತ್ವದ್ದಾಗಿದೆ !

ಪ್ರತಿಯೊಬ್ಬರೂ ಭಾವಭಕ್ತಿಯಿಂದ ಕರ್ಮಗಳನ್ನು ಮಾಡಿದರೆ, ಭಕ್ತಿಯ ಪ್ರವಾಹ ಹೆಚ್ಚಾಗುತ್ತದೆ ಮತ್ತು ಭಕ್ತಿ ಹೆಚ್ಚಾದರೆ, ಮನಸ್ಸಿನ ಸಿದ್ಧತೆಯಾಗುತ್ತದೆ. ಅದರಿಂದ ಚಿಂತೆಯು ದೂರವಾಗುತ್ತದೆ. ಭಕ್ತಿಯೇ ಶಕ್ತಿಯಾಗಿದೆ ಮತ್ತು ಭಕ್ತಿಯಲ್ಲಿಯೇ ಶಕ್ತಿಯಿದೆ. ಆಪತ್ಕಾಲದ ದೃಷ್ಟಿಯಿಂದ ಮನಸ್ಸಿನ ಸಿದ್ಧತೆಯಿದ್ದರೆ, ತಾನಾಗಿಯೇ ಸ್ಥೂಲದಲ್ಲಿಯೂ ಸಿದ್ಧತೆಯಾಗುತ್ತದೆ. ಮನಸ್ಸಿನಲ್ಲಿ ದ್ವಂದ್ವವಿದ್ದರೆ, ಶ್ರದ್ಧೆಯು ಕಾರ್ಯಾಚರಿಸುವುದಿಲ್ಲ. ಮನಸ್ಸಿನ ಶ್ರದ್ಧೆಯು ದೃಢವಾಗಿದ್ದರೆ, ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ಆಪತ್ಕಾಲದ ಸಿದ್ಧತೆಯನ್ನು ಮಾಡಲು ನಾವು ಸಾಧಕರ ಶರೀರ ಸುದೃಢವಾಗಿರಲು ವ್ಯಾಯಾಮ ಕಲಿಸುತ್ತೇವೆ. ದೇಹದ ಕಾಳಜಿ ತೆಗೆದುಕೊಳ್ಳುವುದರೊಂದಿಗೆ ಸಾಧನೆಗಾಗಿ ಪ್ರತಿಯೊಂದು ಕ್ಷಣದ ಬಳಕೆಯಾಗಬೇಕು ಮತ್ತು ಸಾಧನೆಯನ್ನು ಹೆಚ್ಚಿಸಿ ಮುಂದೆ ಹೋಗಬೇಕು. ಸಾಧಕರ ಸಾಧನೆ ಹೆಚ್ಚಾದ ನಂತರ, ಮುಂದೆ ಸ್ಥಿರತೆ ತಾನಾಗಿಯೇ ಬರುತ್ತದೆ. ‘ದೇವರು ನಮಗಾಗಿ ಎಷೆಲ್ಲ ಮಾಡುತ್ತಾನೆ’, ಎಂಬುದರ ಕಡೆಗೆ ಗಮನ ಕೊಡುವುದು ಕೃತಜ್ಞತೆಯ ಭಾಗವೇ ಆಗಿದೆ. ಅದನ್ನೇ ನಮಗೆ ಹೆಚ್ಚಿಸಬೇಕಾಗಿದೆ. ಸಂಪತ್ಕಾಲದಲ್ಲಿ ಆಸಕ್ತಿಗನುಸಾರ ಕಲಿಯುವುದು ಯೋಗ್ಯವಾಗಿತ್ತು; ಆದರೆ ಆಪತ್ಕಾಲದಲ್ಲಿ ಯಾವುದನ್ನು ಕಲಿಯುವುದು ಆವಶ್ಯಕವಾಗಿದೆಯೋ, ಆ ಪ್ರತಿಯೊಂದು ವಿಷಯವನ್ನು ಇಷ್ಟಪಟ್ಟು ಕಲಿಯಬೇಕು. ಕೆಲವು ಜನರಿಗೆ ಸಾಧನೆಯನ್ನು ಮಾಡಬೇಕಾಗಿರುತ್ತದೆ; ಆದರೆ ಸಂಘರ್ಷ ಬೇಡವಾಗಿರುತ್ತದೆ. ಸಂಘರ್ಷದ ಹೊರತು ಸಾಧನೆಯು ಸಾಧ್ಯವಿಲ್ಲ.

೩. ಆಪತ್ಕಾಲದಲ್ಲಿ ಸ್ವೇಚ್ಛೆಗಿಂತ ಸಾಧನೆಯಾಗುವುದು ಆವಶ್ಯಕ !

ಆಪತ್ಕಾಲದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡಬೇಕು ಎಂಬ ಸ್ವೇಚ್ಛೆ ಬೇಡ; ಆದರೆ ‘ಆಪತ್ಕಾಲದಲ್ಲಿ ನನ್ನ ಸಾಧನೆಯಾಗುತ್ತಿದೆಯೇ ?’ ಎಂಬುದನ್ನು ನೋಡಬೇಕು. ನಮ್ಮಿಂದ ಯಾವೆಲ್ಲ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನೂ ಸಾಧನೆಯೆಂದೇ ಮಾಡೋಣ. ಸಾಧನೆಯು ಅಂತರ್ಮನಸ್ಸಿನದ್ದಾಗಿದ್ದು ಅದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಉದಾ. ಸಂತ ಜನಾಬಾಯಿಯವರಿಗೂ ಸಾಧನೆಯನ್ನು ಮಾಡಲು ವಿರೋಧವಾಯಿತು; ಆದರೆ ಅವರ ಅಂತರ್ಮನಸ್ಸಿನಲ್ಲಿ ಸಾಧನೆಯು ನಡೆಯುತ್ತಿತ್ತು. ಹಾಗೆಯೇ ಪ್ರತಿಯೊಬ್ಬರ ಸಾಧನೆಯು ಅವರ ಪ್ರಕೃತಿಗನುಸಾರ ಬೇರೆ ಬೇರೆ ಆಗಿರುತ್ತದೆ. ‘ಮನೆಯವರು ಸಾಧನೆ ಮಾಡಬೇಕು’, ಎಂಬ ಸ್ವೇಚ್ಛೆ ಸಹ ಬೇಡ. ‘ಅವರೆಷ್ಟು ಸಾಧನೆ ಮಾಡಬೇಕು’, ನಾವು ಅಭ್ಯಾಸ ಮಾಡಿ ಅವರಿಗೆ ತಾರತಮ್ಯದಿಂದ ಮತ್ತು ನಿರಪೇಕ್ಷವಾಗಿ ಸಾಧನೆಯ ಬಗ್ಗೆ ಹೇಳಬೇಕು. ನಮಗೆ ಸಾಧನೆಯಲ್ಲಿ ಪ್ರಶ್ನೆಗಳು ಬರುತ್ತಿರುತ್ತವೆ; ಆದರೆ ಆ ಪ್ರಶ್ನೆಗಳ ಉತ್ತರಗಳು ಕೂಡಲೇ ಸಿಗುತ್ತವೆ, ಎಂದೇನಿಲ್ಲ, ಆದರೆ ಸಮಯ ಬಂದಾಗ, ದೇವರು ಉತ್ತರಗಳನ್ನು ನೀಡುತ್ತಾನೆ. ಕೆಲವೊಮ್ಮೆ ಅವುಗಳನ್ನು ಅನುಭೂತಿಗಳ ಮಾಧ್ಯಮದಿಂದ ಅಥವಾ ಇತರ ಯಾವುದಾದರೂ ಮಾರ್ಗದಿಂದ ಕೊಡುತ್ತಾನೆ. ನಾವು ಸ್ವಕೋಶದಲ್ಲಿರುತ್ತೇವೆ, ಆಗ ‘ನಾನು’ ಮತ್ತು ‘ನನ್ನ’ ಎಂಬ ಸಂಕುಚಿತ ವಿಚಾರದಲ್ಲಿರುತ್ತೇವೆ; ಆದರೆ ಯಾವಾಗ ನಾವು ಸಮಷ್ಟಿಯ ವಿಚಾರ ಮಾಡುತ್ತೇವೆಯೋ, ಆಗ ವ್ಯಾಪಕತೆಯಿಂದ ವಾತಾವರಣದಲ್ಲಿಯೂ ಒಳ್ಳೆಯ ಬದಲಾವಣೆಯ ಅರಿವಾಗುತ್ತದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೭.೧೦.೨೦೨೦)