ಪ.ಪೂ. ದೇವಬಾಬಾರವರು ಹೇಳಿದ ಉಪಾಯದ ಕಾಲಾವಧಿಯಲ್ಲಿ ಶ್ರೀರಾಮನ ನಾಮಜಪ ಮಾಡುವ ಸಾಧಕರನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸುವ ತುಳಸಿ

ವಿವಿಧ ಉಪಾಸನೆಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಪ.ಪೂ. ದೇವಬಾಬಾ

ಪರಾತ್ಪರ ಗುರು ಡಾಕ್ಟರರು ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಕಾರ್ಯವನ್ನು ಮಾಡುತ್ತಿರುವುದರಿಂದ ಅವರ ಮೇಲೆ ಸತತವಾಗಿ ಸೂಕ್ಷ್ಮದ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುತ್ತಿರುತ್ತವೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯ ಪೂರ್ಣವಾಗಲು ಪರಾತ್ಪರ ಗುರು ಡಾಕ್ಟರರು ಜೀವಂತವಿರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಮಹರ್ಷಿಗಳು ಮತ್ತು ಸಂತರು ಆಗಾಗ ಹೇಳಿದ್ದಾರೆ. ೨೦೦೭ ರಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಅನೇಕ ಬಾರಿ ಮಹಾಮೃತ್ಯುಯೋಗದ ಸಂಕಟಗಳು ಬಂದಿವೆ. ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯುಯೋಗ ದೂರವಾಗಿ ಅವರಿಗೆ ಉತ್ತಮ ಆರೋಗ್ಯ ಪ್ರಾಪ್ತವಾಗಬೇಕೆಂದು, ಮಹರ್ಷಿಗಳು ಮತ್ತು ಸಂತರು ಯಜ್ಞಯಾಗ, ಅನುಷ್ಠಾನ, ಹಾಗೆಯೇ ಕೆಲವು ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳುತ್ತಾರೆ.

ಫೆಬ್ರವರಿ ೨೦೨೦ ರಲ್ಲಿ ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿಯು ತುಂಬಾ ಕಡಿಮೆಯಾಗಿತ್ತು. ಹಾಗೆಯೇ ಅವರಿಗಾಗುವ ಶಾರೀರಿಕ ತೊಂದರೆಯು ಹೆಚ್ಚಾಗಿತ್ತು. ಪರಾತ್ಪರ ಗುರು ಡಾಕ್ಟರರಿಗೆ ಆಗುವ ತೊಂದರೆಗಳು ಕಡಿಮೆಯಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕೆಂದು ಕಿನ್ನಿಗೋಳಿಯ ಪ.ಪೂ. ದೇವಬಾಬಾ ಇವರು ಪ್ರತಿದಿನ ೧ ಗಂಟೆ ಶ್ರೀರಾಮನ ನಾಮಜಪವನ್ನು ಮಾಡಲು ಹೇಳಿದರು. ಅದಕ್ಕನುಸಾರ ೪.೨.೨೦೨೦ ರಿಂದ ೧.೬.೨೦೨೦ ಈ ಕಾಲಾವಧಿಯಲ್ಲಿ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಇತರ ಕೆಲವು ಸಾಧಕರು ಸಾಮಾಜಿಕ ಅಂತರವನ್ನು ಕಾಪಾಡಿ ಪ್ರತಿದಿನ ೧ ಗಂಟೆ ಶ್ರೀರಾಮನ ಜಪವನ್ನು ಮಾಡಿದರು. ಜಪವನ್ನು ಮಾಡುವಾಗ ಅವರ ಪಕ್ಕದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ೧-೧ ತುಳಸಿಯ ಕುಂಡವನ್ನು ಇಡಲು ಪ.ಪೂ. ದೇವಬಾಬಾರವರು ಹೇಳಿದ್ದರು. ಈ ಸಮಯದಲ್ಲಿ ಈ ನಾಲ್ಕೂ ತುಳಸಿಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನವನ್ನು ಮಾಡಲು ಅವುಗಳ ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಮುಂದೆ ನೀಡಿರುವ ದಿನಾಂಕಗಳಂದು ನಾಲ್ಕೂ ತುಳಸಿಗಳ ನಿರೀಕ್ಷಣೆಯನ್ನು ಮಾಡಲಾಯಿತು.

ಅ. ೪.೨.೨೦೨೦ ರಂದು ಉಪಾಯವನ್ನು ಆರಂಭಿಸುವ ಮೊದಲು

. ೫.೨.೨೦೨೦, ೨೪.೨.೨೦೨೦ ಮತ್ತು ೬.೩.೨೦೨೦ ಈ ದಿನಗಳಂದು ನಾಮಜಪವನ್ನು ಮಾಡುವ ಮೊದಲು ಮತ್ತು ನಾಮಜಪವನ್ನು ಮಾಡಿದ ನಂತರ

. ೨.೬.೨೦೨೦ ಈ ದಿನದಂದು ಉಪಾಯ ಪೂರ್ಣವಾದ ನಂತರ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ ಉಪಾಯದ ಕಾಲಾವಧಿಯಲ್ಲಿ ನಾಲ್ಕೂ ತುಳಸಿಗಳ ಮೇಲಾದ ಪರಿಣಾಮ : ಪರೀಕ್ಷಣೆಯಲ್ಲಿ ನಾಲ್ಕೂ ತುಳಸಿಗಳ ಮೇಲಾದ ಪರಿಣಾಮವು ಸಾಧಾರಣ ಒಂದೇ ಆಗಿದ್ದರಿಂದ ಕೆಳಗಿನ ಕೋಷ್ಟಕದಲ್ಲಿ ಎಲ್ಲವುಗಳ ನಿರೀಕ್ಷಣೆಯನ್ನು ನೀಡದೇ, ಕೇವಲ ಒಂದೇ ತುಳಸಿಯ (ತುಳಸಿ ಕ್ರ. ೨ ರ) ನಿರೀಕ್ಷಣೆಯನ್ನು ಪ್ರತಿನಿಧಿಕ ಸ್ವರೂಪದಲ್ಲಿ ಕೊಡಲಾಗಿದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ

೧. ಉಪಾಯವನ್ನು ಆರಂಭಿಸುವ ಮೊದಲು (೪.೨.೨೦೨೦ ರಂದು ನಾಮಜಪ ಮಾಡುವ ಮೊದಲು) ನಾಲ್ಕೂ ತುಳಸಿಗಳಲ್ಲಿ ಸ್ವಲ್ಪವೂ ನಕಾರಾತ್ಮಕ ಊರ್ಜೆ ಇರಲಿಲ್ಲ ಮತ್ತು ಬಹಳಷ್ಟು ಸಕಾರಾತ್ಮಕ ಊರ್ಜೆಯಿತ್ತು.

. ಎರಡನೇಯ ದಿನ (೫.೨.೨೦೨೦ ರಂದು) ನಾಮಜಪ ಮಾಡುವ ಮೊದಲು ನಾಲ್ಕೂ ತುಳಸಿಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯಿತ್ತು. ನಾಮಜಪ ಮಾಡಿದ ನಂತರ ಅವುಗಳಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಬಹಳಷ್ಟು ನಕಾರಾತ್ಮಕ ಊರ್ಜೆ ಕಂಡು ಬಂದಿತು.

ಸೌ. ಮಧುರಾ ಕರ್ವೆ

೩. ೨೪.೨.೨೦೨೦ ರಂದು ನಾಮಜಪ ಮಾಡುವ ಮೊದಲು ನಾಲ್ಕೂ ತುಳಸಿಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆಯಿತ್ತು ಮತ್ತು ತುಳಸಿ ಕ್ರ. ೨ ನ್ನು ಹೊರತುಪಡಿಸಿ ಇತರ ಮೂರು ತುಳಸಿಗಳಲ್ಲಿ ಸಕಾರಾತ್ಮಕ ಊರ್ಜೆಯೂ ಇತ್ತು. ನಾಮಜಪ ಮಾಡಿದ ನಂತರ ನಾಲ್ಕೂ ತುಳಸಿಗಳಲ್ಲಿ ನಕಾರಾತ್ಮಕ ಊರ್ಜೆಯು ಹೆಚ್ಚಳವಾಯಿತು. ತುಳಸಿ ಕ್ರ. ೨ ನ್ನು ಬಿಟ್ಟು ಇತರ ಮೂರೂ ತುಳಸಿಗಳಲ್ಲಿ ಸಕಾರಾತ್ಮಕ ಊರ್ಜೆಯು ಕಡಿಮೆ ಅಥವಾ ಇಲ್ಲವಾಯಿತು (೨೪.೨.೨೦೨೦ ರಂದು ನಾಮಜಪದ ನಂತರ ತುಳಸಿ ಕ್ರ. ೨ ಸಂಪೂರ್ಣ ಒಣಗಿ ಹೋಯಿತು. ಆದ್ದರಿಂದ ಆ ಕುಂಡದಲ್ಲಿ ಹೊಸ ತುಳಸಿಯನ್ನು ನೆಡಲಾಯಿತು.)

೪. ೬.೩.೨೦೨೦ ರಂದು ನಾಮಜಪ ಮಾಡುವ ಮೊದಲು ನಾಲ್ಕೂ ತುಳಸಿಗಳಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಊರ್ಜೆಗಳು ಇದ್ದವು. ನಾಮಜಪ ಮಾಡಿದ ನಂತರ ಅವುಗಳಲ್ಲಿನ ಎರಡೂ ಊರ್ಜೆಗಳಲ್ಲಿ ಸ್ವಲ್ಪ ಹೆಚ್ಚಳವಾಯಿತು.

೫. ೨.೬.೨೦೨೦ ರಂದು ನಾಲ್ಕೂ ತುಳಸಿಗಳಲ್ಲಿ ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇರಲಿಲ್ಲ, ಅದರ ಬದಲು ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯಿತ್ತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ತುಳಸಿಯ ಮಹತ್ವ : ತುಳಸಿಯಲ್ಲಿ ಶ್ರೀವಿಷ್ಣುತತ್ತ್ವವಿರುತ್ತದೆ. ತುಳಸಿಯು ಸತತವಾಗಿ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸುತ್ತಿರುವುದರಿಂದ ಅದು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧ ಮತ್ತು ಪವಿತ್ರವನ್ನಾಗಿ ಮಾಡುತ್ತದೆ. (ತುಳಸಿಯ ಗಿಡ ೨೪ ಗಂಟೆ ಪ್ರಾಣವಾಯುವನ್ನು ಬಿಡುತ್ತದೆ ಎಂದು ವಿಜ್ಞಾನವೂ ಹೇಳುತ್ತದೆ.) ವಾತಾವರಣದಲ್ಲಿರುವ ರಜ-ತಮದಿಂದ ಪ್ರತಿಯೊಂದು ವಸ್ತುವಿನ ಮೇಲೆ ಪರಿಣಾಮವಾಗುತ್ತಿರುತ್ತದೆ. ತುಳಸಿಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಸ್ಪಂದನಗಳಿಂದ ವಾತಾವರಣದಲ್ಲಿನ ರಜ-ತಮ ನಾಶವಾಗುತ್ತದೆ. ಸ್ವಲ್ಪದರಲ್ಲಿ, ತುಳಸಿಯು ಸಾತ್ತ್ವಿಕ ವನಸ್ಪತಿಯಾಗಿದ್ದು ಅದು ಸತತ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಆದ್ದರಿಂದ ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ಪ್ರವೇಶದ್ವಾರದ ಹತ್ತಿರ ತುಳಸಿ ವೃಂದಾವನವಿರುತ್ತಿತ್ತು. ಮನೆಯ ಸ್ತ್ರೀಯರು ಭಕ್ತಿಭಾವದಿಂದ ತುಳಸಿಯ ಪೂಜೆಯನ್ನು ಮಾಡಿ ಅದಕ್ಕೆ ನಮಸ್ಕಾರ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದರು. ಹಾಗೆಯೇ ಸಾಯಂಕಾಲದ ಸಮಯದಲ್ಲಿ ತುಳಸಿಯ ಎದುರು ದೀಪವನ್ನು ಹಚ್ಚುತ್ತಿದ್ದರು. ಇಂದಿನ ವಿಜ್ಞಾನಯುಗದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಈ ಪರಂಪರೆಯನ್ನು ರಕ್ಷಿಸಲಾಗಿದೆ.

೨ ಆ. ಸಂತರು ಮತ್ತು ಸಾಧಕರು ಮಾಡಿದ ಶ್ರೀರಾಮನ ಜಪವು ಪ್ರತಿದಿನ ದೇವರಿಗೆ ತಲುಪುವುದು : ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಇತರ ಸಾಧಕರು ೪.೨.೨೦೨೦ ರಿಂದ ಪ್ರತಿದಿನ ೧ ಗಂಟೆ ಶ್ರೀರಾಮನ ಜಪವನ್ನು ಮಾಡುತ್ತಿದ್ದರು. ಇದರಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಶ್ರೀರಾಮ ಮತ್ತು ಶ್ರೀಕೃಷ್ಣನ ಚಿತ್ರಗಳ ಕಡೆಗೆ ನೋಡಿ ಜಪವನ್ನು ಮಾಡುತ್ತಿದ್ದರು ಮತ್ತು ನಾಲ್ಕೂ ದಿಕ್ಕುಗಳಲ್ಲಿ ಕುಳಿತ ಸಾಧಕರು ಸದ್ಗುರು ಡಾ. ಮುಕುಲ ಗಾಡಗೀಳ ಇವರತ್ತ ನೋಡಿ ಜಪವನ್ನು ಮಾಡುತ್ತಿದ್ದರು. ಶ್ರೀರಾಮನ ಜಪವನ್ನು ಮಾಡುವಾಗ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ವೈಶಿಷ್ಟ್ಯ ಪೂರ್ಣ ಅನುಭೂತಿಗಳು ಬಂದವು. ಅವರು, ‘ಸಾಧಕರು ಮಾಡುತ್ತಿರುವ ಜಪವು ತಮ್ಮ ಕಡೆಗೆ ಬರುತ್ತಿತ್ತು ಮತ್ತು ನಂತರ ಅದು ಒಟ್ಟಾಗಿ ದೇವರಿಗೆ ತಲುಪುತ್ತಿತ್ತು’, ಎಂದು ಹೇಳಿದರು. ಹೀಗೆ ಪ್ರತಿದಿನ ನಡೆಯುತ್ತಿತ್ತು. ಈ ಜಪವು ಅತ್ಯಂತ ಭಾವಪೂರ್ಣವಾಗಿ ಆಗುತ್ತಿತ್ತು. ನಾವೆಲ್ಲರೂ ಕಣ್ಣುಗಳನ್ನು ತೆರೆದಿಟ್ಟು ನಾಮಜಪವನ್ನು ಮಾಡು ತ್ತಿದ್ದೆವು. ಕಣ್ಣುಗಳನ್ನು ಮುಚ್ಚಿ ನಾಮಜಪವನ್ನು ಮಾಡಿದರೆ ಅದರ ಲಾಭವು ಜಪ ಮಾಡುವವನಿಗೆ ಸಿಗುತ್ತದೆ. ಈ ನಾಮಜಪವನ್ನು ಸಮಷ್ಟಿಗಾಗಿ ಮಾಡಬೇಕಾಗಿದ್ದರಿಂದ ಅದನ್ನು ಕಣ್ಣುಗಳನ್ನು ತೆರೆದಿಟ್ಟು ಮಾಡಲಾಯಿತು

೨ ಇ. ಶ್ರೀರಾಮನ ನಾಮಜಪವನ್ನು ಮಾಡಿದ ನಂತರ ತುಳಸಿಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದರ ಕಾರಣ : ಪ್ರತಿದಿನ ಉಪಾಯಗಳ ಸಮಯದಲ್ಲಿ ಸಾಧಕರ ನಾಮಜಪದಲ್ಲಿ ವಿಘ್ನಗಳನ್ನು ತರಲು ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಅವರ ಮೇಲೆ ಆಕ್ರಮಣಗಳನ್ನು ಮಾಡುತ್ತಿದ್ದವು. ಆ ಆಕ್ರಮಣಗಳನ್ನು ತುಳಸಿಯು ತಾನು ಸಹಿಸಿಕೊಂಡು ಸಾಧಕರ ರಕ್ಷಣೆಯನ್ನು ಮಾಡುತ್ತಿತ್ತು. ಕೆಟ್ಟ ಶಕ್ತಿಗಳು ಮಾಡಿದ ಆಕ್ರಮಣಗಳ ತೀವ್ರತೆಯು ಬಹಳ ಹೆಚ್ಚಿದ್ದು ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ತುಳಸಿಗಳ ಸುತ್ತಲೂ ತೊಂದರೆದಾಯಕ ಶಕ್ತಿಯ (ನಕಾರಾತ್ಮಕ ಸ್ಪಂದನಗಳ) ಆವರಣವು ನಿರ್ಮಾಣವಾಗುತ್ತಿತ್ತು ಅಥವಾ ಅದರಲ್ಲಿ ಹೆಚ್ಚಳವಾಗುತ್ತಿತ್ತು.

೨ ಈ. ೨೪.೨.೨೦೨೦ ಈ ದಿನ ನಾಮಜಪದ ನಂತರ ತುಳಸಿ ಕ್ರ. ೨ ಸಂಪೂರ್ಣ ಒಣಗಿ ಹೋಗುವುದು : ೨೪.೨.೨೦೨೦ ರಂದು ಕೆಟ್ಟ ಶಕ್ತಿಗಳೊಂದಿಗೆ ನಡೆದ ಭೀಕರ ಸೂಕ್ಷ್ಮಯುದ್ಧದಲ್ಲಿ ತುಳಸಿ ಕ್ರ. ೨ ಪ್ರಾಣಾರ್ಪಣೆ ಮಾಡಿ ಸಾಧಕರ ರಕ್ಷಣೆಯನ್ನು ಮಾಡಿತು. ಆದ್ದರಿಂದ ನಾಮಜಪದ ನಂತರ ಅದು ಸಂಪೂರ್ಣ ಒಣಗಿ ಹೋಯಿತು. ತುಳಸಿಯು ಮೂಲದಲ್ಲಿ ಸಾತ್ತ್ವಿಕ ವನಸ್ಪತಿಯಾಗಿದ್ದು ಅದರಲ್ಲಿ ಶ್ರೀವಿಷ್ಣುತತ್ತ್ವ (ಚೈತನ್ಯ) ಇರುತ್ತದೆ. ತುಳಸಿ ಕ್ರ. ೨ ಒಣಗಿದ್ದರೂ ಅದರಲ್ಲಿ ಚೈತನ್ಯ ಇದ್ದುದರಿಂದ ಅದರಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು. (ತುಳಸಿ ಕ್ರ. ೨ ಇದು ಒಣಗಿ ಹೋದುದರಿಂದ ಅದರ ಜಾಗದಲ್ಲಿ ಹೊಸ ತುಳಸಿಯನ್ನು ನೆಡಲಾಯಿತು.)

೨ ಉ. ೬.೩.೨೦೨೦ ರಂದು ನಾಮಜಪದ ನಂತರ ತುಳಸಿಗಳಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ಸ್ವಲ್ಪ ಹೆಚ್ಚಳವಾಗಿರುವುದರ ಕಾರಣ : ೬.೩.೨೦೨೦ ರಂದು ಸೂಕ್ಷ್ಮ ಯುದ್ಧದಲ್ಲಿ ಕೆಟ್ಟ ಶಕ್ತಿಗಳಿಂದ ಪ್ರಕ್ಷೇಪಿತವಾದ ರಜ-ತಮದಿಂದಾಗಿ ತುಳಸಿಗಳ ಸುತ್ತಲಿನ ತೊಂದರೆದಾಯಕ ಸ್ಪಂದನಗಳಲ್ಲಿ ಸ್ವಲ್ಪ ಹೆಚ್ಚಳವಾಯಿತು, ಆದರೆ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯು ಕಡಿಮೆ ಅಥವಾ ಪೂರ್ಣ ಇಲ್ಲದಂತಾಗದೇ, ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಯಿತು. ಇದರಿಂದ ಕೆಟ್ಟ ಶಕ್ತಿಗಳ ತೀವ್ರತೆಯು ಮೊದಲಿನ ತುಲನೆಯಲ್ಲಿ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ.

೨ ಊ. ೨.೬.೨೦೨೦ ರಂದು ತುಳಸಿಗಳಲ್ಲಿ ನಕಾರಾತ್ಮಕ ಊರ್ಜೆಯಿರದೇ, ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡು ಬರುವುದು : ೨.೬.೨೦೨೦ ರಂದು ನಾಲ್ಕೂ ತುಳಸಿಗಳಲ್ಲಿ ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇರಲಿಲ್ಲ ಮತ್ತು ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಇದರ ಕಾರಣವೆಂದರೆ, ೧.೬.೨೦೨೦ ಈ ದಿನದ ನಾಮಜಪದ ನಂತರ ಉಪಾಯಗಳ ಉದ್ದೇಶವು ಪೂರ್ತಿಯಾದುದರಿಂದ ಅನಂತರ ಜಪ ಮಾಡುವುದನ್ನು ನಿಲ್ಲಿಸಲಾಯಿತು. ಆದುದರಿಂದ ಕೆಟ್ಟ ಶಕ್ತಿಗಳೊಂದಿಗೆ ಹೋರಾಡುವ ತುಳಸಿಗಳ ಕಾರ್ಯವು ಕೊನೆಗೊಂಡಿತು. ಮರುದಿನದಿಂದ ತುಳಸಿಗಳ  ನಿತ್ಯದ ಕಾರ್ಯ, ಅಂದರೆ ದೇವತೆಯ ತತ್ತ್ವವನ್ನು ಗ್ರಹಣ ಮಾಡಿ ಅದನ್ನು ವಾತಾವರಣದಲ್ಲಿ ಪ್ರಕ್ಷೇಪಿಸಿ ವಾತಾವರಣದ ಶುದ್ಧಿ ಮಾಡುವ ಕಾರ್ಯವು ಆರಂಭವಾಯಿತು. ಸ್ವಲ್ಪದರಲ್ಲಿ, ಪ.ಪೂ. ದೇವಬಾಬಾರವರು ಹೇಳಿದ ಉಪಾಯದ ಕಾಲಾವಧಿಯಲ್ಲಿ ಶ್ರೀರಾಮನ ನಾಮಜಪವನ್ನು ಮಾಡುವ ಸಾಧಕರ ರಕ್ಷಣೆಯನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ತುಳಸಿಗಳು ಹೇಗೆ ಮಾಡಿದವು, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಗಮನಕ್ಕೆ ಬಂದಿತು. ಈ ವೈಶಿಷ್ಟ್ಯಪೂರ್ಣ ಮತ್ತು ಪ್ರಭಾವಿ ಉಪಾಯವನ್ನು ಹೇಳುವ ಪ.ಪೂ. ದೇವಬಾಬಾರವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧೨.೨೦೨೦)